ಸದಾ ಹಸಿರಿನ ಉಸಿರು
ಕವಿಯ ಕಾವ್ಯದ ಭೂಮಿ
ಆಶೆಗಳಿವೆ, ಕನಸುಗಳಿವೆ ನೂರಾರು
ಉಸಿರಾಡಿದರೆ ನನ್ನ ಕಾವ್ಯ ಬದುಕುತ್ತೇನೆ.
ಇಲ್ಲಿಯ ಒಂದೊಂದು ವಸ್ತುವಿನಲ್ಲೂ
ಗತಮರೆತ ಇತಿಹಾಸ ಹುಡುಕುತ್ತೇನೆ.
ಕಾವ್ಯ ಬದುಕಿದರೆ ಉಸಿರಾಡುತ್ತೇನೆ.
ವಿಶಾಲ ಭೂಮಿಯ ಮೇಲೆ
ಸ್ನೇಹದ ಬೀಜ ಬಿತ್ತುತ್ತೇನೆ.
ಸರಹದ್ದುಗಳ ನಿರ್ಬಂಧ ಮುರಿಯುತ್ತೇನೆ.
ಸೌಹಾರ್ದ ಬದುಕಿಗೆ ನಾಂದಿ ಹಾಕುತ್ತೇನೆ.
ಮೋಡಗಳ ದಿಂಬವಾಗಿಸಿದ ಸೂರ್ಯ
ಮರುಭೂಮಿ ಬೆಟ್ಟದ ಹಿಂದೆ ನಿದ್ದೇ ಹೋಗುತ್ತಾನೆ.
ಜುಳು ಜುಳು ಹರಿವ ಝರಿಗಳು
ಉಲಿಯುತ್ತದೆ. ರಸನದಿಗಳು ಹರಿಯುತ್ತವೆ.
ಕತ್ತಲ ರಾತ್ರಿ ಲೋಕವೆಲ್ಲ ಮಂಪರು
ನಿದ್ರೆಯ ಲೋಕಕ್ಕೆ ಜಾರಿದಾಗ
ಎಚ್ಚರಿಸುತ್ತದೆ ಕಾವ್ಯ ಮೈದಡವಿ
ಮಂಪರಿನ ಕಣ್ಣು ತಿಕ್ಕಿ ತಿಳಿಗೊಳಿಸಿ
ಅಸ್ತಿತ್ವದ ಬೆಳಕ ಹುಡುಕುತ್ತದೆ.
*****