ಅಪ್ಪ ಅಮ್ಮ ಇಬ್ಬರು
ಮಗನು ನಾನು ಒಬ್ಬನು
ಯಾರು ಇಲ್ಲ ಗೆಳೆಯರು
ಬೇಸರಾಯಿತೆಂದೆನು
ಅಮ್ಮ ತಂದರೊಂದು ಬೆಕ್ಕು
ಅಪ್ಪ ತಂದರೊಂದು ಕೋತಿ
ಎರಡು ನೋಡಿ ನಾನು ನಕ್ಕು
ಆದವೆರಡು ನಮ್ಮ ಅತಿಥಿ
ಕೆಲದಿನಗಳು ಕಳೆಯುತಿರಲು
ಕೋತಿ ಬೆಕ್ಕು ಬೆಳೆಯುತಿರಲು
ಅದರ ಕೂಡೆ ಆಡುತಿರಲು
ಒಂಟಿತನವು ಮರೆಯುತಿರಲು
ಅಮ್ಮ ಕೊಟ್ಟ ರೊಟ್ಟಿ ಗಿಟ್ಟಿ
ಅಪ್ಪ ತಂದ ಹಣ್ಣು ಗಿಣ್ಣು
ತಿಂದು ಮೂವರಾದೆವು ಗಟ್ಟಿ
ಕುಣಿದಾಡಿದೆವು ಕೈಯತಟ್ಟಿ
ವರ್ಷವೊಂದು ಕಳೆಯಲು
ಬೆಕ್ಕು ಅಮ್ಮನಾಯಿತು
ಕೋತಿಜೋಗುಳ ಹಾಡಿತು
ಹರ್ಷ ಚಿಲುಮೆ ಉಕ್ಕಿತು
ಗೆಳೆಯರ ಬಳಗ ಹೆಚ್ಚಿತು
ಬೇಸರೆಲ್ಲ ಕಳೆಯಿತು
ಹೀಗೆ ಬೆಳೆಯಲಿ ಪ್ರಾಣಿ ಸಂತತಿ
ಅವುಗಳೇ ನನ್ನ ಸಂಗಾತಿ.
*****