ಹೊತ್ತಾಯಿತು. ಥೆನಾರ್ಡಿಯರನು ತನ್ನ ಮನಸ್ಸಿನಲ್ಲಿ ಉಂಟಾಗಿದ್ದ ಭೀತಿ ಸಂದೇಹಗಳೆಲ್ಲವನ್ನೂ ಅಡಗಿಸಿಕೊಂಡು ಆ ಬಂದಿಯ ಸಮೀಪಕ್ಕೆ ಬರುತ್ತಿದ್ದನು.
‘ ಅದೇನೋ ಬಿತ್ತು’ ಎಂದು ಅವನ ಹೆಂಡತಿಯು ಕೂಗಿದಳು. ಏನದು ?’ ಎಂದು ಗಂಡನು ಕೇಳಿದನು.
ಆ ಸ್ತ್ರೀಯು ಫಕ್ಕನೆ ಮುಂದಕ್ಕೆ ಬಂದು, ಗಾರೆಯ ಚೂರ ನ್ನಿಟ್ಟು ಸುತ್ತಿದ ಕಾಗದದ ಸುರುಳೆಯನ್ನು ತೆಗೆದು ಗಂಡನ ಕೈಗೆ ಕೊಟ್ಟಳು.
ಥೆನಾರ್ಡಿಯರನ್ನು ಅತ್ಯಾತುರದಿಂದ ಅದನ್ನು ಬಿಚ್ಚಿ ದೀಪದ ಬಳಿಯಲ್ಲಿ ಎತ್ತಿ ಹಿಡಿದು ನೋಡಿ, ತನ್ನ ಹೆಂಡತಿಗೆ ಸಂಜ್ಞೆ ಮಾಡಲು ಅವಳು ಬೇಗನೆ ಬಳಿಗೆ ಬಂದಳು. ಆಗ ಅವಳಿಗೆ ಅದರಲ್ಲಿ ಬರೆದಿದ್ದ ಪಙ್ಕ್ತಿಯನ್ನು ತೋರಿಸಿ, ಅವನು ಮೆಲ್ಲನೆ, “ ಬೇಗ ಏಣಿ ಯನ್ನು ತಾ, ಬಲಿಪ್ರಾಣಿಯನ್ನು ಬೋನಿನಲ್ಲಿಯೇ ಬಿಟ್ಟು, ಸ್ಥಳವನ್ನು ಬಿಡಬೇಕು !’ ಎಂದನು.
ಅದಕ್ಕೆ ಅವನ ಹೆಂಡತಿಯು, ಏನು ? ಇವನ ಕುತ್ತಿಗೆಯನ್ನು ಕತ್ತರಿಸದೆಯೇ ಹೋಗುವುದೇ ?’ ಎಂದಳು.
‘ಅದಕ್ಕೆ ಸಮಯವಿಲ್ಲ,’ ಎಂದು ಅವನು ಹೇಳಲು, ಅಲ್ಲಿ ದ್ದವರಲ್ಲಿ ಒಬ್ಬನು, ‘ಯಾವ ಮಾರ್ಗವಾಗಿ ಹೋಗುವುದು,’ ಎಂದು ಕೇಳಿದನು.
ಥೆನಾರ್ಡಿಯರನ್ನು, 1 ಕಿಟಿಕಿಯ ಮಾರ್ಗವಾಗಿಯೇ ಹೋಗ ಬೇಕು. ಹುಡುಗಿಯು ಕಿಟಿಕಿಯಿಂದಲೇ ಕಲ್ಲನ್ನು ಎಸೆದಳು. ಇದರಿಂದ ಆ ಕಡೆಯಲ್ಲಿ ಯಾರೂ ಈ ಮನೆಯ ಮೇಲೆ ಕಾವಲಿಲ್ಲ ವೆಂದು ಕಾಣುವುದು,’ ಎಂಬದಾಗಿ ಉತ್ತರ ಕೊಟ್ಟನು.
ಆ ಬಂದಿಯನ್ನು ಹಿಡಿದಿದ್ದ ಪಟಿಂಗರು ಅವನನ್ನು ಬಿಟ್ಟು ಬಿಟ್ಟರು. ಕಣ್ಣು ಮಿಟಿಕಿಸುವಷ್ಟರಲ್ಲಿ ನೂಲೇಣಿಯನ್ನು ಎರಡು ಕಬ್ಬಿಣದ ಕೊಂಡಿಗಳಿಂದ ಕಂಬಿಗಳಿಗೆ ತಗುಲಿಸಿಟ್ಟು, ಕಿಟಿಕಿಯ ಹೊರಭಾಗಕ್ಕೆ ಬಿಚ್ಚಿ ಎಸೆದರು.
ಆ ಬಂದಿಯು ತನ್ನ ಸುತ್ತಲೂ ಏನೇನು ನಡೆಯುತ್ತಿರುವು. ದೆಂಬುದನ್ನು ಗಮನಿಸಲೇ ಇಲ್ಲ. ಅವನು ಸ್ವಪ್ನದಲ್ಲಿಯೋ ಧ್ಯಾನದಲ್ಲಿ ಇದ್ದಂತೆ ಕಂಡನು.
ನೂಲೇಣಿಯು ಸಿದ್ದವಾದ ಕೂಡಲೇ ಥೆನಾರ್ಡಿಯರು, ‘ ಬಾ ಪಿಯೋ,’ ಎಂದು ಕೂಗಿಕೊಂಡು ಕಿಟಿಕಿಯ ಬಳಿಗೆ ನುಗ್ಗಿದನು.
ಆದರೆ ಅವನು ಹೊರಗೆ ಕಾಲಿಡುವಷ್ಟರೊಳಗೆ, ಅಲ್ಲಿದ್ದವರಲ್ಲಿ ಒಬ್ಬನು ಅವನ ಕೊರಳ ಪಟ್ಟಿಯನ್ನು ಬಲವಾಗಿ ಹಿಡಿದು ನಿಲ್ಲಿಸಿ, ‘ ಎಲಾ ಕಳ್ಳ ಮುದುಕಾ ! ನಿಲ್ಲು ; ನಾವು ಮೊದಲು ಹೋಗುವೆವು, ನಮ್ಮ ಹಿಂದೆ ನೀನು,’ ಎಂದನು.
‘ ಅಹುದು ! ನಮ್ಮ ಹಿಂದೆ ನೀನು,’ ಎಂದು ಉಳಿದ ತುಂಟರೂ ಆರ್ಭಟಿಸಿದರು. ಥೆನಾರ್ಡಿಯರನ್ನು, ‘ ಅಯ್ಯೋ, ನೀವು ಮಕ್ಕ ಳಾಟವಾಡುತ್ತಿರುವಿರಿ, ನಮಗೆ ಇದರಲ್ಲೇ ಕಾಲಹರಣವಾಗು ತ್ತಿದೆ. ಪೊಲೀಸಿನವರು ನಮ್ಮನ್ನು ಬೆನ್ನಟ್ಟಿದ್ದಾರೆ,’ ಎಂದನು.
ಆಗ ಆ ತುಂಟರಲ್ಲಿ ಒಬ್ಬನು, ‘ ಒಳ್ಳೆಯದು ! ನಮ್ಮಲ್ಲಿ ಯಾರು ಮೊದಲು ಹೋಗಬೇಕೆಂಬುದಕ್ಕೆ, ಚೀಟಿಹಾಕಿ, ಅದೃಷ್ಟ ಪರೀಕ್ಷೆ ಮಾಡೋಣ,’ ಎಂದನು,
ಥೆನಾರ್ಡಿಯರನು, ” ಎಲವೋ ! ನೀವೇನು ಹುಚ್ಚರೇ ? ನಿಮಗೆ ಬುದ್ದಿ ಪಲ್ಲಟವಾಗಿದೆಯೇ ? ಇದರಿಂದ ಕಾಲವನ್ನು ಕಳೆದು ಬಿಡುವುದೇ ಅಲ್ಲವೇ ? ಚೀಟಿಯಂತೆ ! ಅದೃಷ್ಟ ಪರೀಕ್ಷೆಯಂತೆ ! ಈ ಸಣ್ಣ ಕೆಲಸಕ್ಕೆ ! ಇದಕ್ಕಾಗಿ ನಮ್ಮ ಹೆಸರುಗಳನ್ನು ಬರೆಯು ವುದು ! ಟೋಪಿಯಲ್ಲಿ ಹಾಕುವುದು …’
“ ನನ್ನ ಟೋಪಿಯನ್ನು ಕೊಡಲೇ ?’ ಎಂದ ಶಬ್ದವು ಬಾಗಿಲ ಕಡೆಯಿಂದ ಕೇಳಿಬಂತು. ಎಲ್ಲರೂ ತಿರುಗಿ ನೋಡಿದರು. ಅದು ಯಾರು ? ಜೇವರ್ಟನು ! ಕೈಯಲ್ಲಿ ಟೋಪಿಯನ್ನು ಹಿಡಿದು, ನಗು, ಮುಂದಕ್ಕೆ ಚಾಚಿದನು.
ಅವನು ಸರಿಯಾದ ಸಮಯಕ್ಕೇ ಬಂದನು.
ಆ ಗಾಬರಿಬಿದ್ಧ ತುಂಟರು ತಾವು ಓಡಿಹೋಗಲು ಯತ್ನಿ ಸುವ ಆತುರದಲ್ಲಿ ಎಲ್ಲೆಲ್ಲಿಯೋ ಎಸೆದುಬಿಟ್ಟಿದ್ದ ತಮ್ಮ ಆಯುಧ ಗಳಿಗಾಗಿ ನುಗಿ ಓಡಿಯಾಡಿದರು. ನೋಡುವುದಕ್ಕೆ ಭಯಂಕರ ರಾಗಿದ್ದ ಈ ಏಳು ಮಂದಿಯ ಅರ್ಧ ಕ್ಷಣದೊಳಗಾಗಿ, ಪ್ರತಿಯೊ ಬ್ಬರೂ ಕೈಯಲ್ಲಿ ಒಂದೊಂದು ಆಯುಧವನ್ನು ಹಿಡಿದು ಆತ್ಮರಕ್ಷಣೆ ಗಾಗಿ ಗುಂಪುಕಟ್ಟಿ ನಿಂತರು. ಥೆನಾರ್ಡಿಯರನ ಹೆಂಡತಿಯು ಕಿಟಕಿಯ ಮೂಲೆಯಲ್ಲಿದ್ದ ಒಂದು ಹಾಸುಗಲ್ಲನ್ನು ಎತ್ತಿ ಕೊಂಡಳು.
ಜೇವರ್ಟನು ಮತ್ತೆ ಟೋಪಿಯನ್ನು ತಲೆಗೆ ಧರಿಸಿಕೊಂಡು ಕೈಗಳನ್ನು ಕಟ್ಟಿ, ಕಂಕುಳಲ್ಲಿ ಬೆತ್ತವನ್ನೂ ಒರೆಯಲ್ಲಿ ಕತ್ತಿಯನ್ನೂ ಇಟ್ಟುಕೊಂಡು, ಕೊಠಡಿಯೊಳಕ್ಕೆ ಹೆಜ್ಜೆಯಿಟ್ಟನು.
ಜೇವರ್ಟನು ಕೂಗಿದೊಡನೆಯೇ ಬಿಚ್ಚುಕತ್ತಿ, ಗಂಡು ಗೊಡಲಿ, ದೊಣ್ಣೆಗಳನ್ನು ಹಿಡಿದಿದ್ದ ಪೊಲೀಸ್ ಅಧಿಕಾರಿಗಳ ಒಂದು ಸೈನ್ಯವು ಒಳಗೆ ನುಗ್ಗಿತು. ಸಿಪಾಯಿಗಳು ಈ ತುಂಟ ರನ್ನು ಹಿಡಿದು ಕಟ್ಟಿದರು. ಸಣ್ಣ ದೀಪದ ಬೆಳಕಿನಿಂದ ಮಂಕು ಮಂಕಾಗಿದ್ದ ಆ ಗವಿಯಲ್ಲಿ ಜನರ ಗುಂಪಿನ ನೆರಳು ತುಂಬಿತ್ತು.
‘ಎಲ್ಲರಿಗೂ ಕೈಕೆಳಗಳನ್ನು ಹಾಕಿ,’ ಎಂದು ಜೇವರ್ಟನು ಕೂಗಿದನು. ‘ಹಾಗಾದರೆ ಬನ್ನಿ ,’ ಎಂದು ಒಂದು ಶಬ್ದವು ಕೇಳಿ ಸಿತು. ಅದು ಗಂಡಸಿನ ಧ್ವನಿಯಲ್ಲ. ಆದರೆ ಇದು ಹೆಂಗಸಿನ ಧ್ವನಿ ಎಂದು ಯಾರೂ ಹೇಳುವ ಹಾಗಿರಲಿಲ್ಲ.
ಥೆನಾರ್ಡಿಯರನ ಪತ್ನಿ ಯು ಕಿಟಿಕಿಯ ಒಂದು ಮೂಲೆಯಲ್ಲಿ ಅಡಗಿಕೊಂಡ್ಡಿಳು, ಅವಳೇ ಆಗತಾನೇ ಈ ರೀತಿ ಆರ್ಭಟಿಸಿ ಕೂಗಿದವಳು.
ಅವಳು ತಾನು ಹೊದೆದಿದ್ದ ಶಾಲನ್ನು ತೆಗೆದುಹಾಕಿ, ತಲೆಗೆ ಟೋಪಿಯನ್ನು ಧರಿಸಿದ್ದಳು. ಅವಳ ಗಂಡನು ಅವಳ ಹಿಂದೆಯೇ ಕುಕ್ಕರಿಸಿ, ಕೆಳಗೆ ಬಿದ್ದಿದ ಶಾಲಿನೊಳಗೆ ಅಡಗಿಕೊಂಡನು. ಅವಳು ಅವನಿಗೆ ಮರೆಯಾಗಿ ಎರಡು ಕೈಗಳಿಂದಲೂ ಹಾಸುಗಲ್ಲನ್ನು ತನ್ನ ತಲೆಯ ಮೇಲಡೆಯಲ್ಲಿ ಎತ್ತಿ ಹಿಡಿದು, ಬಂಡೆಯನ್ನು ಎಸೆಯುವ ರಾಕ್ಷಸಿಯಂತೆ ನಿಂತುಕೊಂಡು, ‘ ಎಚ್ಚರಿಕೆ,’ ಎಂದು ಕೂಗಿದಳು.
ಅವರೆಲ್ಲರೂ ಆ ಕೊಠಡಿಯಲ್ಲಿ ಹಿಂದುಗಡೆ ಗುಂಪಾಗಿ ಸೇರಿ ಕೊಂಡರು. ಮಧ್ಯ ಭಾಗದಲ್ಲಿ ವಿಸ್ತಾರವಾದ ಸ್ಥಳವಿತ್ತು. ಥೆನಾರ್ಡಿಯರಸ ಹೆಂಡತಿಯ ಆ ತುಂಟರ ಕಡೆಗೆ ಒಂದು ಸಲ ನೋಡಿದಳು. ಈ ವೇಳೆಗೆ ಪೊಲೀಸಿನವರು ಎಲ್ಲರನ್ನೂ ಬಂಧಿಸಿದ್ದರು ಅವಳು ಒಳಗಂಟಲ ಕರ್ಕಶ ಧ್ವನಿಯಿಂದ ಹೇಡಿಗಳು ‘ ಎಂದು ಗೊಣಗಿದಳು.
‘ ಜೇವರ್ಟನು ನಕ್ಕು, ಆ ಕೊಠಡಿಯ ಮಧ್ಯಭಾಗಕ್ಕೆ ಹೋದನು. ಇದೆಲ್ಲವನ್ನೂ ಥೆನಾರ್ಡಿಯರನ ಪತ್ನಿಯು ನೆಟ್ಟ ದೃಷ್ಟಿಯಿಂದ ನೋಡುತ್ತಿದ್ದಳು.
ಆಗ ಅವಳ , ‘ ಹತ್ತಿರ ಬರಬೇಡ, ಆಚೆಗೆ ಹೋಗು , ಇಲ್ಲ ವಾದರೆ ನಿನ್ನನ್ನು ಜಜ್ಜಿಬಿಡುತ್ತೇನೆ,’ ಎಂದು ಗರ್ಜಿಸಿದಳು.
ಅದಕ್ಕೆ ಜೆವರ್ಟನು, ‘ಆಹಾ ! ಇದೆಂತಹ ಫಿರಂಗಿ ಯಂತಹ ಹೆಂಗಸು ! ತಾಯಾ, ನಿನಗೆ ಪುರುಷನಂತೆ ಗಡ್ಡವಿದೆ ; ಆದರೆ ನನಗೆ ಹೆಂಗಸಿನಂತೆ ಉಗುರುಗಳಿವೆ,’ ಎಂದು ಹೇಳುತ್ತ ಮಂದು ಮುಂದಕ್ಕೆ ಹೋಗುತ್ತಲೇ ಇದ್ದನು.
ಥೆನಾರ್ಡಿಯರನ ಹೆಂಡತಿಯು ಭಯಂಕರವಾಗಿ ತಲೆಗೂದ ಲನ್ನು ಕೆದರಿಕೊಂಡು, ಕಾಲುಗಳನ್ನು ಜೋಡಿಸಿ, ಹಿಂದಕ್ಕೆ ಬಾಗಿ, ಆ ಹಾಸುಗಲ್ಲನ್ನು ಜೇವರ್ಟನ ತಲೆಯ ಕಡೆಗೆ ಬಿರನೆ ಎಸೆದಳು. ಜೇವರ್ಟನು ತಟ್ಟನೆ ಬಗ್ಗಿದನು, ಕಲ್ಲು ಅವನ ತಲೆಯ ಮೇಲೆ ಹಾದು ಹೋಗಿ ಎದುರು ಗೋಡೆಗೆ ಬಡಿದು, ಒಂದು ದೊಡ್ಡ ಗಾರೆಯ ಹೆಂಟೆಯನ್ನು ಕೆಡಹಿ, ಮೂಲೆಯ ಕಡೆಯಿಂದ ಹಿಂದಿರುಗಿ, ಪುಟಹಾರಿ, ಕೊಠಡಿಯಲ್ಲೆಲ್ಲಾ ತಿರುಗಿತು. ದೈವಯೋಗದಿಂದ ಏನೂ ಅಪಾಯ ಆಗದೆ ಕಡೆಗೆ ಜೇವರ್ಟನ ಹಿಂಗಾಲಿನ ಹತ್ತಿರ ಬಂದು ಬಿದ್ದಿತು.
ಈ ಸಮಯಕ್ಕೆ ಜೇ ವರ್ಟನು ಥೆನಾರ್ಡಿಯರ್ ದಂಪತಿಗಳ ಬಳಿಗೆ ಬಂದಿದ್ದನು. ಅವನ ದೊಡ್ಡದಾದ ಒಂದು ಹಸ್ತವು ಆ ಹೆಂಗಸಿನ ಭುಜದ ಮೇಲೆಯ ಮತ್ತೊಂದು ಅವಳ ಗಂಡನ ತಲೆಯ ಮೇಲೆಯೇ ಬಿದ್ದ ವು. ಆ ಕೂಡಲೆ ಅವನು, ” ಕೈಕೊಳ ಗಳು !’ ಎಂದು ಕೂಗಿದನು, ಪೊಲೀಸ್ ಅಧಿಕಾರಿಗಳು ಗುಂಪಾಗಿ ಬಂದು ಒಂದೆರಡು ಕ್ಷಣಗಳಲ್ಲಿ ಜೇವರ್ಟನ ಆಜ್ಞೆಯನ್ನು ನಡೆ ಸಿದರು.
ಆಗತಾನೆ ಜೇರ್ವಟನು ಈ ತುಂಟರು ಹಿಡಿದಿದ್ದ ಬಂದಿಯನ್ನು ಕಂಡನು. ಆ ಬಂದಿಯು ಪೊಲೀಸಿನವರು ಬಂದುದು ಮೊದಲಾಗಿ ಒಂದು ಮಾತನ್ನೂ ಆಡದೆ, ತಲೆಯನ್ನು ತಗ್ಗಿಸಿ ನಿಂತಿದ್ದನು.
ಜೇವರ್ಟನು, ‘ಮಾನ್ಸಿಯುರನನ್ನು ಬಿಚ್ಚಿ; ಯಾರನ್ನೂ ಹೊರಗೆ ಹೋಗಲು ಬಿಡಬೇಡಿ,’ ಎಂದನು.
ಹೀಗೆ ಹೇಳಿ, ಅವನು ಅಧಿಕಾರ ದರ್ಸದಿಂದ ಮೇಜಿನ ಮುಂದೆ ಕುಳಿತನು. ಅದರ ಮೇಲೆ ದೀಪವೂ ಲೇಖನ ಸಾಮಗ್ರಿಗಳೂ ಇದ್ದವು. ತನ್ನ ಜೇಬಿನಿಂದ ಮುದ್ರೆಹೊಡೆದಿದ್ದ ಕಾಗದವನ್ನು ತೆಗೆದು ಅವನು ತನ್ನ ವರದಿಯನ್ನು ಬರೆಯಲಾರಂಭಿಸಿದನು.
ಪದ್ಧತಿಯಂತೆ ಎಲ್ಲ ವರದಿಗಳಲ್ಲಿಯೂ ಬರೆಯಬೇಕಾಗಿದ್ದ ಒಕ್ಕಣೆಗಳ ಪಙ್ಕ್ತಿಯನ್ನು ಬರೆದು, ತಲೆಯನ್ನೆತ್ತಿ, ‘ ಈ ಸಭ್ಯ ಜನರು ಕಟ್ಟಿ ಹಾಕಿದ್ದ ಆ ಬಂದಿವಾನನನ್ನು ಮುಂದಕ್ಕೆ ಕರೆತನ್ನಿ,’ ಎಂದನು.
ಅಧಿಕಾರಿಗಳು ಸುತ್ತಲೂ ನೋಡಿದರು. ಜೇವರ್ಟನ್ನು, ‘ ಒಳ್ಳೆಯದು ! ಈಗ ಅವನಲ್ಲಿ ? ‘ ಎಂದನು.
ತುಂಟರು ಹಿಡಿದಿದ್ದ ಬಂದಿಯು ಮಾಯವಾಗಿದ್ದನು. ಬಾಗಿಲಲ್ಲಿ ಕಾವಲಿತ್ತು. ಆದರೆ ಕಿಟಿಕಿಯ ಬಳಿಯಲ್ಲಿ ಮಾತ್ರ ಯಾರೂ ಇರಲಿಲ್ಲ. ತನ್ನನ್ನು ಅವರು ಬಿಚ್ಚಿದ ಕೂಡಲೆ ಆ ಬಂದಿಯು ಜೇವರ್ಟನು ಬರೆಯುತ್ತಿದ್ದ ಸಮಯವನ್ನು ನೋಡಿ, ಅಲ್ಲಿಯ ದಾಂದಲೆ ಗದ್ದಲ ಗೊಂದಲಗಳು ತನಗೆ ಅನುಕೂಲ ವಾಯಿತೆಂದು ಆಲೋಚಿಸಿ, ಅವರ ಗಮನವ ತನ್ನ ಮೇಲೆ ಬೀಳದೆ ಇದ್ದ ಕ್ಷಣದಲ್ಲಿ ಕಿಟಿಕಿಯಿಂದ ಹೊರಕ್ಕೆ ನೆಗೆದುಬಿಟ್ಟನು.
ಒಬ್ಬ ಅಧಿಕಾರಿಯು ಕಿಟಿಕಿಯ ಬಳಿಗೆ ಓಡಿಹೋಗಿ ಹೊರಗೆ ನೋಡಲು ಅಲ್ಲಿ ಯಾರೂ ಕಾಣಲಿಲ್ಲ. ನೂಲೇಣಿಯು ಇನ್ನೂ ಅದಿರುತ್ತಲೇ ಇತ್ತು. ಜೇವರ್ಟನು ಹಲ್ಲು ಕಡಿಯುತ್ತ, ‘ ಎಲ ಪಿಶಾಚೀ, ಇವನು ಎಲ್ಲರನ್ನೂ ಮೀರಿಸಿದವನಿರಬೇಕು ! ‘ ಎಂದನು.
ಮೇರಿಯಸ್ಸನ್ನು, ಥೆನಾರ್ಡಿಯರನ ಕೊಠಡಿಯಲ್ಲಿ ಏನೇನು ನಡೆಯಿತೆಂಬುದೆಲ್ಲವನ್ನೂ ಕಡೆಯವರೆಗೂ ನೋಡಿ, ಆ ಮಾರನೆಯ ದಿನವೇ ಪ್ಯಾರಿಸ್ ನಗರದ ಬೇರೆ ಭಾಗದಲ್ಲಿ ವಾಸ ಮಾಡಲು ಹೊರಟು ಹೋದನು. ಎರಡು ತಿಂಗಳವರೆಗೆ ಇವನು ಲೆಬ್ಲಾಂಕನ ಮಗಳು ಎಲ್ಲಿರುವಳುಬುದನ್ನರಿಯದೆ ಮೋಹ ತಾಪ ದಿಂದ ತಲ್ಲಣಿಸಿದನು. ಆದರೆ ಒಂದುದಿನ ಥೆನಾರ್ಡಿಯರನ ಹಿರಿಯ ಮಗಳು ಅವಳ ಗುರುತಿನ ವಿಳಾಸವನ್ನು ತಂದು ತಿಳಿಸಿ ಅವನ ಮನಸ್ಸನ್ನು ಸಂತೋಷಪಡಿಸಿದಳು.
*****
ಮುಂದುವರೆಯುವುದು
ವಿಕ್ಬರ್ ಹ್ಯೂಗೋ ನ “ಲೆ ಮಿಸರಾ ಬಲ್ಸ್”
ಜೆ ಲ ಫಾರ್‍ಜ್ ರವರ ಸಂಕ್ಷೇಪ ಪ್ರತಿಯ ಅನುವಾದ