ದೇವಿ ದಿಗಂತದಾಚೆ ನಿಂತು
ಆಡಿಸುತ್ತಿಹಳೊ ಈ ಜಗವು
ಅವಳ ಮಾಯೆಯ ಮೋಹದಲಿ
ಉರುಳುತಿಹದೊ ಈ ಯುಗವು
ಸ್ವರ್‍ಗ ಮೃತ್ಯೂ ಪಾತಾಳಗಳೆಲ್ಲ
ತಾಯಿ ಆಡುವ ತಾಣಗಳೊ
ಅವಳ ಮಡಲಿನಲಿ ಅಡಗಿಹವೊ
ಎಂಥ ಎಂಥ ಬಾಣಗಳೊ
ದುಷ್ಟರಿಗೆ ಶಿಕ್ಷೆ ಶಿಷ್ಟರಿಗೆ ಶ್ರೀರಕ್ಷೆ
ಸೃಷ್ಟಿ ಸ್ಥಿತಿ ಲಯ ಅವಳ ಆಟ
ನಂಬಿದವರಿಗೆ ಕೈ ಬಿಡಲಾರದವಳು
ವಿಶ್ವದಲಿ ತುಂಬಿದೆ ಅವಳ ಲೀಲಾಟ
ಕಾಸು ಕೊಟ್ಟರೂ ಕಾಣಲಾಕೆ ಏಸೂ
ಕೊಟ್ಟರೂ ಕಾಣಳು
ನಿಷ್ಠೆಯೊಂದೆ ಅವಳ ಪಡೆಯಳು
ಭಕ್ತಿಯೆಂಬುದೇ ಬೇಡ್ವಳು
ನಿನ್ನದೆಲ್ಲವೂ ಅವಳಿಗೆ ಅರ್‍ಪಿಸಿ
ನೋಡಲು ವ್ಯಾಕುಲದಿ ಕಾತರಿಸು
ನಿನ್ನ ಹೃದಯವ ಅರಿತಳಾದರೆ
ಮಾಣಿಕ್ಯ ವಿಠಲನಾಗಿ ಅನುಭವಿಸು
*****