ಬಾಪು ನೀ ಮಹಾನ್. ಕೃಷಿಯಲ್ಲಿ ನಿನ್ನ
ಪ್ರೀತಿಯ ನಿತ್ಯ ಸತ್ಯಗಳು ಹಸಿರು.
ಅಹಿಂಸೆಯು ಬಯಲ ಗಾಳಿಯಲಿ ತೇಲಿ
ಒಂದು ಸರಳ ಮಾರ್ಗದರ್ಶನ ನಿನ್ನಿಂದ
ಜಗಕೆ.
ಬದುಕಿನ ಎಲ್ಲಾ ಜಂಝಡದ ಮಧ್ಯೆ ನೀ
ಹೇಳಿದ ಪ್ರಾರ್ಥನೆಯ ಆಳ ಎದೆ ಎದೆಗೂ
ಇಳಿದು ಸಂಧ್ಯಾರಾಗದ ಸಂಭ್ರಮದ
ತಿಳಿ ಹಾಸಿದ ಸಂಜೆ, ಸಾಮರಸ್ಯ ಅರಳಿದ ಸಂಜೆ
ಮಲ್ಲಿಗೆ.
ಸಹಜ ಜೀವನದ ಸಾದಾ ನಡುಗೆಯು
ಸುದ್ದಿಯಾಗುವುದಿಲ್ಲ ಜಗದೊಳು. ಆದರೆ
ನಿನ್ನ ಮೌನದ ನಡುಗೆ ವಿಶ್ವವನವನೇ ಅಲ್ಲಾಡಿಸಿ,
ಅಳಿದುಳಿದ ದ್ವೇಷ ಕರುಗಿ ಸತ್ಯ ಮಿತ್ರತ್ವವಾಗಿದೆ.
ತನ್ನಂತೆ ಪರರ ಬಗೆಯುವ ಪರಿ ಮತ್ತೆ
ಅವರ ದಾರಿಯಲಿ ಅಡ್ಡಾಗದೇ, ನೀ ತಬ್ಬಿದ
ಗೌರವದ ಅಭಿಪ್ರಾಯಗಳು, ಹೃದಯಗಳು
ಒಂದಾಗಿ ಝಗಮಗಿಸುವ ಸೂರ್ಯೋದಯ
ಎಲ್ಲೆಲ್ಲೂ.
ಒಲುಮೆ ವಿಶ್ವಾಸದಲಿ ನೀ ಅರಳಿಸಿದ ಪ್ರೀತಿ,
ಕ್ಯಾದಿಗೆ ಘಮ ಜಗದ ತುಂಬೆಲ್ಲಾ ಹರಡಿ,
ತನ್ನೊಳಗಿನ ಕಾಯಕವ ದಂಡಿಗೆ ಮಾಡಿ,
ದಾಂಡೀ ಯಾತ್ರೆ ನಡೆದ ಫಕೀರ, ಜಗದ ತಂದೆ
ನಿನ್ನ ತತ್ವಗಳಿಗೆ ನಮೋ ನಮೋ ಎಂದೆ.
*****