ಪುನಹೆಗೆ ಸ್ವಲ್ಪ ದೂರದಲ್ಲಿ ಸಣ್ಣ ಅಗ್ರಹಾರ ವಿರುವುದು. ಈ ಅಗ್ರಹಾರದಲ್ಲಿ ವಿಶ್ವನಾಥನೆಂಬ ಬ್ರಾಹ್ಮ ಣನು ವಾಸವಾಗಿದ್ದನು. ಅವನಿ ಗೆ ಒಬ್ಬಳೇ ಮಗಳು .. ಅವಳ ಹೆಸರು ಸುಭದ್ರೆ.
ಸುಭದ್ರೆಗೆ ೧೩ ವರ್ಷ ತುಂಬಿದ್ದಿತು; ಇನ್ನೂ ಮದುವೆಯಾಗಿರಲಿಲ್ಲ. ವಿಶ್ವನಾಥನಿಗೂ. ಅವನ ಹೆಂಡತಿ. ರಮಾಬಾಯಿಗೂ ಹಗಲೂ ಇರುಳೂ ಮಗಳ ಮದುವೆಯ ಚಿಂತೆ. ಸುಭದ್ರೆಗೆ ಎಂಟು ವರ್ಷ ತುಂಬಿದಾಗಿನಿಂದ ಅವರು ಪ್ರಯತ್ನ ಪಡುತ್ತಿದ್ದರೂ ಅವಳಿಗೆ ಒಬ್ಬ ವರನು ದೊರೆಯುವುದು ಅಸಾಧ್ಯವಾಗಿದ್ದಿತು.
ಸುಭದ್ರೆಯು ಚಲುವಿಕೆಯಲ್ಲಿಯೂ, ಒಳ್ಳೆಯತನದಲ್ಲಿಯೂ, ಬುದ್ಧಿ ಕುಶಲತೆಯಲ್ಲಿಯೂ, ಅವಳ ಓರಗೆಯ ಹುಡುಗಿಯರೆಲ್ಲರಿ ಗಿಂತಲೂ ಮೇಲಾಗಿದ್ದಳು. ಆದರೇನು ? ಬಡವನ ಮಗಳು. ಅದು ದರಿಂದಲೇ ಯಾರೂ ಅವಳನ್ನು ತಂದುಕೊಳ್ಳಲು ಒಪ್ಪುತ್ತಿರಲಿಲ್ಲ.
ಒಂದು ದಿನ. ಸಾಯಂಕಾಲ. ವಿಶ್ವನಾಥನೂ ರಮಾಬಾಯಿಯೂ ಇದೇ ವಿಚಾರವಾಗಿ ಹಲವು ಒಗೆಯಲ್ಲಿ ಯೋಚನೆಯನ್ನು, ಮಾಡುತ್ತಾ ಕುಳಿತಿದ್ದರು. . ಅಗ ಒಬ್ಬ ದೊಡ್ಡ ಮನುಷ್ಯನು ಅವರ ಮನೆಗೆ ಬಂದನು. ಅವನು ಕನ್ಯಾನ್ಕೇಷಣಕ್ಕಾ ಗಿ ಬಂದಿರುವುದಾಗಿ ತಿಳಿಯಬಂದಿತು. . ಅವನ ವಜ್ರದ ಹತ್ತಕಡಕು, ಪಚ್ಚೆ, ಕೆಂಪು, ವಜ್ರಗಳು ಕೆತ್ತಿದ ಉಂಗುರಗಳು, ಕುತ್ತನಿಯ ಅಂಗರೇಕು, ಜರತಾ ರಿಯ ರುಮಾಲು, ಇವುಗಳಲ್ಲವನ್ನೂ ನೋಡಿ ಆ ಬಡ ದಂಪತಿಗಳು ಬೆಕ್ಕಸ ಬೆರಗಾದರು. ವಿಶ್ವನಾಥನು, “ನಿಮ್ಮಂತಹ ದೊಡ್ಡ ಮನು ಷ್ಯರ ಸಂಗಡ ಬಾಂಧವ್ಯವು ದೊರಕಿದುದೇ ಆದರೆ ನಮ್ಮ್ರ ಪೂರ್ವ ಜನ್ಮದ ಸುಕೃತದ ಫಲವೇ ಸರಿ. ನಕ್ಷತ್ರಾನುಕೂಲವನ್ನು ನೋಡಿ ಅನಂತರ ಮುಂದಣ ಮಾತನ್ನಾ ಡಬಹುದು“ ಎಂದನು. ಹೊಸಬನು, . ನಾನು ಮೊದಲು ಕನ್ಯೆಯನ್ನು ನೋಡಬೇಕು“ ಎಂದನು, ರಮಾ ಬಾಯಿಯು ಕಿರುಮನೆಯಲ್ಲಿ ಓದುತ್ತ ತುಳಿತಿದ್ದ ಸುಭದ್ರೆಯನ್ಶು ಕರೆದುಕೊಂಡು ಬಂದಳು. ಅನಳನ್ನು. ನೋಡಿ. ಹೊಸಬನಿಗೆ ಬಲು ಸಂತೋಷವಾಯಿತು. “ಇಂತಹ ಚೆಲುವೆಗೆ, ವರನು ಸಿಕ್ಕಲಿಲ್ಲವೇ“ ಎಂದನು ಸುಭದ್ರೆಯು ನಾಚಿಕೊಂಡು ಒಳಗೆ ಹೋದವಳು ಹಾಗೆಯೆ ಕೊಠಡಿಯ ಬಾಗಿಲಲ್ಲಿ ಇವರ ಮಾತುಗಳನ್ನು ಅಳಿಸುತ್ತಾ ನಿಂತು ಕೊಂಡಳು. . ವಿಶ್ವನಾಥನು. “ರಾಯರೆ, ವರನ. ಜಾತಕವನ್ನು ಕೊಡೋಣಾಗಲಿ, ನೋಡುತ್ತೇನೆ. ನನಗಗ ಸ್ತಲ್ತ ಜ್ಯೋತಿಷ್ಯ ಪರಿಚಯವುಂಟು“ ಎಂದನು.
ಶ್ರೀಧರರಾಯ ( ಅದೇ ಹೊಸಬನ ಹೆಸರು) __ಜಾತಕವನ್ನ ನೋಡಬೇಕಾದುದೇನು, ಸ್ವಾಮಿ, ಮನಸ್ಸು ಒಪ್ಪಿ ದರೆ ಸರಿ. ವಿಶ್ವನಾಥ-_ಮನಸ್ಸು ಒಪ್ಪಿತೆಂದು ಕುಲಗೋತ್ರ ತಿಳಿಯದೆ ಕೊಡುವುದಕ್ಕಾ ಗುವುದೆ ? ಶ್ರೀಧರ– ವರನು ದೇಶಸ್ಥ ಬ್ರಾಹ್ಮಣ, ಕಾಶ್ಯಪಗೋತ್ರ, ಬೇಕಾದಷ್ಟು ಹಣವಿದ್ಯೆ, ನಿಮ್ಮ ಮಗಳಿಗೆ ಮೈತುಂಬ ಒಡವೆಯನ್ನುಕ್ಕುವುದಲ್ಲದೆ, ನಿಮ್ಮ ಮನಸ್ಸಿಗೂ ತೃಪ್ತಿ ಯಾಗುವಂತೆ ಸನ್ಮಾನವನ್ನು ಮಾಡುತ್ತಾನೆ. ವಿಶ್ವನಾಥ.–ಇದೇನೊ ನಮಗೆ, ಕನಸಿನಂತೆ ತೋರುತ್ತಿದೆ, ಅಂತಹ ವರನು. ಸಿಕ್ಕುವಷ್ಟು ಪುಣ್ಯವನ್ನು ನಾವು ಮಾಡಿರುವೆವೆ ? ಶ್ರೀಧರ– ವರನು ನಿಮ್ಮೆದುರಿಗೇ ಕುಳಿತುಕೊಂಡು ಮಾತು ಕೊಡುತ್ತಿರುವಾಗ ನಿಮಗೆ ಅಪನಂಬಿಕೆಯೇ ? ವಿಶ್ವನಾಥ — ಅದೇನು ಸ್ನಾಮಿ, ಹೀಗೆ ಮಾತನಾಡುತ್ತೀರಿ, ನನಗಾವುದೂ ಅರ್ಥವಾಗುವುದಿಲ್ಲ. ಶ್ರೀಧರ– ನಿಮ್ಮ ಲ್ಲಿ. ಮುಚ್ಚು ಮರೆಯೇಕೆ, ಕನ್ಯೆ ಬೇಕಾಗಿರುವುದು ನನಗೇ- ವಿಶ್ವನಾಥ- ಏನು, ಏನು, ನಮಗೆ ? ಶ್ರೀಧರ—ಅದೇನು ಅಷ್ಟು ಆಶ್ಚರ್ಯ ಪಡುತ್ತೀರಿ ? ನಾನು ಹೇಳುವುದನ್ನು ಪೂರಾ ಕೇಳಿ! ನಾನೇನೋ ವಯ ಸ್ಸಾದವನಂತೆ ತೋರಿದರೂ ನನಗಿನ್ನೂ ಐವತ್ತು ವರ್ಷ ಕೂಡ ಆಗಿಲ್ಲ. ನನಗೆ ನಿಮ್ಮ ಹುಡುಗಿಯನ್ನು ಮದುವೆ ಮಾಡಿಕೊಳ್ಳಬೇಕೆಂಬ ಇಷ್ಟವಿದೆ. ಇದ ಕ್ಕೋಸ್ಕರ ನೀವೇನು ಕೇಳಿದರೂ. ಕೊಡಲು ಸಿದ್ಧ ನಾಗಿದ್ದೇನೆ- ವಿಶ್ವನಾಥ–ಅಯ್ಯೋ ! ನಾನು ಮಗಳನ್ನು ಮಾರಲೆ ? ನಾನು ಹುಟ್ಟಿದುದಕ್ಕೆ ಸಾರ್ಥಕವಾಯಿತು. ಶ್ರೀಧರ-ನೀವು ಆರೀತಿ ಯೋಚನೆ ಮಾಡಕೂಡದು ನಿಮ್ಮ ಮಗಳನ್ನು ನನಗೆ ಕೊಟ್ಟರೆ ನೀವು ನನಗೆ ಕೇವಲ ಆತ್ಮೀಯರಾಗುವಿರಿ, ನಾನು ಕೊಡುವ ಹಣವು ನಿಮ್ಮ ಪೋಷಣೆಗೋಸ್ಕರವೆಂದು ತಿಳಿಯ ಬೇಕಲ್ಲದೆ ನಿಮ್ಮ ಮಗಳಿಗೋಸ್ಕರ ಕೊಡುವ ಕ್ರಯ ವೆಂದು ಭಾವಿಸಕೂಡದು . ವಿಶ್ವನಾಥ_(ಹೆಂಡತಿಯಕಡೆನೋಡಿ) ನೀನೇನು ಹೇಳುವೆ? ರಮಾಬಾಯಿ_ ಇಂತಹ ದೊಡ್ಡ ಮನುಷ್ಯರ ಮಾತನ್ನು ತೆಗೆದುಹಾಕುವುದು . ಹೇಗೆ ? ಎಷ್ಟೋ ಜನರು ಪಷ್ಠ ಪೂರ್ತಿಶಾಂತಿಯಾದ ಮೇಲೆ ಕೂಡಾ ಮದುವೆ ಮಾಡಿಕೊಂಡು ಮಕ್ಕಳು ಮರಿಗಳನ್ನು ಪಡೆದು ಸುಖವಾಗಿದ್ದಾರೆ. ವಿಶ್ವನಾಥ -ಸರಿ, ನಿನಗೆ ಒಪ್ಪಿಗೆಯೆಂಬುದು ಗೊತ್ತಾ ಯಿತು. ಇನ್ನು ನನ್ನದೇನಿದೆ. (ಶ್ರೀಧರರಾಯನನ್ನು ಕುರಿತು) . ರಾಯರೆ, ನಿಮ್ಮ ಇಷ್ಟದಂತೆ ಆಗಲಿ, ನಾಳೆ ಶುದ್ದ ಸಪ್ತಮೀ ದಿನವೇ ಲಗ್ನವಿದೆ, ನಮಗೂ ಕಾಲವಿಳಂಬಕ್ಕೆ ಅವಕಾಶವಿಲ್ಲ.– ಈ ಮಾತನ್ನು ಕೇಳಿದೊಡನೆಯೇ ಶ್ರೀಧರರಾಯನ ಸಂತೋ ಷಕ್ಕೆ ಪಾರವೇ ಇರಲಿಲ್ಲ. ಸ್ವಾಮಿ, ನನಗೆ ಬೇಕಾಗಿರು ವುದೂ ಅದೇ “ಶುಭಸ್ಯ ಶೀಘ್ರಂ” ಎಂದನು. ರಮಾಬಾಯಿಯು —`ಮಾತು ನಿಶ್ಚಯವಾಗಲಿ“ ಎಂದಳು. ಶ್ರೀಧರ ~–ಅದಕ್ಕೇನು ನೀವು ಹೇಳಿದಷ್ಟು ಕೊಡಲು ಸಿದ್ದ ನಾಗಿದ್ದೇನೆಂದು. ಆಗಲೇ ಹೇಳಿದೆನಷ್ಟೆ. ರಮಾಬಾಯಿ….. ನಮಗೆ ಎರಡುಸಾವಿರರೂಪಾಯಿ ಕೃಷ್ಣಾ ರ್ಪಣವಾಗಿ.. ಕೊಡಬೇಕು, ಅಲ್ಲದೆ ಹುಡುಗಿಗೆ ಒಂದ್ದು. ತೊಡಿಗೆ. ನಗಗಳು ಒಂದು ಪೀತಾಂಬರ ಇಷ್ಟೂ ಆಗಬೇಕು. ಶ್ರೀಧರ-=~ಇಷ್ಟೇ ತಾನೆ, ಇದೋ ನಾಲ್ಕು ಸಾವಿರ ರೂಪಾ ಯಿನ “ನೋಟು“ ಗಳನ್ನು ಈಗಲೇ ಕೊಡುತ್ತೇನೆ, ನಿಮಗೆ ಬೇಕಾದಷ್ಟು ಇಟ್ಟುಕೊಂಡು, ಮಗಳಿಗೆ ಬೇಕಾದಷ್ಟು ನಗವನ್ನು ಮಾಡಿಸಿ ಉಳಿದುದನ್ನು ಮದುವೆಗೋಸ್ಟ್ರರ ವೆಚ್ಛ ಮಾಡಿ. ಇದರಲ್ಲೊಂದು ಕಾಸನ್ನೂ ನಾನು ಕೇಳುವುದಿಲ್ಲ. ವಿಶ್ವನಾಥನಿಗೆ ಅಷ್ಟೊಂದು ನೋಟುಗಳನ್ನು ನೋಡುತ್ತಲೆ ಕಣ್ಣುಗಳರಳಿದುವು. ” ಏನಾದರೂ ಆಗಲಿ, ಈ ನನ್ನ ಹುಟ್ಟು ಬಡ ತನವಾದರೂ ಮುಕ್ತಾಯವಾಗುವುದು“ ಎಂದಂದುಕೊಂಡು ಅವು ಗಳನ್ನು ತೆಗೆದಿಟ್ಬುಕೊಂಡನು. ಇವರಸಂಭಾಷಣೆಯುನಡೆಯುತ್ತಿದ್ದಾಗಸುಭದ್ರೆಗೆ ಮೊದಲು ಕೊಂಚಹೊತ್ತು ಸಂತೋಷವೂ ಅನಂತರ ಸ್ವಲ್ಪ ಸಂದೇಹವೂ ಉಂಟಾಗಿದ್ದಿತು. ಕೊನೆಯ ಮಾತುಗಳು ಕಿವಿಗೆಬಿದ್ದೊಡೆನೆಯೆ ಅವಳಿಗೆ ಸಿಡಿಲು ಬಡಿದಂತಾಯಿತು. ನಿಲ್ಲಲು ತ್ರಾಣವಿಲ್ಲದೆ ಕೂತುಬಿಟ್ಗಳು.
ಶ್ರೀಧರರಾಯನು ಲಗ್ನಕ್ಕೆ ಎರಡು ದಿವಸಮುಂಚಿತವಾಗಿ ಬರುವುದಾಗಿ, ಹೇಳಿ ಹೊರಟುಹೋದನು. ಆನಂತರ . ರಮಾಬಾಯಿಯು ಸುಭದ್ರೆ, ! ಸುಭದ್ರೆ ! ಎಂದು ಕೂಗಿದಳು –ಉತ್ತರ ಬರಲಿಲ್ಲ, ಕಿರು ಮನೆಯೊಳಕ್ಕೆ ಹೋಗಿ ” ಸುಭದ್ರೆ ! ಊಟಕ್ಕೇಳಮ್ಮ“ ಎಂದಳು. ಸುಭದ್ರೆಯು “ಅಮ್ಮ ! ಹಸಿವಿಲ್ಲ, ತೊಂದರಮಾಡಬೇಡ“` ಎಂದು ಖಂಡಿತವಾಗಿ ಹೇಳಿಬಿಟ್ಟಳು.
ಸುಭದ್ರೆ ಯಾವಾಗಲೂ ಈ ರೀತಿ ಮಾತನಾಡಿದವಳಲ್ಲ. ಆದರೂ ರಮಾಬಾಯಿ ಕಾರಣವೇನೆಂಬುದನ್ಟು ಯೋಚಿಸಲೇ ಇಲ್ಲ. ವಿಶ್ವನಾಥನು ಊಟಕ್ಕೆ ಕುಳಿತುಕೊಳ್ಳುವಾಗ್ಗೆ “ಸುಭದ್ರೆ ಎಲ್ಲಿ ? ಊಟಕ್ಕೆ ಬರುವುದಿಲ್ಲವೆ” ಎಂದು ಹೆಂಡತಿಯನ್ನು ಕೇಳಲಾಗಿ ಅವಳು “ ಇಲ್ಲವಂತೆ, ಹಸಿವಿಲ್ಲವೆನ್ನುತ್ತಾಳೆ`? ಎಂದಳು. ವಿಶ್ವನಾಥ — ನಾವುಮಾತನಾಡುತ್ತಿದ್ದ ವಿಷಯದಲ್ಲಿ ಅವಳಿ ಗೇನಾದರೂ ಅಸಮಾಧಾನವೂ ? ಈ ಕಾಳಕ್ಕೆ ತಕ್ಕ ಹಾಗೆ ಅವಳಿಗೂ ತಿಳಿಸಿ ಮಾತು ಕೊಟ್ಟಿದ್ದರೆ ಚೆನ್ನಾ ಗಿತ್ತು-ಆ ಮೇಲೆ ನಮ್ಮ ಭಾರವು ತಪ್ಪುತ್ತಿತ್ತು.
ರಮಾಬಾಯಿ—“ಒಳ್ಳೇಕಾಲ. ಅಷ್ಟಿಲ್ಲದೆ ಹೆಂಗಸರು ದರ್ಬಾರು ಮಾಡುತ್ತಾರೆಯೆ? ಅದು ಹೇಗಾದರೂ ಇರಲಿ, ನಮ್ಮ ಸುಭದ್ರೆ ಪೂರ್ವಕಾಲದವಳು ಈ ಕಾಲದವರ ಹಾಗಲ್ಲ. ಮೈತುಂಬಾಒಡವೆಯನ್ನಿಟ್ಟು ಬಿಟ್ಟರೆ ಎಲ್ಲಾ ಅಸಮಾಧಾನವೂ. ಹೋಗುತ್ತದೆ ” ಎಂದಳು ಗಂಡನು ಸುಮ್ಮನಾದನು
ಸುಭದ್ರೆಗೆ ಹುಚ್ಚು ಹಿಡಿದಂತಾಯಿತು, ಏನೊಂದೂ ತೋಚದೆ ಸುಮ್ಮನೆ ಅಳತೊಡಗಿದಳು. ಯಾವರೀತಿಯಲ್ಲಿಯೋಚಿಸಿದರೂ ಮನ ಸ್ಸೊಪ್ಪಲಿಲ್ಲ. ತಂದೆತಾಯಿಗಳೆ ತನಗೆ ಮೃತ್ಯುಗಳೆಂಬುದು ಈಗ ತಿಳಿಯಿತು. ಅವರು ಹಣದ ಆಸೆಗೆ ತನ್ನನ್ನು ಮಾರಿ ಬಿಡುವರೆಂದು ಎಂದಿಗೂ ಅವಳು ಯೋಚಿಸಿರಲಿಲ್ಲ. ಅದರಲ್ಲಿಯೂ ಆ ವಕ್ರಾಕಾರ ವುಳ್ಳ ಮುದುಕನಿಗೆ ಕೊಡುವರೆಂದು ಕನಸಿನಲ್ಲಿಯೂ ನೆನಸಿರಲಿಲ್ಲ. ‘ಓಡಿ ಹೋಗೋಣವೆಂದರೆ ಅಬಲೆಯಾದ ಹುಡುಗಿ, ಅಲ್ಲದೆ. ಎಲ್ಲಿ ಹೋಗುವುದು? ಹೀಗೆ ಹೋಗುವುದು :ಅಯ್ಯೋ ! ಭಗವಂತನೆ
ಏತಕ್ವೆ ಸೃಷ್ಟಿಸಿದೆ? ಅವನನ್ನು ಮದುವೆಯಾಗುವ ಮೊದಲು ಸಾವಾದರೂ ಬರಬಾರದೆ ?” ಎಂದು ಅನೇಕ ವಿಧವಾಗಿ ಹಂಬಲಿಸಿದಳು. ತಾಯಿಯ ಭಯದಿಂದ ಗಟ್ರಿಯಾಗಿ ಅಳಲಾರದೆ ಸುಮ್ಮನೆ ಕಣ್ಣೀರು ಸುರಿಸುತ್ತಿದ್ದಳು. ಅಷ್ಟರಲ್ಲಿಯೇ ತಾಯಿಯು ಬರುವ ಸದ್ದನ್ನು ಕೇಳಿ ಕಣ್ಣೊರಸಿಕೊಂಡು ಸುಮ್ಮನಾದಳು.ರಮಾಬಾಯಿ ಸುಭದ್ರೆಯನ್ನು ಪುನಃ ಊಟಕ್ಕೆಬ್ಬಿಸಿದಳು. ಅವಳು ಏಳಲಿಲ್ಲ. ಈಗರಮಾಬಾಯಿಯ ಮನಸ್ಸಿಗೆ ಸ್ವಲ್ಪ ಹೊಳೆಯಿತು. ಆದರೂ ಕೆಣಕಬಾರದೆಂದಂದು ಕೊಂಡು. ಹೊರಟು ಹೋದಳು.
ಸುಭದ್ರೆಗೆ ರಾತ್ರಿಯೆಲ್ಲಾ ನಿದ್ರೆ ಬರಲಿಲ್ಲ. ಯಾವಾಗಲೂ ಆ ಮುದುಕನ ಸ್ವರೂಪವೇ ಕಣ್ಣೆದುರಿಗೆ ಬಂದು ನಿಂತು, ಭಯವನ್ನುಂ ಟುಮಾಡುಮಾಡುತ್ತಿತ್ತು. ಮಹಾಭಾರತದಲ್ಲಿ ಉಳ್ತಳಾದ ಸುಭದ್ರೆಯ ಪರಿ ಣಯವನ್ನು ಚೆನ್ನಾಗಿ ಕೇಳಿದ್ದಳು. ಹಾಗೆಯೆ ಯಾವನಾದರೂ ಮಹಾತ್ಮನು ಕಷ್ಟನಿವಾರಣೆಮಾಡುವನೆ ? “ಅಯ್ಯೋ ! ಇದ್ದು ಕಲಿ ಯುಗ! ಆಗಿನ ಅರ್ಜುನನನ್ನು ಈಗ ಬಾರಂದರೆ ಎಲ್ಲಿಂದ ಬಂದಾನು? ಸುಮ್ಮನೆ ಭ್ರಾಂತಿ.“ ಎಂದು ನಾನಾ ವಿಧವಾಗಿ. ಯೋಚನೆ ಮಾ ಡುತ್ತಾ ಆ ರಾತ್ರಿಯನ್ನು ಬಹು ಪ್ರಯಾಸದಿಂದ ಕಳೆದಳು.
*****
ಮುಂದುವರೆಯುವುದು