ಸ್ಪರ್ಶ

ನೀನು ಈ ಸರಳ ಜೀವನ ದಾರಿಯ
ಎಲ್ಲಾ ಸತ್ಯಗಳನ್ನು ನನಗೆ ತಿಳಿಸಿ ಹೇಳಬೇಕಾಗಿದೆ.

ಯಾವ ಅಹಂಕಾರವಿಲ್ಲದ ಒಂದು ಪ್ರೀತಿ
ನನ್ನ ಮನೆಯೊಳಗೆ ಅರಳಿ ಕಂಪು ಸೂಸಬೇಕಾಗಿದೆ.

ಈ ಜೀವನದಲಿ ಹೊಟ್ಟೆ ತುಂಬಿಸಿಕೊಳ್ಳುವ
ಮಾರ್ಗ ನೇರ ಮತ್ತು ಸಿಹಿ ನಿನ್ನಿಂದ ಆಗಬೇಕಾಗಿದೆ.

ಮಾತಿನಲಿ ಮೃದುತ್ವ ನಕ್ಷತ್ರಗಳ ಹೊಳಪು
ಮತ್ತು ನದಿಯ ಹರಿವಿಕೆ ನೀನು ತುಂಬಬೇಕಾಗಿದೆ.

ನನ್ನ ಬಳಗದ ಜನರೊಂದಿಗೆ ನೀಲಿ ಆಕಾಶದಲಿ
ರೆಕ್ಕೆ ಬಿಚ್ಚಿ ಹಾರಾಡುವದನ್ನು ನೀನು ಕಲಿಸಬೇಕಾಗಿದೆ.

ಅರಳುವ ಹೂವಿನ ಕಂಪಿನ ಬೆಳಕಿನ ಪ್ರಾರ್ಥನೆ
ನೀನು ನನ್ನ ಎದೆಯೊಳಕೆ ಇಳಿಸಬೇಕಾಗಿದೆ.

ನಾ ಯಾವ ಉದ್ದೇಶಗಳಿಲ್ಲದೇ ಬರೀ ಪ್ರೀತಿಯಿಂದ
ಅವರ ಕೈಗಳನ್ನು ಹಿಡಿದು ನಡೆಸಬೇಕಾಗಿದೆ.

ನೀ ಎಲ್ಲಾ ಒಲುಮೆಯ ಹಾಡುಗಳು ಇಂಪಾಗಿ
ಸೊಂಪಾಗಿ ಬದುಕಿನ ಆಳಕ್ಕೆ ಇಳಿಯುವಂತೆ ಮಾಡಬೇಕಾಗಿದೆ.

ಅದಕ್ಕಾಗಿ ದಯವಿಟ್ಟು ನೀ ಪ್ರೀತಿಯಿಂದ
ಚಿಟ್ಟೆಯಂತೆ ನನ್ನ ಒಮ್ಮೆ ಸ್ಪರ್ಶಿಸಬೇಕಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜನ್ಮಭೂಮಿ
Next post ಸಗ್ಗದೊಡೆಯನ ಬಿಂಕ

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…