ಶಂಕರರಾಯನಿಗೆ ಪುನಹೆಯ ಡಾಕ್ಟರುಗಳು ಮಾಡಿದ ಚಿಕಿತ್ಸೆಯಿಂದ ಸ್ವಲ್ಪವೂ ಗುಣವಾಗಲಿಲ್ಲವೆಂದು ಹಿಂದೆಯೇ ಹೇಳಿದ್ದೇವಷ್ಟೆ. ಅತನ ರೋಗದಸಮಾಚಾರವು ಗವರ್ನರ` ಸಾಹೇಬನಿಗೆ ಮುಟ್ಟಿ ಆತನು ತನ್ನ ಸ್ವಂತ ವೈದ್ಯನಾದ ಕಾಕ್ಸ್ ಎಂಬುವನನ್ನು ಕಳುಹಿಸಿ ಕೊಟ್ಟನು. ಕಾಕ್ಸ್ ಸಾಹೇಬನು ಶಂಕರರಾಯನ ಸ್ಥಿತಿಯನ್ನು ನೋಡಿ ಔಷದವನ್ನು ಕೊಡುವುದರಿಂದ ಯಾವ ಉಪಯೋಗವೂ ಇಲ್ಲವೆಂದು ತಿಳಿದು ಹಿಂದೆಹೇಳಿದ ರೀತಿಯಲ್ಲಿಎಲ್ಲಾ ವಾರ್ತಾಪತ್ರಿಕೆಗಳಲ್ಲಿಯೂ ಪ್ರಕಟಿಸಿ ಶಂಕರರಾಯನಿಗೆ ಮಗನು ಶೀಘ್ರದಲ್ಲಿಯೆ ಬರುವನೆಂಬ ಆಶೆಯನ್ನು ಹುಟ್ಟಿಸಿ ಮಾಧನನ ಬರುವಿಕೆಯನ್ನೇ ನಿರೀಕ್ಷಿಸುತ್ತಿದ್ದನು. ಅವನ ಯುಕ್ತಿಯು ಕೈಗೂಡಿತು. ಮಾಧವನು ಬಂದೇ ಬಂದನು.
ಮಾಧವನು ಮನೆಗೆಬಂದಾಗ್ಗೆ ಕಾಕ್ಸ್ ಸಾಹೇಬನ ಶಂಕರ ರಾಯನಕೊಠಡಿಯಲ್ಲಿ ಅವನೊಡನೆ ನಾನಾಮಾತುಗಳನ್ನಾಡುತ್ತಾ ಕುಳಿತಿದ್ದನು. ನಿಮ್ಮ ಮಗನು ಕೂಡಲೆ ಬರುವನು. ಇವತ್ತಿನ ರೈಲಿ ನಲ್ಲಿಯೇ ಬಂದಿರಬಹುದು. ಮನಸ್ಸಿನ ಕೊ ರತೆಯನ್ನು ಬಿಡಿ; ಅವನನ್ನು ನೋಡಿದಕೂಡಲೆ ನಿಮ್ಮ ಕಾಯಿಲೆಯು ಗುಣವಾಗುವುದು.“ಎಂದು ಹೇಳುತ್ತಿರುವಾಗಲೆ ಮಾಧವನು ಕೊಠಡಿಯೊಳಕ್ಕೆ ಬಂದನು. ಅವ ನನ್ನು ನೋಡಿದೊಡನೆಯೆ ಶಂಕರರಾಯನು ಕಣ್ಣುಗಳನ್ನು ಮುಚ್ಚಿ ಕೊಂಡು ನಿಶ್ಚೇಷ್ಟನಾಗಿ ಮುಲಗಿಕೊಂಡನು. ಮಾಧವನು ಕೂಡಲೆ ಹೋಗಿ ತಂದೆಯ ಕಾಲುಗಳನ್ನು ಹಿಡಿದುಕೊಂಡನು. ಕಣ್ಣಿನಲ್ದಲಿ ನೀರು ಸುರಿಯುತ್ತಿತ್ತು ಡಾಕ್ಟರ ಸಾಹೇಬನು ಶಂಕರರಾಯನ ನಾಡಿಯನ್ನು ಹಿಡಿದು ನೋಡಿ, “ಪ್ರಮಾದವೇನೂ ಇಲ್ಲ. ಹೆದರಬೇಡಿ“ . ಎಂದು ಮಾಧವನಿಗೆತಿಳಿಸಿ ಶಂಕರರಾಯನ ಎದೆಯಮೇಲೂ ನೆತ್ತಿಯಮೇಲೂ ಒದ್ದೆಯಒಟ್ಜೆಯನ್ನು ಹಾಕಿದನು ಸ್ವಲ್ಪಹೊತ್ತಿನಲ್ಲಿಯೆಶಂಕರರಾ ಯುನು ಕಣ್ದೆರೆದು ಮಾಧವನನ್ನು ಚೆನ್ನಾ ಗಿನೋಡಿ, ನನ್ನ ನ್ನು ಮನ್ನಿಸಿರುವೆಯಾ ಎಂದು ಕೇಳಿದನು. ಮಾಧವನು “ನಾನು ತಮ್ಶ್ರನ್ನು ಬಿಟ್ಟು ಹೋಗಿ ಇಷ್ಟರ ಮಟ್ಟಿನ ಮನೋವ್ಯಥೆಗೂ ಶಾರೀರಕಜಾಡ್ಯಕ್ಳೂ ಗುರಿಮಾಡಿ ದುದಕ್ಕೆ ತಮ್ಮ ಲ್ಲಿ ಎಷ್ಟು ಕ್ಷಮೆಯನ್ನು ಬೇಡಿದರೂ ಸ್ವಲ್ಪವೆ ಇದೆ“ ಎಂದನು. ಶಂಕರರಾಯನು, ” ಖಂಡಿತವಾಗಿ ನಿನ್ನ ತಪ್ಪು ಎಳ್ಳಷ್ಟೂ ಇಲ್ಲ. . ನೀನು ಈಶ್ವರಸಾಕ್ಸಿ,ಯಾಗಿ ಪ್ರತಿಜ್ಞಿಮಾಡಿರುವುದು ನನಗೆ ತಿಳಿಯದೇ ಹೋದುದರಿಂದ ಇಷ್ಟು ಅನರ್ಥಕ್ಕೆ ಕಾರಣವಾಯಿತು. ನೀನು ಇಲ್ಲಿಂದ ಹೊರಟು ಹೋಗಿ ಕಷ್ಟಗಳನ್ನ ನುಭವಿನಿ ದೆಯೊ“ ಎಂದು ನಿಟ್ಟುಸಿರು ಬಿಟ್ಟನು. ಮಾಧವನು ತಂದೆಯ ಪಾದಾರವಿಂದದಪ್ರಭಾವದಿಂದ ತನಗೆಯಾವನತೊಂದರಿಯೂ ಆಗಲಿಲ್ಲವೆಂದೂ, ಹೈದರಾಬಾದಿನಲ್ಲಿ ಒಬ್ಬ ಶ್ರೀಮಂತನ ಸಹಾಯವು ದೊರೆತಿರುವು ದೆಂದೂ ತಾನು ಹೊರಟ ಮೊದಲು ನಡೆದ ಸಂಗತಿಯನ್ನೆ ಲ್ಲಾ ವಿಶದವಾಗಿ ತಿಳಿಸಿದನು. ಶಂಕರರಾಯನು ಮಗು, ನೀನೂ ನಿನ್ನ ಹೆಂಡತಿಯೂ ಸುಖವಾಗಿರುವುದನ್ನು ನೋಡಬೇಕೆಂದು ಬಹುಳುತೂ ಹಲವಿದೆ. ಈ ಕ್ಷಣವೆ ಅವಳನ್ನು ಬರಮಾಡು. ಎಂದು ಹೇಳಿದುದಕ್ಕೆ ಮಾಧವನು `ನಮ್ಮ ಮಾವನವರು ಊರು ಬಿಟ್ಟು ಎಲ್ಲಿಯೋ ಹೋಗಿದ್ದಾರೆಂದು ವರ್ತಮಾನ. ಅವರು ಊರಿಗೆ ಬಂದಮೇಲೆ ಆಗಬಹುದು. ಈಗ ತಾವು ಸ್ವಸ್ಥಚಿತ್ತರಾಗಿ ಶರೀ ರಕ್ಕೆ ಆರೋಗ್ಯವನ್ನುಂಟ:ಮಾಡಿಕೊಳ್ಳ ಬೇಕೆಂದು ನನ್ನ ಪ್ರಾರ್ಥನೆ“ಎಂದನು. ಅಷ್ಣುಹೊತ್ತಿಗೆ ಗಂಗಾಬಾಯಿ ಯೂ ಅಲ್ಲಿಗೆ ಬಂದಳು. ಮಾಧವನು ಎದ್ದು ಆಕೆಗೆ ನಮಸ್ತ್ರರಿಸಿದನು ಅವಳು ಶಂಕರರಾಯನನ್ನು ಕುರಿತು ” ಭಾವ! ಇನ್ನು ನಿಮ್ಮ ಕಾಯಿಲೆ ಹೋಯಿತು. ನಿಮ್ಮ ಮಗನು ಅನ್ನ ವಿಲ್ಲದೆ ಎಲ್ಲಲ್ಲಿ ಅಲೆಯುತ್ತಾನೊ ಎಂದು ಯೋಚನೆ ಮಾಡುತ್ತಿದ್ದಿರಿ. ಅವನ ಮುಖವನ್ನು ನೋಡಿ! ಇಲ್ಲಿದ್ದುದಕ್ಕಿಂತ ಎಷ್ಟೋ ಗೆಲುವಾಗಿದೆ. ದೇಶವನ್ನು ಸುತ್ತಿದುದ ರಿಂದ ಅವರಿಗೆ ಅನುಕೂಲವಾಯಿತೆ ಹೊರತು ಪ್ರತಿಕೂಲವಿಲ್ಲ` ` ಏಂ ದಳು, ಶಂಕರರಾಯನು “ ಸುಭದ್ರೆಯನ್ನು ನೋಡಿದಮೇಲೆ ನನ್ನ ಕಾಯಿಲೆಯು ಸಂಪೂರ್ಣವಾಗಿ ಗುಣವಾಗುವುದು“ಎಂದನು.ಕಾಕ್ಸ್ ಸಾಹೇಬನು. ಸ್ವಾಮಿ! ಇನ್ನು ನನಗೆ ಅಪ್ಪಣೆ ಕೊಟ್ಟರೆ ನಾನು ಹೋಗು ವೆನು. ವಾರಕ್ಕೊಂದಾವರ್ತಿ ತಮ್ಮನ್ನು ಬಂದು ನೋಡಿಕೊಂಡು ಹೋಗುತ್ತೇನೆ. ತಮ್ಮ ರಕೋಗವೇನೋ ಶೀಘ್ರದಲ್ಲಿಯೆ ಗುಣವಾಗು ವುದರಲ್ಲಿ ಸಂದೇಹವಿಲ್ಲ” ಎಂದನು. ಶಂಕರರಾಯನು ತನ್ನ ತಲೆದಿಂಬಿನ ಕೆಳಗಿನಿಂದ ನೂರು ಸವರನ್ ಗಳನ್ನು ತೆಗೆದು. ಕಾಕ್ಸ್ ಸಾಹೇಬನಿಗೆ ಕೊಡುವುದಕ್ಕೆ ಹೋದನು. ಅವನು ತೆಗೆದುಳೊಳ್ಳಲಿಲ್ಲ. ನಾನು ಯಾವ ಜಿಕಿತ್ಸೆಯನ್ನೂ ಮಾಡದೆ ತೆಗೆದುಕೊಳ್ಳುವುದು ಸರಿಯಲ್ಲ ವೆಂದು ಹೇಳಿ ಶಂಕರರಾಯನ ಅಪ್ಪಣೆಪಡೆದು, ಮಾಧವರಾಯನ ಕೈ ಕುಲಿಕಿ. .ನೀವೇ ನಿಮ್ಮ ತಂದೆಗೆ“ಔಷಧಿ“ ಎಂದು ಹೇಳಿ. ಹೊರಟು ಹೋದನು . ಒಂದು ವಾರ ಕಳೆಯಿತು. ಕಾಕ್ಸ್ ಸಾಹೇಬನು ಬಂದುನೋಡಿ ಶಂಕರರಾಯನ ದೇಹಸ್ಥಿತಿಯು ಬಹಳ ಮಟ್ಟಿಗೆ ಗುಣಮುಖವಾಗಿರು ವುದನ್ನು ಕಂಡು ಸಂತೋಷವಪಟ್ಟನು. ಮಾಧವನಿಗೂ ಗಂಗಾಬಾ ಯಿಗೂ ಶಂಕರರಾಯನ ದೇಹಸ್ಥಿತಿಯ ವಿಷಯದಲ್ಲಿ ಉಂಟಾಗಿದ್ದ ಕೊರತೆಯು ಕಡಮೆಯಾಯಿತು. ಅದರೆ ಅದಕ್ಕೆ ಬದಲಾಗಿ ಸುಭದ್ರೆ ಯ ವಿಚಾರದಲ್ಲಿ ಬಹು ಯೋಚನೆಗೆ ಪ್ರಾರಂಭವಾಯಿತು. ಗಂಗಾ ಬಾಯಿಗೆ ಮಾಧವನು ವರ್ತಮಾನಪತ್ರಿಕೆಯಿಂದ ಸುಭದ್ರೆಯ ಸಮಾ ಚಾರವನ್ನು ಓದಿ ಹೇಳುವವರೆಗೆ ಅವಳಿಗೆ ಯಾವ ಸಂಗತಿಯೂತಿಳಿದಿ ರಳಿಲ್ಲ. ಈಗ ಏನುಮೌಡುವುದಕ್ಳೂ ತಿಳಿಯದು. ಶ್ರೀಧರರಾಯ (ಆತ್ಮ ರಾಮ) ನು ಸುಭದ್ರೆಯನ್ನು ಕರೆದುಕೊಂಡು ಹೋಗಿರುವ ಸ್ಥಳವು ಗೊತ್ತಾದರೆ ಅನಂತರ ಏನಾದರೂ ಪ್ರಯತ್ರ ವನ್ನು ಮಾಡಬ ಹುದು, ಅದು ತಿಳಿಯುವ ಬಗೆ ಹೇಗೆ? ಗಂಗಾಬಾಯಿಯು ಗುಟ್ಟಾ ಗಿ ರಾಂಪುರಕ್ಕೆ ಹೋಗಿ ಅಲ್ಲಿನ ಸಮಾಚಾ ರಗಳನ್ನೆಲ್ಲಾ ತಿಳಿದುಕೊಂಡುಬರ ಬೇಕೆಂದುಯೋಚಿಸಿ ಏನೋ ಒಂದು ನೆಪವನ್ನು ಹೇಳಿ ಶಂಕರರಾಯನ ಅನುಮತಿಯನ್ನು ಪಡೆದು ಹೊರಟುಹೋದಳು. ಅಲ್ಲಿವಿಚಾರಿಸಿದುದರಲ್ಲಿ ರಾಮರಾಯನು ತನ್ನ ಮಗಳಿಗೆ ಪ್ರತಿಕಕ್ಶಿ ಯಾಗಿ ಸುಭದ್ರೆಯು ಬಂ ದಳೆಂಬ ಅಸೂಯೆಯಿಂದ ಹೇಗಾದರೂಮಾಡಿ ಅವಳು ಮಾಧವನಿಗೆ ದೊ ರೆಯದಂತೆ ಮಾಡಬೇಕೆಂದು ಉದ್ದೇ ಶಪಟ್ಟು ಶ್ರೀಧರರಾಯನಿಗೆ ಸಹಾಯಮಾಡಿ ಅವನಿಗೆಕಾರಾ ಗೃಹವಿಮೋಚನೆ ಮಾಡಿಸಿದುದಲ್ಲದೆ ಸಿವಿಲ್ ಕೋರ್ಟಿನಲ್ಲಿಯೂ ದಾವಾ ಹಾಕಿಸಿ ಗೆಲ್ಲಿಸಿದನೆಂತ ತಿಳಿಯ ಬಂದಿತು. ಅನಂತರ ಗಂಗಾಬಾಯಿಯು ರಾಮರಾಯನ ಸೇವಕ ರಲ್ಲಿ ಮುಖ್ಯನಾದವನನ್ನು ಗೋಪ್ಯವಾಗಿ ಕರೆಯಿಸಿಕೊಂಡು ಅವನ ಕೈಯಲ್ಲಿ ನೂರು ರೂಪಾಯಿಗಳ ಒಂದು ಚೀಲವನ್ನಿಟ್ಟು ಸುಭದ್ರೆಯ ಸಮಾಚಾರವನ್ನು ಕೇಳಲು, ಆವನು ಒಂದುಕಡೆ ಯಜಮಾನನಪ್ಪಣೆ ಯೂ ಮತ್ತೊಂದುಕಡೆ ಭಾರವಾದ ಹಣದಚೀಲವೂ ತ್ತಿ ರಲು, ಕೊನೆಗೆ ಹಣವನ್ನು ಬಿಡಲಾರದೆ ಶ್ರೀಧರರಾಯನು ಸುಭದೆ, ಯೊಡನೆ ಹೈದರಾಬಾದು ರಾಜ್ಯಕ್ಕೆ ಸೇರಿದ ‘ನಿರ್ಮಲ್ `ಎಂಬ ಸ್ಥಗಳದಲ್ಲಿ ರುವನೆಂದೂ, ಅವನಿ ಗೆ ಯಾವುದಕ್ಕೂ ಯೋಚನೆಯಿಲ್ಲದಂತೆ ರಾಮ ರಾಯನುಯಥೇಚ್ಛವಾಗಿ ಹಣವನ್ನು ಕೊಟ್ಟು ಕಳುಹಿಸಿರುವನೆಂದೂ ಹೇಳಿದನು. ಗಂಗಾಬಾಯಿಯು ಮಾರಣೆಯದಿನವೇ ಪುನಹೆಗೆ ಹಿಂದಿರುಗಿದಳು. ಅವಳೂ. ಮಾಧವನೂ ಬಹಳಹೊತ್ತು ಯೋಚನೆ ಮಾಡಿ. ವಿಕಾರ್-ಉಲ್-ಮುಲ್ಕನ ಸಹಾಯವನ್ನು ಪಡಿಯುವುದೇ ಒಳ್ಳೆಯದೆಂದು ನಿರ್ಧರಿಸಿದರು. ಮಾಧವನು ಅವನ ಸಹಾಯವನ್ನು ಬೇಡಿ, ಉಪಚಾರೋಕ್ತಿಗಳಿಂದ ಕೂಡಿದ್ದ ಒಂದು ಕಾಗದವನ್ನು ಸವಿಸ್ಠಾರವಾಗಿ ಬರೆದನು.
*****
ಮುಂದುವರೆಯುವುದು