‘ಪ್ಲಾಸ್ಟಿಕ್’ ಎಂದ ತಕ್ಷಣ ಪರಿಸರಕ್ಕೆ ಎಲ್ಲ ರೀತಿಗಳಿಂದಲೂ ‘ಮಾರಕ’ ವೆಂಬ ಸತ್ಯ ಜನಸಾಮಾನ್ಯರಿಗೆ ತಿಳಿದಿದೆ. ಪ್ಲಾಸ್ಟಿಕ್ ಹಾಳೆ, ಚೀಲ, ಹೊದಿಕೆ ಇನ್ನಿತರ ವಸ್ತುಗಳು ಬಣ್ಣಗಳಲ್ಲಿ ಬಿಡುಗಡೆಯಾಗುತ್ತಿದೆ. ಇವುಗಳಿಂದ ಹಾನಿಯಾಗುತ್ತದೆ ಎಂಬ ಸತ್ಯ ಗೊತ್ತಾದ ನಂತರ ವಿಜ್ಞಾನಿಗಳು ಇವುಗಳ ಬದಲಿಗೆ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಬಹುಕೃತ ಬಳಕೆಯಾಗಬಲ್ಲ ‘ಪಾಲಿಮರ್’ ಅನ್ನು ಕಂಡು ಹಿಡಿದಿದ್ದಾರೆ. ಬಯೊಡಿಗ್ರೆಡ್ ಆಗಬಲ್ಲ ಹೊಸವಸ್ತುಗಳ ಬಗ್ಗೆ ವಿಜ್ಞಾನಿಗಳು ಈ ಪಾಲಿಮಾರನ್ನು ಆವಿಷ್ಕಾರಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಸ್ಟಾರ್‍ಚ್ ಮತ್ತು ಜೇಡಿ (ಕ್ಲೆ) ಮಣ್ಣಿನಿಂದ ಆಧರಿತವಾದ ಪ್ಲಾಸ್ಟಿಕ್ (ಥರ್‍ಮೋಪ್ಲಾಸ್ಪಿಕ್) ವಂತೆಯೇ ತಯಾರಿಸಲ್ಪಡುವ ಬಯೋಪಾಲಿಮರನ್ನು ಆವಿಷ್ಕಾರಗೊಳಿಸಲಾಗಿದೆ. ಇದು ಪ್ಲಾಸ್ಬಿಕ್ ನಷ್ಟೇ ಶಕ್ತಿಸಾಮರ್ಥ್ಯ ಮತ್ತು ಮೃದುತ್ವ ಗುಣಗಳನ್ನು (ಫ್ಲೆಕ್ಸಿಬಿಲಿಟಿ) ಹೊಂದಿದೆ. ಪ್ರಾಣವಾಯು ಇಂಗಾಲದ ಡೈ ಆಕ್ಸೈಡ್ ಮತ್ತು ನೀರಾವಿಗಳನ್ನು ತಯಾರಿಸಬಲ್ಲದಾಗಿದೆ. ಮುಖ್ಯವಾಗಿ ಇದು ಬಯೋಡಿಗ್ರೆಡೆಬಲ್ ಆಗಿದೆ. ಇದರ ಹಾಳೆಗಳಿಂದ ರಕ್ಷಿಸಿದ ಆಹಾರ ಪದಾರ್ಥಗಳ ಮೇಲೆ ಯಾವುದೇ ತರಹದ ದುಷ್ಟರಿಣಾಮಗಳು ಇದುವರೆಗೆ ಕಂಡು ಬಂದಿಲ್ಲವಾದ್ದರಿಂದ ಫಲಿತಾಂಶ ಯಶಸ್ವಿ ಎನಿಸಿದೆ. ಇದೊಂದು ಅತ್ಯುತ್ತಮ ಪ್ಯಾಕೆಜಿಂಗ್, ವಸ್ತುಗಳಿಗೆ ಬಳೆಸಬಹುದಾದ ವಸ್ತುವಾಗಿದೆ.
*****
