ಸದಾ ನಿನ್ನ ಧ್ಯಾನಿಪೆ

ಸದಾ ನಿನ್ನ ಧ್ಯಾನಿಪೆ ತಂದೆ
ದರುಶನ ಕರುಣಿಸೆಯಾ||
ಭವಬಂಧನ ಬಿಡಿಸೋ
ದಾರಿಯ ತೋರುವೆಯಾ||

ಕಷ್ಟವ ಕರಗಿಸೋ ಕರ್ಮವ ತೊಡಿಸಿ
ಕಾಪಾಡ ಬಯಸುವೆಯಾ|
ನ್ಯಾಯದಿ ನೆಡೆಸಿ ಅನ್ಯಾಯವನಳಿಸಿ
ಸತ್ಯಾನಂದ ಗೊಳಿಸುವೆಯಾ||

ಬಂಧುವು ನೀನೆನಿಸೋ ಭಾಗ್ಯವ ಕರುಣಿಸಿ
ಭವಸಾಗರ ದಾಟಿಸೆಯಾ|
ಅರಿಯದೆ ಜರುಗಿದ ತಪ್ಪುಗಳ ಮನ್ನಿಸಿ
ನನ್ನನು ಕ್ಷಮಿಸುವೆಯಾ||

ನೀ ದಯಾಸಿಂಧು ಎನ್ನುತ ಅರಸಿ
ಮನದಲೇ ನಮಿಸಿ ಕೋಟಿ ಪ್ರಾರ್ಥನೆ ಸಲ್ಲಿಸುವೆ|
ಕಾದಿರುವೆ ನಿನ್ನಯ ದರುಶನ ಅಭಯವ
ಕರುಣಾಳುಬಂಧು ನೀ ದಯಪಾಲಿಸೆಯಾ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂತರಂಗ-ಬಹಿರಂಗ
Next post ಮಿಂಚಿನ ಮಾಟ

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…