ಹಿಂದಿನ ಅಧ್ಯಾಯದಲ್ಲಿ ವರ್ಣಿತನಾಗಿರುವ ಯುವಕನು ನಮ್ಮ ಕಥಾನಾಯಕನಾದ ಮಾಧವನಲ್ಲದೆ ಬೇರಿಯಲ್ಲವೆಂಬುದ ನ್ನು. ನಮ್ಮ ವಾಚಕಮಹಾಕಯರಿಗೆ ತಿಳಿಯಹೇಳಬೇಕಾದುದಿಲ್ಲ. ಆದರೆ ತಂದೆಯ ಮನೆಯನ್ನು ಬಿಟ್ಟು ಏಕಾಂಗಿಯಾಗಿ ಹೊರಟು ಬಂದವನಿ ಗೆ ಹೈದರಾಬಾದಿನಲ್ಲಿ ಅಷ್ಟು ಶೀಘ್ರವಾಗಿ ಸುಖಸಂಪದ ಗಳು ಹೀಗೆ ದೊರೆತುವೆಂಬುದನ್ನು ಮಾತ್ರ ನಾವು ಇಲ್ಲಿ ತಿಳಿಸುವುದು ಅವಶ್ಯಕವಾಗಿರುವುದು.
ಆದಿನ ರಾತ್ರೆ ತಂದೆಯ ಕ್ರೂರವಾದ ಆಜ್ಞೆಯನ್ನು ಕೇಳಿ ಮಾ ಧವನಿಗೆ ಬಹಳ ಸಂಕಟವುಂಟಾಯಿತು. ತಮ್ಮ ವಂಶಕ್ಕೂ ವಿಶ್ವನಾ ಥನ ವಂಶಕ್ಕೂ ಪಾರಂಪಕವಾಗಿ ದ್ವೇಷಬಂದಿರುವುದು ಇವನಿಗೆ ತಿಳಿದಿದ್ದ ರೆ ಎಂದಿಗೂ ಸುಭದ್ರೆಯನ್ನು ವರಿಸುವುದಾಗಿ ಪ್ರತಿಜ್ಞೆಮಾ ಡುತ್ತಿರಲಿಲ್ಲ. ಈಗ ತಂದೆಯ ಅಭಿಪ್ರಾಯದಂತೆ ತನಗೆ ಒಂದು ಕ್ಷಣ ವೂ ಆ ಮನೆಯಲ್ಲಿ ನಿಲ್ಲಲು ಬಾಧ್ಯತೆಯಿಲ್ಲವೆಂಬುದು ವ್ಯಕ್ತವಾಯಿ ತು. ಮುಂದೆ ಮಾಡುವುದೇನು ? ತಂದೆಯ ಮಾತಿನಂತೆ ನಡೆದು ಪ್ರತಿಜ್ಞಾಭಂಗಮಾಡಿಕೊಳ್ಳುವುದೆ ? ಅಥವಾ ಪ್ರಾಯಶ್ಚಿತ್ತರೂಪ ವಾಗಿ ಮನೆಯನ್ನು ಬಿಟ್ಟು ಹೋಗುವುದೆ? ಅಥವಾ ಪ್ರಾಣತ್ಕಾಗ ಮಾಡಿಕೊಂಡು.. ಸಮಸ್ತ ಬಾಧೆಗಳನ್ನೂ ಪರಿಹರಿಸಿಕೊಳ್ಳುವುದೆ ? ಮೂರನೆಯ ಮಾರ್ಗವು ಪುರುಷನಿಗೆ ತಕ್ಕುದಲ್ಲ. ಮೊದಲನೆಯ ಮಾರ್ಗವನ್ನನು ಸರಿಸುವುದರಿಂದ ತಂದೆಯ ಪ್ರೀತಿಯು ಇದ್ದಂತೆಯೇ ಇರುವುದು. ಅದರೆ ಅದರಿಂದ ತಾನು ಮಿಥ್ಯಾವಾದಿಯಾಗುವನಲ್ಲದೆ ಒಬ್ಬ ಬ್ರಾಹ್ಮಣ ಕನ್ಯೆಯನ್ನು ದುರ್ಮರಣಕ್ಕೆ ಗುರಿಮಾಡುವ ಸಂಭ ವವೂ ಉಂಟು, “ಛಿ! ಛಿ! ಆತ್ಮ ಸುಖಕ್ಕೋಸ್ಕರ ಪ್ರತಿಜ್ಞಾಭಂಗಮಾ ಡಕೊಳ್ಳುವುದೆ? ತಪ್ಪು ತಪ್ಪು. ಈ ಕೂಡಲೆ ಈ ಮನೆಯನ್ನು ಬಿಟ್ಟು ಹೋಗುವೆನು. ಭಗವಂತನು ತೋರಿಸಿದಂತಾಗಲಿ.“ ಬಂದು ಯೋ ಚಿಸಿಕೊಂಡು ತಂದೆಗೆ ಕಾಗದವನ್ನು ಬರೆಯಲು ಕುಳಿತನು. ಬಾಗಿ ಲು ಕರ್ರೆಂದ ಶಬ್ದವಾಯಿತು. ತಿರಿಗಿ ನೋಡಲಾಗಿ ಗಂಗಾಬಾಯಿ ಯು ಮೆತ್ತಗೆ ಒಳಗೆ, ಬಂದು ಮಾಧವನನ್ನು ” ಏನುಮಾಡುವೆ“ ಎಂದು ಕೇಳಿದಳು. ಮಾಧವನು ಅವಳನ್ನು ಕುರಿತು, “ಎಲ್ಲಾ ಸಂಗ ತಿಯೂ ನಿನಗೆ ತಿಳಿಯುವುದೆ?“ . ಎಂದು ಕೇಳಿದನು.
ಗಂ– ತಿಳಿಯುವುದು, ನಾನು ನಿಮ್ಮ ತಂದೆಯ ಬಾಯಿಂದಲೆ ಎಲ್ಲವನ್ನೂ ಕೇಳದೆ. ನಿನ್ನ ವಿಧೇಯನಾದ ಮಗನೆ ಇಲ್ಲವೆಂದು ಅವರು ಶ್ಲಾಘನೆ ಮಾಡಿದರು.
ಮಾ__ಆಮೇಲೆ ?
ಗಂ–ಅದರೆ. ನನಗೆ. ಮಾತ್ರ ಏನೋ ಒಂದು ವಿಧವಾದ ಆತಂ ಕವು ಹುಟ್ಟಿದುದರಿಂದ ರಾತ್ರಿ ಸ್ವಲ್ಪವೂ ನಿದ್ದೆ ಹತ್ತದೆ ಈಗ ನಿನ್ನನ್ನು ನೋಡಲು ಬಂದೆ.
ಮಾ–ನಿನ್ನ ಆಜ್ಞೆ ಏನು?
ಗಂ_ನಿನ್ನ ಅಭಿಪ್ರಾಯವೇನು?
ಮಾ_-ಇದೊ, ತಂದೆಯವರಿಗೆ ಕಾಗದವನ್ನು ಬರೆದಿಟ್ಟು ನಾನು ದೇಶಾಂತರ ಹೊರಟು ಹೋಗುತ್ತೇನೆ.
ಗಂ — ಹೊರಟು ಹೋಗಿ ?
ಮಾ–ಸ್ವತಂತ್ರವಾಗಿ ಸಂಪಾದಿಸಲು ಶಕ್ತಿಯುಂಟಾದೊಡ ನೆಯೆ ಸುಭದ್ರೆಯನ್ನು ಕರೆಸಿಕೊಂಡು ಮದುವೆಮಾಡಿ ಕೊಳ್ಳುತ್ತೇನೆ.
ಗಂ_–ನೀನು ಕರೆಸಿಕೊಳ್ಳು ವವರಿಗೂ ಸುಭದ್ರೆಯುನಿನ್ನ ವಳೇ ಆಗಿರುವಳೆಂಬ ನಂಬಿಕೆಯೇನು?
ಮಾ.-ಅವಳ ತಂದೆಯೇ ನಾದರೂ ಬೇರೆಕಡೆ ವಿವಾಹಮಾಡಿ ಯಾರೆಂಬ ಭೀತಿತಾನೆ? ಅವರಿಗೂ ಒಂದು ಕಾಗದವನ್ನು ಬರೆದರಾಯಿತು.
ಗಂ-ಹಾಗಾಗುವುದಿಲ್ಲ. . ಅವನು ನಿನ್ನ ಬರಿಯ ಕಾಗ ದದ ಮೇಲೆ ನಂಬಿಕೆಯಿಟ್ಟು ತನ್ನ ಪ್ರಯತ್ನವನ್ನು ಬಿಡಲಾರನು. ನೀನು ಇಲ್ಲಿಂದ. ಹೊರಟು ನೆಟ್ಟಗೆ ರಾಂಪುರಕ್ಕೆ ಹೋಗಿ ವಿಶ್ವನಾಥನನ್ನು . ಕಂಡು ಕನ್ಯಾರ್ಥಿಯಾಗಿ ಬಂದಿರುವುದಾಗಿ ಹೇಳಿಕೊ . ಅವನು ನಿನ್ನ ನ್ನು ನೋಡಿದ ಕೂಡಲೆ ಸಂತೋಷದಿಂದ ಸುಭದ್ರೆ ಯನ್ನು ಮದುವೆ ಮಾಡಿಕೊಡುವನು . ಅಥವಾ ಅವ ನೇನಾದರೂ ಅನುಮಾನಪಟ್ಟರೆ ಇಗೋ ಈ ಕಾಗದ ವನ್ನು ಅವನಿಗೆ ಕೊಡು. . ಅನಂತರ ಳೆಲವು ದಿನ ದೇಶ ಸಂಚಾರವೂಡುತ್ತಿರು. ಅಷ್ಟರೊಳಗೆ ನಿಮ್ಮ ತಂದೆ ಯವರು ಸುಭದ್ರೆಯಮೇಲಿನ ದ್ವೇಷವನ್ನು ಬಿಟ್ಟು ಬಿಟ್ಟರೆ ಹಿಂದಿರುಗಿ ಬಂದು ಅವರ ಸೇವೆಯನ್ನು ಮಾಡ ಬಹುದು.
ಮಾಧವನು ಚಿಕ್ಟಮ್ಮನಿಗೆ ನಮಸ್ಕರಿಸಿ ಆಕೆಯನ್ನು ಕಳುಹಿಸಿ ತಂದಿಗೆ ಕಾಗದವನ್ನು ಬರಿದಿಟ್ಟನು. ಅನಂತರ ತನ್ನ ಪ್ರೇಮ ಪಾತ್ರವಾದ, “ಶ್ವೇತ“ನೆಂಬ ಕುದುರಿಯನ್ನೇರಿ ಮಧ್ಯ ರಾತ್ರಿಯಲ್ಲಿಯೆ ಪುನಹೆಯನ್ನು ಬಿಟ್ಟು ಹೊರಟನು. ಬೆಳಗಾಗುವುದರೊಳಗಾಗಿರಾಂ ಪುರಕ್ಕೆ ಆರ್ಥ ದಾರಿಯು ಸಾಗಿತು. ಮಾರ್ಗಕ್ಕೆ ಸ್ವಲ್ಪದೂರದಲ್ಲಿದ್ದ ಒಂದು ಅಗ್ರಹಾರದಲ್ಲಿ ಅ ದಿನ ಮಧ್ಯಾಹ್ನೆ ಭೋಜನಮಾಡಿಕೊಂಡು ಸ್ಕಲ್ಸ ಹೊತ್ತುವಿಶ್ರಾಂತಿಯನ್ನು ಹೊಂದಿ ಸಾಯಂಕಾಲಕ್ಕೆ ಸರಿಯಾಗಿ ರಾಂಫುರವನ್ನು ಸೇರಿದನು. ಗಂಗಾಬಾಯಿಯ ಸೇವಕಳಾದ ಕಾಳಿ ಯೆಂಬವಳ ಮನೆಯಲ್ಲಿ ಕುದುರೆಯನ್ನು ಕಟ್ಟ ಹಾಕಿ, ತಾನು ಮಾತ್ರ ವಿಶ್ವನಾಥನ ಮನೆಗೆ ಸುಮಾರು ೮ ಗಂಟೆಯ ಸಮುಯದಲ್ಲಿ ಬಂದನು. ಅಲ್ಲಿಂದಾಜಿಗೆ ನಡಿದುದು ತಿಳಿದೇ ಇದೆ. ಮಾಧವನೆ ಲಕ್ಷ್ಮೀ ಪತಿ ಯೆಂಬ ಹೆಸರಿನಿಂದ ಸುಭದ್ರೆಯನ್ನು ವಿವಾಹಮಾಡಿಕೊಂಡವನು . ಪಂಡರಫುರದಿಂದ . ಅತ್ತೆಮಾವಂದಿರ ಅನುಜ್ಜೆಯನ್ನು . ಪಡೆದು ಮಾಧವರಾಯನು ಹಿಂದಿರುಗಿ ರಾಂಪುರಕ್ಕೆ ಬಂದು ಕಾಳಿಗೆ ಕುದುರೆ ಯನ್ನು ಕಾಪಾಡಿಕೊಂಡಿದ್ದುದಕ್ಕಾಗಿ ಐದುರೂಪಾಯಿಗಳನ್ನು ಬಹು ಮಾನವಾಗಿ ಕೊಟ್ಟು ಅಲ್ಲಿಂದ ಆದಿನರಾತ್ರಿಯೆ ಮುಂದಕ್ಕೆ ತೆರಳಿದನು. ಅವನಿಗೆ ಇಂತಹ ಕಡೆಯೇ ಹೋಗಬೇಕೆಂಬ ಉದ್ದೇಶವಾವುದೂ ಇರಲಿಲ್ಲ. ಆದುದರಿಂದ ಕುದುರೆಯನ್ನು ಅದರ ಮನಸ್ಸು ಬಂದಕಡೆ ಹೋಗುವುದಕ್ವೆ ಬಿಟ್ಟನು. ಅದು ಒಂದಾನೊಂದು ಭಾಟಾಮಾರ್ಗವ ನ್ನನುಸರಿಸಿ ನಡೆಯಿತು, ಬೆಳಗಾದಮೇಲೆ ದಾರಿಯಲ್ಲಿ ಹೋಗುವವರ ನ್ನು ವಿಚಾರಿಸಿದುದರಲ್ಲಿ ಅದು ಹೈದರಾಬಾದಿಗೆ ಹೋಗುವ ಮಾ ರ್ಗವೆಂದೂ, ಆರಾಜ್ಯದ ಎಲ್ಲೆಯನ್ನು ಅವನು ಸಮೀಪಿಸಿರುವುದಾಗೆ ಯೂ ತಿಳಿಯಬಂದಿತು. ಮಾಧವನು,ನೀರು ಸಿಕ್ಕಿದಸ್ಥಳದಲ್ಲಿ ಸ್ನಾನ ಸಂಧ್ಯಾವಂದನೆಗಳನ್ನು ಮಾಡಿಕೊಂಡು ಕುದುರೆಗೆ ಸ್ವಲ್ಪ ವಿಶ್ಯಾಂತಿ ಕೊಟ್ಟು ಮುಂದೆ ಹೊರಡುವುವಾಗಿ ಯೋಜಿಸಿ ಬಿಸಿಲು ಇನ್ನೂ ಕ್ರೂರವಾಗಿಲ್ಲದುದರಿಂದ ಸ್ವಲ್ಪ ಚುರುಕಾಗಿ ಕುದುರೆಯನ್ನು ನಡೆಯಿಸಿ ದನು. ಸ್ವಲ್ಪ ಹೊತ್ತಿನಲ್ಲಿಯೆ ಭೀಮಾನದಿಯ ಒಂದು ಸಣ್ಣ ಶಾಖೆಯ ಬಳಿಗೆಬಂದನು. ಅಲಿ ಸ್ನಾನಕ್ತೆ ಪ್ರಶಸ್ತವಾಗಿದ್ಸುದರಿಂದ ಸೇತುವೆಯ ಮೇಲೆ ನದಿಯ ಅಚೆಯದಡಕ್ಕೆ ಹೋಗಿ, ಕುದುರೆಗೆ ನೀರು ಕುಡಿಸಿ ಅದನ್ನು ಹತ್ತಿರವಿದ್ದ ತೋಪಿನಲ್ಲಿ ಮೇಯುವುದಕ್ಕೆ ಬಿಟ್ಟನು. ಅಲ್ಲಿಂದ ನದಿಯಬಳಿಗೆ ಹೋಗಲು ಹಿಂದಿರುಗುವಾಗ್ಗೆ ರಸ್ತೆಯಿಂದ ಹೆಂಗಸರು ಮಕ್ಕಳು ಕೂಗಿಕೊಳ್ಳುವಶಬ್ಬವೂ ಕುದುರಿಯ ಗಾಡಿಯೊಂದು ಬಹು ರಭಸದಿಂದ ಬರುವ ಶಬ್ದವೂ ಕೇಳಿಬಂದಿತು. ಮಾಧವನು ಅಂಬಿನವೇ ಗದಿಂದ ರಸ್ತೆಗೆ ಓಡಿದನು. ಎದುರಿಗೆ ಮುಹಾವೇಗದಿಂದ ಸಾರಥಿಯಿ ಲ್ಲದ ಗಾಡಿಯನ್ನು ಬಹಳವಾಗಿ ಬೆದರಿ ಕಂಗೆಟ್ಟ ಕುದುರೆಯು ಎಳೆದು ಕೊಂಡು ಬರುತ್ತಿದೆ. ಹಿಂದುಗಡೆ ಸೇತುವೆಯಿದೆ.ಸ್ನಲ್ಲ ಸಾವಕಾಶವಾ ದರೂ ಗಾಡಿ ಕುದುರೆ, ಗಾಡಿಯೊಳಗಿದ್ದ ಜನಗಳು, ಎಲ್ಲರೂ ಒಂದೇ ಆವರ್ತಿ ನದಿಯೊಳಕ್ಕೆ ಉರುಳಿಹೋಗುವ ಸಂಭವವುಂಟು. ಮಾಧ ವನು ತನ್ನ ಜೀವದ ಆಶೆಯನ್ನೂ ಮರೆತನು. ಧೈರ್ಯವಾಗಿ ರಸ್ತೆಯ ನಡುವೆ ನಿಂತು ರಭಸದಿಂದ ಬರುತ್ತಿರುವ ಕುದುರೆಯಕಡಿವಾಣವನ್ನು ಹಿಡಿದು ತನ್ನ ಶಕ್ತಿಯನ್ನೆಲ್ಲಾ ಪ್ರಯೋಗಿಸಿ ನಿಲ್ಲಿಸಿದನು. ಅನಂತರ ಆ ಗಾಡಿಯೊಳಗಿದ್ದ ವರನ್ನೆಲ್ಲ ಒಬ್ಬೊಬ್ಬರನ್ನಾಗಿ ಕೆಳಗೆ ಇಳಿಸಿ ಒಂದು ಮರದ ನೆರಳಿನಲ್ಲಿ ಮಲಗಿಸಿದನು. ಅದರಲ್ಲಿಒಬ್ಬ ವೃದ್ಧ ಮುಸಲ್ಮಾನನು, ಒಬ್ಬ ಹೆಂಗಸು , ಇಬ್ಬರು ಮಕ್ಕಳೂ ಇದ್ದರು. ಯಾರಿಗೂ ಮೈಮೇಲೆ ಪ್ರಜ್ಞೆಯಿರಲಿಲ್ಲ. ಮಾಧವನನು ನದಿ ಹೋಗಿ ತನ್ನ. ಹೊದಿಯುವ ಪಂಚೆಯನ್ನು ನೆನಸಿಕೊಂಡು ಬಂದು ಎಲ್ಲರ ತಲೆಯ ಮೇಲೂಹಾಕಿ ದನು. ಅವರಲ್ಲರೂ ಚೇತರಿಸಿಕೊಳ್ಳುವ ಸಮಿತಿಯು ಕಂಡುಬಂದೊಡ ನೆಯೆ ಮುಸಲ್ಮಾ ನರ ಹೆಂಗಸಿನ”ಘೋಷಾ“ಕ್ಕೆ ಭಂಗ ಬರಬಾರದೆಂ ದುಕೊಂಡು ತಾನು ಮರೆಯಾಗಿ ನಿಂತನು. ಮೊದಲು ಮಕ್ಕಳಿಬ್ಬರೂ ಎಚ್ಚತ್ತರು. ಅನಂತರ ಹೆಂಗಸು, ಆಮೇಲೆ ವೃದ್ಧನೂ ಎದ್ದು ಕುಳಿ ತರು, ಆ ವೃದ್ದನಿಗೆ,ಪರಲೋಕರಲ್ಲಿರುವೆನೊ ಈ ಭೂಮಿಯ ಮೇ ಲೆಯೇ ಇ ರುವೆನೊ“ ಎಂಬ ಭ್ರಾಂತಿಯುಂಟಾಯಿತು. ಹಾಗೆಯೆ ಸುತ್ತಲೂ ನೋಡಿದುದರಲ್ಲಿ ಭೂಲೋಕದ ಗಿಡಮರಗಳೂ ಕಲ್ಲು ಗು ಡ್ಡಗಳೂ ಕಂಡುಬಂದುವು. ಹತ್ತಿರದಲ್ಲಿ ನದಿಯ ಘರ್ಜನೆಯೂ,ಪಕ್ಷಿ ಗಳ ಕಲಕಲಧ್ವನಿಯೂ ಕೇಳಿಬಂದುವು. ಎದುರಿಗೆ ತನ್ನ ಜತೆಯಲ್ಲಿದ್ದ ಹೆಂಗಸುಮಕ್ಕಳು ಸೌಖ್ಯವಾಗಿ ತುಳಿತುಕೊಂಡಿರುವುದನ್ನು ನೋಡಿ ಮನಸ್ಸಿಗೆ ಧೈರ್ಯವಾಯಿತು. “ಯಾ ! ಅಲ್ಲಾ! ಏನು ಪುಣ್ಣಮಾಡಿ ದ್ದೆವೊ
ಈದಿನ ನಮ್ಮ ಪ್ರಾಣವುಳಿಯಿತು” ಎಂದು ಅನಂದಬಾಷ್ಪ ಗಳನ್ನು ಸುರಿಸಿದನು. ರಸ್ತೆಯಲ್ಲಿ ಗಾಡಿಯು ಬಿಟ್ಟ ರುವುದನ್ನೂ ಕುದು ರೆಯು ಮರಕ್ಕೆ ಕಟ್ಟಿ ಹಾಕಲ್ಪಟ್ಟಿ ರುವುದನ್ನೂ ನೋಡಿ, ಯಾವನೋ ಧೈರ್ಯಶಾಲಿಯು ಗಾಡಿಯನ್ನು ಹಿಡಿದೇನಿಲ್ಲಿಸಿರಬೇಕೆಂದು ತಿಳಿದುಕೊಂಡು, ” ನಮ್ಮ ಪ್ರಾಣಗಳನ್ನುಳಿಸಿದ ಮಹಾತ್ಮನು ನಮಗೆ ದರ್ಶನ ಕೊಡಬಾರದೆ“ ಎಂದು ಗಟ್ಟಿಯಾಗಿ ಕೂಗಿದನು. ಉತ್ತರ ಬರಲಿಲ್ಲ. “ ಇದೇನಾಶ್ಚರ್ಯ, ದೇವರೇ ಬಂದು ಸಮ್ಮ್ರನ್ನು ಕಾಪಾಡಿದನೊ ? ಇಗೋ ಇಲ್ಲಿ ಪಂಚೆಯು ಬಿದ್ದಿದೆ. ಯಾರೋ ಹಿಂದೂ ಮಹಾನು ಭಾವನು ನಮ್ಮ ಪ್ರಾಣಗಳನ್ನುಳಿಸಿರಬೇಕು. ಎಂದಂದುಕೊಂಡು ಅಲ್ಲಿಂದ ಎದ್ದು ಸ್ವಲ್ಪ ಮುಂದಕ್ಕೆ ಹೋಗುತ್ತಲೆ,ಮಾಧವನು ಕಂಡು ಬಂದನು. “ಏನು, ಮಹಾರಾಜ್ ! ಇಷ್ಟುಮಟ್ಟಿಗೆ ನಮ್ಮಲ್ಲಿ ದಯೆ ಯನ್ನು ತೋರಿಸಿಯೂ ನಿರ್ದಯರಾಗಬಹುದೆ ? ನಿಮ್ಮ ದರ್ಶನ ನ್ನೇಕೆ ಕೊಡಲಿಲ್ಲ?“ ಎಂದು ವೃದ್ಧನು ಕೇಳಿದುದಕ್ಕೆ “ಘೋಷಾ“ ಹೆಂಗಸಿಗೋಸ್ಕರ ತಾನು ಮರೆಯಲ್ಲಿ ನಿಂತಿದ್ದುದಾಗಿಯೂ ತಾನು ಕರ್ತವ್ಯವನ್ನು ಮಾಡಿದನೆ ಹೊರತು. ಬೀರೆ ಯಾವ ಮಹತ್ಕಾರ್ಯ ವನ್ನೂ ಮಾಡಿದಂತೆ ಎಣಿಸಕೂಡದೆಂದೂ ಮಾಧವನು ಉತ್ತರವನ್ನು ಹೇಳಿದನು, ಆ ವೃದ್ದನಿಗೆ ಮಾಧವನ್ನ ಮಾತನ್ನು. ಕೇಳಿದೊಡನೆಯೆ ಅಪರಿಮಿತವಾದ ವಿಸ್ವಾಸವು ಹುಟ್ಟಿ, “ಮಹಾನುಭಾವ, ನೀನೆ ನನ್ನ ಭಾಗಕ್ಕೆ ತಂದೆತಾಯಿ, ಸಮಸ್ತ ಬಂಧುಬಳಗವು. ಒಂದಲ್ಲದೆನಾಲ್ಡು ಪ್ರಾಣಿಗಳನ್ನು ಸಂರಕ್ಷ ಣೆಮಾಡಿರುವೆ. ಆದುದರಿಂದ ನಾವು ನಮ್ಮ ಜೀವಾವಧಿ ನಿನ್ನ ಸೇವೆಯನ್ನು ಮಾಡಲು ಅನುಜ್ಞೆಯನ್ನು ಕೊಡು. ನನ್ನ ಸಮಸ್ತವಾದ ಐಶ್ಕರ್ಯವೂ ನಿನ್ನದೇ. ನಮ್ಮ ಸಂಗಡ ಬಂದು ನಮ್ಮ ಕೃತಜ್ಞತೆಯನ್ನು ಪ್ರಕಾಶಮಾಡಿಳೊಳ್ಳಲು ಅವಕಾಶವನ್ನು ಕೊಡು“ ಎಂದನು. ಮಾಧವನಿಗೆ ಅತನ ಕೋರಿಕೆಯು ಮೀರಲಾರ ದಂತಹುದಾಗಿ ತೋರಿದುದರಿಂದ ಅವನ ಜತೆಯಲ್ಲಿ ಹೋಗಲು ಇಷ್ಟ ಪಟ್ಟ್ರನು, ಆ ವೃದ್ಧನು ನೈಜಾಮನ ಮುಖ್ಯಮಂತ್ರಿ ಗಳಲ್ಲೊ ಬ್ಬನಾ ಗಿದ್ದು ಕೆಲಸದಿಂದ ವಿಶ್ರಾಂತನಾದ ನವಾಬ್ ವಿಕಾರ್-ಉಲ್-ಮು ಲ್ಕನೆಂದೂ, ಆತನ ಜಹಗೀರಿಯು ಅಲ್ಲಿಗೆ ೭ಮ್ಶೆಲಿಗಳ ದೂರದಲ್ಲಿರುವುದಾಗಿಯೂ ತಿಳಿಯಬಂದಿತು. ಸ್ವಲ್ಪ ಹೊತ್ತಿನಲ್ಲೆ ನವಾಬನಕಡೆಯ ಅನುಚರರು ಪಲ್ಲಕ್ಕಿ ಗಳನ್ನೂ ಮೇನಾಗಳನ್ನೂ ಹೊರಸಿಕೊಂಡು ಅದೇ ಮಾರ್ಗದಲ್ಲಿ ಬರುತ್ತಾ ತೋಪಿನಲ್ಲಿ ಇ ವರು ಸ್ವಲ್ಪ ಮಾತ್ರವೂ ಗಾಯವಿಲ್ಲದೆ ಸುರಕ್ಷಿತರಾಗಿರುವುದನ್ನು ಕಂಡು ಪರಮಾನಂದಭರಿ ತರಾದರು . ಒಂದೆರಡು ಗಂಟೆಯೊಳಗೆ ನವಾಬನೂ ಅವನ ಹೆಂಡತಿ ಮಕ್ಕಳೂ ಮಾಧವನೂ ಜಹಗೀರಿಯ ಮುಖ್ಯಗ್ರಾಮವನ್ನ ಸೇರಿ ದರು. ಅಲ್ಲಿ ಒಂದು ವಾರವಿದ್ದು ಅನಂತರ ಎಲ್ಲರೂ ಹೈದರಾಬಾದಿಗೆ ಪ್ರಯಾಣಮಾಡಿದರು. ಅಲ್ಲಿ ನವಾಬನು ಮಾಧವನಿಗೆ ಸಕಲವಿಧ ವಾದ ಸೌಕರ್ಯವನ್ನೂ ಕಲ್ಪಿಸಿಕೊಟ್ಟು. ಅವನ ಸೌಖ್ಯಕ್ಕೆಸ್ವಲ್ಪವೂ ಕುಂದುಬಾರದಂತೆ ತಾನೆ ಸ್ವಂತವಾಗಿ ನೋಡಿಕೊಳ್ಳುತ್ತಿದ್ದ ನು. ಮಾಧವನು ತಾನು ಯಾವ ಉದ್ಗೋಗವೂ ಇಲ್ಲದೆ ಸುಮ್ಮನೆ ಉಂ ಡಾಡಿಭಟ್ಟನೋತಿರುವುದು ಸರಿಯಲ್ಲವೆಂದು ಸೂಚಿಸಿದುದರ ಮೇಲೆ ನವಾಬನುತನ್ನ ಸಮಸ್ತವಾದಆಡಳಿತವನ್ನೂ ಅವನೇ ನೊಡಿಕೊಳ್ಳು ವಂತೆ ಮೊಃಖ್ತೇಸರನನ್ನಾಗಿ ನೇಮಿನಿದನು. ಹೀಗೆ ಒಂದೆರಡು ತಿಂಗಳು ಕಳೆಯಿತು. ಮಾಧವನಮೇಲೆ ನವಾಬನ ಪ್ರೀತಿಯು ದಿನೆದಿನೆ ಹೆಚ್ಚು ತ್ತ ಲಿದ್ದಿತೆ ಹೊರತು ಕಡಿಮೆಯಾಗಲಿಲ್ಲ.. . ಮಾಧವನ ನಮ್ರತೆ, ಪ್ರಾಮಾಣಿಕತೆ, ಔದಾರ್ಯ,. ಮುಂತಾದ ಗುಣಗಳು . ಅನ್ಯಾದೃಶ ವಾದುವಾಗಿದ್ದುದರಿಂದ ಏಲ್ಲರೂ ಅವನನ್ನು ಪ್ರೀತಿಸುತ್ತಿದ್ದ ರು.
ಆ ದಿನ ವರ್ತಮಾನ ಪತ್ರಿಕೆಯಿಂದ ತಂದೆಯ ಕಾಯಿಲೆಯ ಸುದ್ದಿಯು ತಿಳಿಯಬರುತ್ತಲೆ ಮಾಧವನು ನವಾಬನಲ್ಲಿಗೆ ಹೋಗಿ ಆ ಪತ್ರಿಕೆಯನ್ನು ತೋರಿಸಿ ಪುನೆಹೆಗೆ ಹೋಗಲು ಅಪ್ಪಣೆಯನ್ನು ಕೇಳಿದನು. ಅದುವರಿಗೆನವಾಬನಿಗೆ ಮಾಧವನ ಪೂರ್ವೋತ್ತರವುತಿಳಿದಿರಲಿಲ್ಲ ಈಗೆ ಅವನು ಸಾಮಾನ್ಯಮನುಷ್ಯನಲ್ಲವೆಂದು,ತನ್ನಂತಹ ಶ್ರೀಮಂತನಮಗ ನೆಂದೂ ತಿಳಿಯಬಂದಿತು. ಅನಂತರ ಅವನಿಂದಲೇ ನಡೆದ ಸಂಗತಿಯೆಲ್ಲವನ್ನೂ ವಿಚಾರಿಸಿ ಅವನು ಪ್ರತಿಜ್ಞೆಯನ್ನುಳಿಸಿ ಕೊಳ್ಳಲು ಅಪರಿಮಿತವಾದ ಐಶ್ವರ್ಯವನ್ನೂ ಸಹಬಿಟ್ಟು ಬಂದುದಕ್ಕೆ ಬಹಳ ಅಶ್ಲರ್ಯಪಟ್ಟು ಅವ ನನ್ನು ಶ್ಲಾಘಿಸಿದನ್ನು. ತಾನು ಸರ್ವದಾ ಮಾಧವನ ಕ್ಷೇಮಚಿಂತಕ ನಾಗಿರುವುದಾಗಿಯೂ, ಯಾವುದಾದರೂ ಸಮಯವು ಒದಗಿದಾ ಗ ತನಗೆ, ಕೃತಜ್ಞತೆಯನ್ನು ಪ್ರಶಾಶಪಡಿಸಲು ಅವಕಾಶ ಕೊಡದಿರಕೂಡ ದೆಂದೂ,ನವಾಬನು ಮಾಧವನಿಗೆ ತಿಳಿಸಿ ಅವನನ್ನು ಕಳುಹಿಸಿಕೊಟ್ಟನು. ಸುಭದ್ರಗೆ ಸಂಭವಿಸಿದ ವಿಪತ್ತುಮಾಧನನಿಗೆ ರೈಲ್‌ಗಾಡಿಯಲ್ಲಿ ವೃತ್ತಾಂ ತಪತ್ರಿಕೆಯಿಂದ ತಿಳಿಯಬಂದಿತು. . ತಾನು ವಿಶ್ತನಾಥನಿಗೆ ಬರೆದಿದ್ದ ಕಾಗದವು ಹಿಂದಿರುಗಿ ಬಂದುದಕ್ಕೆ ಅವರು ಪುತ್ರೀ ವಿಯೋಗವನ್ನು ತಡೆ ಯಲಾರದೆ ದೇಶಾಂತರ ಹೊರಟುಹೋಗಿರುವುದೆ ಕಾರಣವಿರಬಹು ದೆಂದು ಊಹಿಸಿದನು. ಮಾಧವನ ಭವಿಷ್ಯವು ಕೇವಲ ಅಂಧಕಾರಮ ಯವಾಗಿ, ತೋರಿತು.
*****
ಮುಂದುವರೆಯುವುದು