‘ಕೊಲೆಸ್ಟ್ರಾಲ್’ ಹೆಚ್ಚಾದರೆ ಬೊಜ್ಜು ಬೆಳೆದು ಅಪಾಯಗಳಾಗಬಹುದೆಂದು ವೈದ್ಯಕೀಯವಾಗಿ ದೃಡಪಟ್ಟಿದೆ. ಕೈಕಾಲು ಹಿಡಿತ, ಹೃದಯಾಘಾತ, ಸೊಂಟನೋವು, ಚಟುವಟಿಕೆ ಗಳಿಲ್ಲದಿರುವುದು, ಮುಂತಾದ ಕಾಯಿಲೆಗಳು ಈ ಕೊರೆಸ್ಟ್ರಾಲ್ ಹೆಚ್ಚಾದಾಗ ಕಂಡು ಬರುತ್ತದೆ. ಆದ್ದರಿಂದ ವೈದ್ಯರೆ ಕೊಲೆಸ್ಟ್ರಾಲನ್ನು ಕಡಿಮೆ ಮಾಡಿಕೊಳ್ಳದಿದ್ದರೆ ಜೀವಕ್ಕೆ ಆಪತ್ತು ಎಂದು ಸಲಹೆ ಮಾಡುತ್ತಾರೆ. ಹೀಗಾಗಿ ಸ್ವಿಮೀಂಗು, ಜಿಮ್ಮು, ವ್ಯಾಯಾಮ ಮಾಡುವುದು, ಉಪವಾಸ ಇರುವುದನ್ನು ಮಾಡುತ್ತಾರೆ. ಆದರೆ ಕೊಲೆಸ್ಟ್ರಾಲ್ ರಕ್ತದಲ್ಲಿ ಕಡಿಮೆಯಾದರೆ ಆತ್ಮಹತ್ಯೆಯಂತಹ ಪ್ರಕರಣಗಳು ಜರುಗತ್ತವೆ ಎಂದು ೩ ವರ್ಷಗಳ ಅಧ್ಯಯನದಿಂದ (೧೯೫೫) ಅಮೇರಿಕೆಯ ವಿಜ್ಞಾನಿ ‘ಗಾಲಿಯರ್’ ಎಂಬುವವರು ಹೇಳುತ್ತಾರೆ. ಕೊಲೆಸ್ಟ್ರಾರಾಲ್ ಕುರಿತು ಇವರು ಸಾಕಷ್ಟು ಅಧ್ಯಯನ ಮಾಡಿದ ಫಲಶೃತಿ ಇದು. ಇದಕ್ಕೆ ಕಾರಣಗಳೂ ಕುತೂಲಹಕಾರಿಯಾಗಿವೆ.
ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾದಾಗ ಮಿದುಳಿನ ಸೆರೆಟೋನಿನ್ ಪ್ರಮಾಣದಲ್ಲಿ ಇಳಿತ ಕಂಡುಬರುತ್ತದೆ. ಈ ಪ್ರಮಾಣ ಕಡಿಮೆಯಾದರೆ ಮಿದುಳು ವಕ್ರೀಭವಗೊಂಡು ಆತ್ಮಹತ್ಯೆಯ ಮನೋಭಾವ ಹೆಚ್ಚಾಗುತ್ತದೆಂದು ಹೇಳುತ್ತಾರೆ. ಆಕ್ರಮಣ ಶೀಲ ಭಾವನೆಗಳನ್ನು ತೊಡೆದು ಹಾಕುವ ಸಾಮರ್ಥ್ಯ ಕುಂದಿ ಹೋಗುತ್ತದೆ. ಮಿದುಳಿನಲ್ಲಿ ಸೆರೆಟೋನಿನ್ ಪ್ರಮಾಣ ಕಡಿಮೆಯಾದಾಗ ಚಿತ್ತವಿಕಾರಗಳಾವುದು ಸಹಜ. ಇಂಥವರು ಯಾವುದೇ ಸಣ್ಣಪುಟ್ಟ ಕಾರಣಗಳು ಸಿಕ್ಕರೂ ಆತ್ಮಹತ್ಯೆ ಭಾವನೆ ತಾಳುತ್ತಾರೆ ಅಥವಾ ಅಪಘಾತಕ್ಕೆ ಕಾರಣರಾಗುತ್ತಾರೆ. ರಕ್ತದಲ್ಲಿ ಕೊಲಸ್ಟ್ರಾಲ್ ಪ್ಪಮಾಣವನ್ನು ಇಳಿಸುವ ಉದ್ದೇಶದಿಂದ ಔಷಧಿಗಳನ್ನು ಉಪಯೋಗಿಸುವ ರೋಗಿಗಳಲ್ಲಿ ಆತ್ಮಹತ್ಯೆಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿರುತ್ತದೆ. ಯಾರ ದೇಹದಲ್ಲಿ ಕೊಲೆಸಸ್ಟ್ರಾಲ್ ಪ್ರಮಾಣ ತೀರ ಕಡಿಮೆಯಾಗಿದೆಯೋ ಅವರಲ್ಲೂ ಸಹ ಆತ್ಮಹತ್ಯೆಯ ಪ್ರವೃತ್ತಿ ಹೆಚ್ಚಾಗಬಹುದೆಂದು ವಿಜ್ಞಾನಿಗಳು ತಿಳಿಸುತ್ತಾರೆ.
*****