ಕಾತರದಿ ಪುಸ್ತಕ ಹಿಡಿದ ಮಗು
ಸ್ಪಷ್ಟಿಕರಣಕೆ ಬಂದು ತಂತು ನಗು
ಕೇಳಿತು ಅಪ್ಪ ಇದರರ್ಥ ಹೇಳು
ಸಿಡುಕಿ ಹೇಳಿದ ನಿಂದೇನೋ ಗೋಳು?
ಆ ಮಗು ಅಮ್ಮನ ಬಳಿ ಸಾರಿತು
ಬಾಯಿ ತೆರೆವ ಮೊದಲೇ ಸಿಟ್ಟಿನಲಿ
ಅವನತ್ತ ನೋಡದೆ ಗುಡುಗಿದಳಾಕೆ
ನನಗೆ ಒಟ್ಟಿದೆ ಕೆಲಸ ಎಂದು ದೂಕಿದಳು
ಅಣ್ಣ ಅಕ್ಕರ ಬಳಿಗೆ ಹೋದನು ಸಮಸ್ಯೆ ಹೊತ್ತು
ನಮದೇ ಸಾಕಾಗಿದೆ ಬಂದ ಇವನೊಬ್ಬ ಕತ್ತೆ
ಎಂದು ಛೇಡಿಸಿ ಹೊರಗಟ್ಟಿದರು
ತಮ್ಮಯ ಕೆಲಸದಲಿ ಮುಳುಗಿದರು
ಅಜ್ಜ ಅಜ್ಜಿಯ ಹತ್ತಿರ ಹೋದರೆ
ಎಂದರು ಕೊಡಬೇಡಪ ನಮಗೆ ತೊಂದರೆ
ಆರಾಮ ಇಲ್ಲ ಕಣ್ಣು ಕಾಣಲ್ಲ
ನಿನ್ನ ಉಸಾಬರಿ ನಮಗೆ ಬೇಕಿಲ್ಲ
ಇಂಥ ಅಸಹಕಾರ ಕುಟುಂಬದೊಂದಿಗೆ
ಹೇಳಿ ಮಗು ಏಗುವುದು ಹೇಗೆ?
ಮಾಡುವ ಕೆಲಸವ ಕ್ಷಣ ಬದಿಗಿಟ್ಟು
ಬಗೆಹರಿಸಿ ಸಮಸ್ಯೆ ಮನಸುಗೊಟ್ಟು
*****