ಬನ್ನಿ ಯಾತ್ರಿಕರೇ ನೀವೆಲ್ಲಾ
ಕೈ ಮುಗಿದು ಕರುನಾಡ
ಮಣ್ಣಲೆಜ್ಜೆಯಿಡುವಾಗ |
ಇದು ಶಾಂತಿಯ ತವರಿದು
ಸ್ನೇಹ ಕರುಣೆಯ ಬೀಡಿದು ||
ಸರ್‍ವಧರ್‍ಮ ಸಂಗಮದ ನಾಡಿದು
ಸಕಲ ಕುಲ ಮನುಜರ ಕಾಶಿಯಿದು
ಕೋಟೆ ಕೊತ್ತಲ ಗಿರಿಶಿಖರಗಳ
ರಾಜಧೀರಾಜರು ಕಟ್ಟಿದ ನಾಡಿದು ||
ತಾಯಿ ಶಾರದೆಯು ನೆಲಸಿಹ
ಪಾವನಮಣ್ಣಿನ ನಾಡಿದು|
ಭಕ್ತ ಕನಕನಿಗೊಲಿದು
ಶ್ರೀಕೃಷ್ಣ ತಿರುಗಿನಿಂತಿಹ ಮಣ್ಣಿದು|
ಕಾವೇರಿ ಕಪಿಲ ತುಂಗ ಭದ್ರೆ
ಪುಣ್ಯ ನದಿಗಳ ಬೀಡಿದು||
ವೀರ ಹನುಮನುದಿಸಿ
ಪಾವನ ಗೊಳಿಸಿಹ ನಾಡಿದು|
ನಾಡ ದೇವಿ ಚಾಮುಂಡಿ ಅವತರಿಸಿ
ದುಷ್ಟಸಂಹರಿಸಿದ ನಾಡಿದು|
ಹೆಚ್ಚು ಭಾರತ ರತ್ನಗಳುದಿಸಿದ ನಾಡಿದು|
ಗಂಧದ ಗುಡಿಯ ಚೆಂದದ ನಾಡಿದು||
*****