ದೇವಿ ನೀನು ಈ ಜಗವನ್ನ ಆಡಿಸುವಾಕೆ
ನೀನೇ ಮಾಯೆ
ಸಕಲ ಜೀವಾತ್ಮಗಳ ತಾಯೆ
ನೀನೇ ಕಾಯ
ಮೋಡಗಳ ಮರೆಯಲಿ
ಚಂದ್ರ ಅವಿತರೆ ಇಲ್ಲವಾದನೇ
ರಾತ್ರಿಯ ಕತ್ತಲಿನಲಿ
ಸೂರ್‍ಯ ಕಾಣದಾದರೆ ಕರಗಿದನೇ
ಹುಚ್ಚು ಭ್ರಮೆಗೆ ಮನುಜ
ಲೋಕವೆ ಸತ್ಯವೆಂದಿಹನು
ಉಸಿರು ನಿಂತರಾಯ್ತು
ತನ್ನ ದೇಹವೇ ತೊರೆದಿಹನು
ಕ್ಷಣಿಕ ಮೋಹ ದಾಹಗಳು
ನಿನ್ನ ಶಾಶ್ವತವಾಗಿ ನುಂಗುತಿಹವು
ಕನಸುಗಳಿಗೆ ವಾಸ್ತವವೆಂದು
ನಿನ್ನ ಮರೆಸಿ ಹೇಳುತಿಹವು
ಈ ಲೋಭ ಅವಗುಣಗಳಲಿ
ನೀನು ಕೋಟಿ ಜನುಮ ಕಳೆದಿಹೆ
ಈಗೊಂದು ಚಣ ಯೋಚಿಸು
ಈನರ ಜನುಮ ಹಾಳು ಮಾಡದಿಹೆ
ತಾಯೆ ನಿನ್ನ ಕರೆಯುತಿಹಳು
ಆ ದೂರ ದಿಗಂತದಿ ನಿಂತು
ತಬ್ಬಲಿ ನೀನಲ್ಲ ಕಂದ
ಮಾಣಿಕ್ಯ ವಿಠಲನಿಗೆ ಎತ್ತಿಕೊಳ್ಳುವಳು
*****