ದೇವತೆಗಳ ಕೋಲಾಟ

ಕೋಲು ಕೋಲು ಕೋಲೆನ್ನದು ಕೋಲು
ಕೋಲು ಕೋಲೇ ಕೋಲೆನ್ನ ಕೋಲೇ || ೧ ||

ಕಯ್ಯಲೊರೆಗೆ ಕಂಚಿನ ಕೋಲು
ಪಾಂಡವರಿಗೆ ಬೆಳ್ಳಿ ಕೋಲು || ೨ ||

ಶಿತ ಕಟ್ಟ ಶಿರಿರಾಮರಿಗೆ ಚಿನ್ನದ ಕೋಲು
ಶಿನ್ನದ ಕೋಲ ತಡದೇಕಂಡೇ || ೩ ||

ತಮ್ಮ ತಮ್ಮ ಮುಸತಾಪವಾನೋ ಗೈದಾರೋ
ಶಿರಿದೇವ ತಗೋಳೇ ನೆಡೆದಾರೋ || ೪ ||

ಬಾಳೆಯೆಂಬ ಬಯಳಲೀಗೋ ಕೋಲೇ
ಬಾಳೆಯೆಂಬ ಬಯಲಿಗೆ ನೆಡೆದರಲ್ಲೋ ಶಿರಿದೇವತೆಗೊಳ್ಳು || ೫ ||

ತಳದಿಂದ ರಾಯರ ತಾಳೊವಾ ತಳದರಲ್ಲೋ
ದುರದಿಂದ ರಾಯರ ಮದಲಿಗೇ ನಿಲುವರೇಲೋ ಕೋಲೇ || ೬ ||

ದುರದಿಂದ ರಾಯರ ಮದಲಿಗೇ ನಿಂತರೇಲೋ ಶಿರಿದೇವತೆಗೋಳು
ಆರಜಿಣ ರಾಯರ ಹಾದಿಗೋ ನಿಲುವಾರ ಕೋಲೇ || ೭ ||

ಅರಜಿಣ ರಾಯರ ಹಾದಿಗೋ ನಿಂತರೇಲೋ ಶಿರಿದೇವತೆಗೋಳು
ಯಾವೊಂದೇ ಹಾಡ ತೊಡಗಿದನೋ ಕೋಲೇ || ೮ ||

ಯಾವೊಂದೇ ಹಾಡ ತೊಡಗಿದ ಅಂಜೂಣ ಸ್ವಾಮೀ
ಶರಣೆಂಬ ಹಾಡ ತೊಡಗಿದನು ಕೋಲೇ || ೯ ||

ಶರಣೆಂಬ ಹಾಡ ತೊಡಗಿದನು ಅಂಜೂಣ ಸ್ವಾಮೀ
ಹಾಡ ಹೇಳಿ ಹಾಡೇಳಿ ಕೋಲ ಮುರವನೋ ಕೋಲೇ || ೧೦ ||

ಹಾಡ ಹೇಳಿ ಕೋಲ ಮರವಟ್ಟ ಹೊತ್ತಿನ ವಳಗೆ
ಬೂಮಂಡಳ ಹೋಡಿಯೇ ಯೆದ್ದಿ ಹರವೊರೋ ಕೋಲೇ || ೧೧ ||

ಬೂಮಂಡಳ ಹೊಡಿಯೇ ಯೆದ್ದಿ ಹೊತ್ತಿನ ವಳಗೆ
(ದೇವತೆಗಳ ಒಡತಿ)
ಬೂಮಿಯೊಳಗಿನ ಸರಸತಿಯೇ ಎರುವಳಲ್ಲೋ ಕೋಲೆ || ೧೨ ||

ದೇವತೆಯೊಳಗೆ ಒಡತಿಯಾಗೆ ಕೋಲೆ
ಹೊನ್ನಿನ ತಳೊಗೀ ತರವಾಳೆ ಸಿರಿಯೊಳ ದೇಮಮ್ಮ || ೧೩ ||

ದೇವತೆಗೊಳಿಗೆ ಕೊಡವೋರೆ ತೈದಳಲೋ ಕೋಲೆ
“ಕೇಳಿರೋ ಕೇಳಿರೋ ದೇವತೆಗೋಳೇ, ನೀವೇ ಕೇಳೀ || ೧೪ ||

ಈ ಆಟ ನಿಮಗೆಂದು ತರವಲ್ಲವೋ” ಕೋಲೇ
ಆ ಆಟ ನಿಮಗೆ ತರವಲ್ಲ ಅಂತ ಹೇಳಿ || ೧೫ ||

ಈ ಆಟ ನಿಮಗೆ ತರವಲ್ಲವೋ ಕೋಲೇ
ಈ ಆಟ ನಿಮಗೆ ಬೇಡಂದಳ ಶಿರಿಯಾಳಮ್ಮ || ೧೬ ||

ನೆಡದಳೋ ಪಾತಾಳಲೋ ಕಕೆ ಕೋಲೆ
ಸಿರಿಯಳ ದೇವಮ್ಮ ಪಾತಾಳಲೋ ಕಕ್ಕೆ ಹೋಗುವಾಗೆ || ೧೭ ||

ಮತ್ತೊಂದಲಾಟ ಆಡವಾರೋ ದೇವತೆಗೋಳೇ
ಯಾವೊಂದು ಲಾಟಾವ ಆಡುವಾರೋ ಕೋಲೇ
ತಾರೈಯೆಂಬುಲಾಟಾವಾ ಆಡವಾರೋ ಶಿರಿದೇವತೆಗೋಳೇ || ೧೮ ||

ಹಾಡ್ಹಳೇ ಕೋಲನು ಮರುವಾರ ಕೋಲೇ
ಹಾಡಳೇ ಕೋಲನು ಮರುವಟ್ಟ ಹೊತ್ತಿನವೊಳಗೆ || ೧೯ ||

ವಜ್ಜರದ ಹನುಮ ವದಗಿದನು ಕೋಲೇ
ಜಜ್ಜರದ ಹನುಮ ಒದಗಿದನು ವದನೆ ವದನೆ ಕೋಲ ಹೋಡೆವಾನೆ || ೨೦ ||

ಕಂಚಿನ ಕೋಲು ಶಣಗುಟ್ಟವು ಕೋಲೇ
ಕಂಚಿನ ಕೋಲು ಶಣಗುಟ್ಟು ಬೆಳ್ಳಿಕೋಲು ಬೆಗಳೊಡದೋ || ೨೧ ||

ಚಿನ್ನದ ಕೋಲು ಶಿಗುರೊಡೆದು ಕೋಲೆ
ಚಿನ್ನದ ಕೋಲು ಶಿಗರೆದ್ದಿ ಅರಬರಕೇ ಹರದು || ೨೨ ||

ಹೋಗರಗೈಲ್ಲೆ ಕಡಲೇಳು ಶಮುದುರಕೆ ಕೋಲೇ
ಹೋ ಗರಗೈಲ್ಲೆ ಕಡಲೇಳು ಶಮುದುರಕ್ಕೆ ಶಿನ್ನದ ಕೋಲು || ೨೩ ||

ಹುಟ್ಟೆ ಬಂದವಲೋ ಬಂಕೀಯ ಮಣ್ಣಿನ ಗೂಡೆಮನೆ ಕೋಲೆ
ಹುಟ್ಟೆ ಬಂದವರೋ ಬಂಕೀಯ ಮಣ್ಣಿನ ಗುಡೆತಲೆ ಮೈನ ಕೋಲೆ || ೨೪ ||

ತಾಯಿಲ್ಲದ ಮಗನೇ ತಂದೆಯು ಇಲ್ಲದ ಮಗನು
ಯಾರು ಇಲ್ಲದ ಆಕಾಲೀ ಮಗನು ಕೋಲೆ || ೨೫ ||

ಮೀರಾಶೀ ಮನಿಯಲ್ಲಿ ವಳೂವನು ಕೋಲೆ
ಮೀರಾಶೀ ಮನಿಯಲ್ಲಿ ವಳುವನು ಆಕಾಲೀ ಮಗನೇ || ೨೬ ||

ಹೊತ್ತರ ಹೊರೆಯ ಮುನ್ನ ವಳೂವನು ಕೋಲೆ
ಗಂಜಿವಂದು ಊಟವಾ ಉಣ್ಣುವಾನು ಆಕಾಲೀ ಮಗನೇ || ೨೭ ||

ಗೋವಿನ ಹಟ್ಟಿಗೆ ನಡೆದಾನ ಕೋಲೇ
ನೂರೊಂದು ಗೋವಾ ವಿಡಿವಾನು ಆಕಾಲೀ ಮಗನೇ || ೨೮ ||

ಹೆದ್ದುಂಚಿ ಕೊರಳಾನೂ ಹಿಡುವಾನ ಕೋಲೇ
ಹರ್ಕವಂದು ಕಂಬಳಿ ಗಪ್ಪೆ ಹಿಡಿದಾನ ಆಕಾಲೀ ಮಗನೇ || ೨೯ ||

ಗೋವಿನ ಬೆನ್ನಿಗೆ ನಡದಾನ ಕೋಲೇ
ನಡದಾ ಕಡಲೇಳ ಬ್ಯಾಣಕೆ ಆಕಾಲೀ ಮಗನೇ || ೩೦ ||

ಹೆದ್ದುಂಬೆ ಕೊರುಳ ನುಡುವಾನು ಕೋಲೆ
ತಾವಂದು ಕಲ್ಲಮೇನೆ ಕುಳಸಾನು ಆಕಾಲೀ ಮಗನೆ || ೩೧ ||

ಗೋ ವೆಲ್ಲಾ ಹರಗಾಡೀ ಮೇವೂತ ಐದವಲೋ ಕೋಲೇ
ಅತ್ತ ಇತ್ತಲೇ ನೋ ಡುತೈದನಲೋ ಕೋಲೇ
ಅತ್ತ ಇತ್ತಲೇ ನೋ ಡುತೈದನು ಆಕಾಲೀ ಮಗನೇ || ೩೨ ||

ಬಂಕೀ ಮಣಿನ ಗುಹೆಯಾನೇ ನೋ ಡುವಾನು ಕೋಲೇ
ಶಿನ್ನದ ಸೂರಿ ದೇವರೇ ಉರಿವಾಂಗೇ ಉರಿದಾವೋ ಆವಾಲೇ ಕೋಲು || ೩೩ ||

ಬೆಳುದೇವರೆ ಬೆಳಗೀ ದಂಗೇ ಬೆಳು ಶಿವನೋ ಕೋಲೇ
ದುರಡಪುತ್ರ ನಾಗೇ ಹಾಲುಂಡ ಕೋಲು ನೆರದಿವಲೋ ಆವಾಲೇ ಕೋಲೆ || ೩೪ ||

ವಂದ ಹುಟ್ಗೆ ಯರಡಾಗೇ ನೀಲತವಲೋ ಕೋಲೇ
ಅಸ್ತದಿಂದೇ ಹುಟ್ಟಿದೋ ಕೋಲ ಪುಸ್ತದಲ್ಲಿ ಬೆಳದೋ ಕೋಲು || ೩೫ ||

ರಾಮ ಲಕ್ಷ್ಮಣರಾಗೇ ನೀಲತವಲೋ ಕೋಲೇ
ಆಕಾಲೀ ಮಗನ ಕಾಣಿಗೇ ದೊರಕೀವಲೋ ಆವಾಲೇ ಕೋಲು || ೩೬ ||

ಕರಗಾಗೀ ದನಗೋಳ ಹೊಡಕಂಡು ಬರುವನಲೋ ಕೋಲೇ
ಗೋವ ಕಟ್ದೆ ಗೋವೀಗೆ ಹುಲ್ಲ ದರಸಿದನೋ ಆಕಾಲೀ ಮಗನೇ || ೩೭ ||

ಎಡೆಯನು ರಾಮುನಾಗೇ ನಡೆದನಲೋ ಕೋಲೆ
(ದನಿಗೋಗಿ ಬಂದ ಮೇಲೆ)
ಕೈಕಾಲ ಶಿರಿಮೊಕವನು ತೊಳದಾನ ಆಕಾಲೀ ಮಗನೇ || ೩೮ ||

ವಹಿಯರಿದ್ದಲ್ ಆವಾನು ನಡೆದನಲೋ ಕೋಲೇ
ಕೇಳಲೋ ಕೇಳಲೋ ವಡೆಯನೋ ರೇ ನೀಮೇಲೆ ಕೇಳೀ || ೩೯ ||

ಇಂದ ಯರಡಾ ಕೋಲಾ ಕಂಡೇ ಬಂದನೇ ಕೋಲೇ
ಕೇಳಲೋ ಕೇಳಲೋ ಆಕಾಲೀ ಮಗನೇ ನೀನೇ ಕೇಳು || ೪೦ ||

ಇಂತಾ ಸುಳ್ಳ ಯಾಕೇ ಕಲತೇಯೋ ಕೋಲೇ
ಕೇಳಲೋ ಕೇಳಲೋ ವಡೆಯನೋರೇ ನೀವ ಕೇಳೇಳಿ || ೪೧ ||

ನಿಮ್ಮನೆ ನಮ್ಮ ಕೊರುಳಾನೇ ಕೋಲೇ
ನಿಮ್ಮನೆ ನಮ್ಮ ಕೊರುಳಾನೇ ಸ್ವಾಮ್ಯೋರೇ ಕೇಳೀ || ೪೨ ||

ನಿನನ್ನಾಣಿ ನಿನ್ನ ಕೊರಳಾಣಿ ಕೋಲೇ
ಸ್ವಾಮ್ಯೋರೇ ಕೇಳಿ || ೪೩ ||
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಳ್ಳಿ ಬೆಳೆಯದೆ ಹಾಳು ವಿಷ ಕಳೆವುದೆಂತು?
Next post Congreveನ The way of the World- ಸಾಮಾಜಿಕ ವಿಡಂಬನಾ ನಾಟಕ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…