ರಾಮ ರಾಮ ಎಂದು ಧ್ಯಾನಿಸಿದೆ
ನಿ ಎನ್ನ ಹೃದಯದಲಿ ಉದಯಿಸಿದೆ
ನಿನ್ನ ಕೃಪೆಗಾಗಿ ನಾ ಕಾತರಿಸಿದೆ
ನಾ ಬಡವನು ಕೃಪೆ ಇರಲಿ ತಂದೆ
ಎತ್ತೆತ್ತ ನೋಡಲು ನಿನ್ನ ರೂಪ
ಎದೆಯ ಮೂಲೆಯಲ್ಲೂ ನಿನ್ನ ನೆನಪ
ನಿನ್ನಾಶೀರ್‍ವಾದ ವಿರದೆ ತಬ್ಬಲಿ ನಾನು
ನೀನುಕರವಿಡಿದ ಮೇಲೆ ಬೀಳುವುದೇನು!
ನನ್ನ ಹೃದಯದಲ್ಲಿಲ್ಲ ಆಸೆ ಕಿಚ್ಚು
ಮತ್ತೆ ಮನದಲಿಲ್ಲ ಲೌಕಿಕ ಹುಚ್ಚು
ರಾಮ ಹಗಲಿರುಳೆಲ್ಲ ನಿನ್ನ ಧ್ಯಾನ
ನಿನ್ನ ಜಪದಲ್ಲಿದೆ ನನ್ನ ಮಾನ
ನಾ ಜನುಮಗಳ ಚಕ್ರಿಸಿ ಬಂದ ನರನಾಗಿ
ಈ ಜನ್ಮಚಿಕ್ಕು ಬಿಡಿಸಲು ನೀನದೆ ವರವಾಗಿ
ರಾಮ ಎಂಬ ಎರಡಕ್ಕರದಲ್ಲಿ
ಪಾಪಗಳ ಪರಿಹಾರ ಸಂಶಯವೆಲ್ಲಿ
ಕಾಯಾ ವಾಚಾ ಮನಸಾ ಪಾಲಿಸುವೆ
ಶುದ್ಧ ಭಕ್ತಿಯನ್ನು ನೀಡಿ ಓಲೈಸು
ಬಹ್ಮಚರ್‍ಯ ಅಹಿಂಸೆ ಆಚರಿಸುವೆ
ಮಾಣಿಕ್ಯ ವಿಠಲನಾಗಿಸಿ ಉದ್ಧರಿಸು
*****