ಮಾನವ ಶರೀರ ದೇವರಿಗಾಗಿ

ಮಾನವ ಶರೀರವೇ ನಮಗೊಂದವಕಾಶ
ಪರಮಾತ್ಮನ ಕಾಣಲು ಆಗಲಿ ಸಾಟಿ
ಭಗ್ನ ಮನಸ್ಸು, ಭಗ್ನ ಬುದ್ಧಿ ಭ್ರಮೆಗಳು
ನಿನ್ನೊಂದಿಗೆ ಮಾಡುತಿಹವು ನಿತ್ಯ ಪೈ ಪೋಟಿ

ಪರಶಿವ ನಮಗೆಷ್ಟು ಇಹನು ಅಂತರದಲಿ
ಅದುವೆ ಆತ್ಮ ನಮಗಿರುವಷ್ಟು ದೂರ
ನಮ್ ಜನುಮ ಉದ್ದರಿಸಲು ನಾವಾಗಬೇಕು
ನಮಗೆ ಮುಕ್ತಿ ನೀಡಲು ಹೆರವರ್‍ಯಾರು

ಗುರು ನಮ್ಮತಿದ್ದವನು ಹರನಾಗಲು
ಆತನ ಹಿಂಬಾಲಿಸಬೇಕು ತನು ಮನದಿ
ನಾವು ಮಾಡಬೇಕು ಕೈ ತೊಳೆದು ಕರ್‍ಮ
ಮಾಡಬೇಕು ನಿತ್ಯ ಮನಬಿಚ್ಚಿ ಧರ್‍ಮ

ಮಾತಿನಲಿ ತುಂಬಬೇಕು ಭಗವಂತ ಪ್ರೀತಿ
ಮೌನದಲಿ ಮೆರಿಯಬೇಕು ದೇವರ ಕೀರ್‍ತಿ
ಹಗಲಿರುಳು ಪೂಜೆಯು ನಡೆ ನುಡಿಯಲಿ
ಬ್ರಹ್ಮಚರ್‍ಯ ನಿಸ್ವಾರ್‍ಥತೆ ಮನದಲ್ಲಿ ಇರಲಿ

ನಮ್ಮ ಹೆಜ್ಜೆ ಹೆಜ್ಜೆ ಕಾಣಲಿ ನಿರಾಡಂಬರತೆ
ಮನದಲ್ಲಿ ತುಂಬಲಿ ಎಲ್ಲಕ್ಕೂ ಸನಾಸ್ಯತ್ವ
ಯವುದಕ್ಕೂರಬೇಡ ಹಂಬಲ ಚಿತ್ರದಲಿ
ಧ್ಯಾನವಿರಲಿ ಮಾಣಿಕ್ಯ ವಿಠಲನಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಭದ್ರೆ – ೯
Next post ಹಸಿರುಟ್ಟ ನೆಲದಲ್ಲಿ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…