ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು. ಆದ್ದರಿಂದ ಇಂದಿನ ಮಕ್ಕಳೆಲ್ಲ ವಿಜ್ಞಾನದತ್ತ ಒಲವು ತೋರಿಸಬೇಕು. ಅದರಲ್ಲೂ ಭೌತವಿಜ್ಞಾನವನ್ನು ಅಭ್ಯಸಿಸಬೇಕು. ಜ್ಞಾನ ವಿಜ್ಞಾನದ ಮುನ್ನಡೆ ದೇಶದ ಮುನ್ನೆಡೆಯಾಗಿದೆ.
ಪ್ರತಿವರ್‍ಷ ಲಂಡನ್‌ನ ರಾಯಲ್ ಸೊಸೈಟಿ ನೀಡುವ ವಿಶ್ವದ ತೀರಾ ಹಳೆಯದಾದ ವಿಜ್ಞಾನ ಪ್ರಶಸ್ತಿಯಾದ ‘ಕೋಪ್ಲೆ ಮೆಡಲ್’ ಗೆ ಭೌತವಿಜ್ಞಾನಿ ಪೀಟರ್ ಹಿಗ್ಸ್ ಅವರು ಇತ್ತೀಚೆಗೆ ಆಯ್ಕೆಯಾಗಿರುವರು. ಅವರ ‘ದೇವಕಣ’ ಶೋಧನೆಗಾಗಿ ಈ ಪ್ರಶಸ್ತಿ ನೀಡಿದೆ.
ಪೀಟರ್ ಹಿಗ್ಸ್ ದೇವಕಣ ಕುರಿತು ೧೯೬೪ ರಲ್ಲೇ ತಮ್ಮ ಸಿದ್ಧಾಂತವನ್ನು ಮಂಡಿಸಿದ್ದರು. ಇದೇ ವೇಳೆಯಲ್ಲೇ ಫ್ರಾಂಸ್ವಾ ಎನ್‌ಗ್ಲೆರ್‍ಟ್ ಇದೇ ಸಿದ್ಧಾಂತದ ಮೇಲೆ ಕೆಲಸ ಮಾಡಿದ್ದರು!
ಹೀಗಾಗಿ ಹಲವು ಪ್ರಯೋಗಗಳ ನಂತರ ೨೦೧೨ ರಲ್ಲಿ ಹಿಗ್ಸ್ ಅವರ ಸಿದ್ಧಾಂತಕ್ಕೆ ಮಾನ್ಯತೆ ನೀಡಿದೆ ಎಂದು ವರದಿಯಾಗಿದೆ. ಈ ಮಹತ್ವದ ಸಾಧನೆಗಾಗಿ ಪೀಟರ್ ಹೀಗ್ಸ್- ಎನ್‌ಗ್ಲೆರ್‍ಟ್ ಫ್ರಾಂಸ್ವಾ ಅವರಿಗೆ ೨೦೧೩ ರಲ್ಲಿ ಜೋಡಿಯಾಗಿ ೨೦೧೩ ರಲ್ಲಿ ನೊಬೆಲ್ ಬಹುಮಾನ ನೀಡಿ ಗೌರವಿಸಲಾಗಿತ್ತು!
ಜ್ಞಾನ ವಿಜ್ಞಾನ ಕಾರ್‍ಯಕ್ಷೇತ್ರದಲ್ಲಿನ ತೀರಾ ಮಹತ್ವದ ಸಾಧನೆ ಮಾಡಿದವರಿಗಾಗಿ ರಾಯಲ್ ಸೊಸೈಟಿಯು ಈ ಪುರಸ್ಕಾರವನ್ನು ನೀಡಿ ಗೌರವಿಸುವುದು.
ಈಗಾಗಲೇ ಸ್ಟೀಫನ್ ಹಾಂಕಿಂಗ್, ಅಲೆಸ್ ಜೆಫ್ರಿ, ಆಂಡ್ರೆ ಜೆಮ್ ಮೊದಲಾದ ವಿಜ್ಞಾನಿಗಳಿಗೆ ಈ ಗೌರವ ಸಂದಿರುವುದು.
ವಿಜ್ಞಾನ ಕ್ಷೇತ್ರದಲ್ಲಿ ತೀರಾ ಹಳೆಯ ಪ್ರಶಸ್ತಿಯಾದ ಕೋಪ್ಲೆ ಮೆಡಲ್ ಪಡೆದ ಚಾರ್ಲ್ಸ್ ಡಾರ್ವಿನ್- ಅಲ್ಬರ್ಟ್ ಐನ್‌ಸ್ಟೀನ್ ಅವರ ಸಾಲಿಗೆ ಪೀಟರ್ ಹೀಗ್ಸ್ ವಯಸ್ಸು ೮೬ ವರ್ಷ ಇವರೂ ಈಗ ಸೇರ್‍ಪಡೆಯಾಗಿರುವರು.
ಮೊತ್ತ ಮೊದಲ ನೊಬೆಲ್ ಬಹುಮಾನ ನೀಡುವುದಕ್ಕಿಂತ ಸುಮಾರು ೧೭೦ ವರ್ಷಗಳಿಗೆ ಮೊದಲು ಅಂದರೆ ೧೭೩೧ ರಲ್ಲಿ ರಾಯಲ್ ಸೊಸೈಟಿಯು ಕೋಪ್ಲೆ ಮೆಡಲ್ ಪ್ರಶಸ್ತಿ ನೀಡಲು ಮೊದಲಾಯಿತು. ಹೀಗಾಗಿ ಇದು ವಿಜ್ಞಾನ ಕ್ಷೇತ್ರದ ಹಳೆಯ ಪ್ರಶಸ್ತಿ ಎಂಬ ಹಿರಿಮೆಯನ್ನು ಹೊಂದಿದೆ.
ವಿಜ್ಞಾನ ಕ್ಷೇತ್ರದಲ್ಲಿ ಸಾಧಿಸಿದ ಸಾಧಕರಿಗೆ ಹೀಗೆ ಪ್ರಶಸ್ತಿಗಳ ಸುರಿಮಳೆ ವಿಶ್ವದಾದ್ಯಂತ ಇದೆಯೆಂಬುದನ್ನು ನಾವು ನೀವು ಮನಗಾಣಬೇಕಾಗಿದೆ.
*****