ಅಂತರಂಗ-ಬಹಿರಂಗ

ಹೊರಗೆ ಹತ್ತಿತು ಬೆಂಕಿ
ಒಳಗೆ ತುಂಬಿತು ಹೂಗೆ
ಒಳಗು-ಹೊರಗು ಬೇರಾಯಿತು ಹೇಗೆ?
ಹೊರಗಡೆ ತೋಡುವ
ವೈರದ-ಪಾಯಕೆ
ಬೆಳೆಯಿತು ಒಳಗಡೆ ಉದ್ದನೆ ಗೋಡೆ!

ಭೂಪಟ ಗೆರೆಗಳು
ಭೂಮಿಗೇ ಅಲ್ಲ
ಗರಗಸವಾಗಿವೆ ಮನಸಿನಲಿ
ಜಾಲದ ಜಾತಿ
ಸೀಳಿದ ವರ್‍ಗ
ಸಲಗದ ಸದ್ದು ಸೆಣಸಿನಲಿ.

ಮೈಯೇ ಮುಟ್ಟದ
ಜಾತಿಜಾರರು
ಮುಟ್ಟುವುದೆಂದಿಗೆ ಮನಸನ್ನು ?
ಮನಸಿಗೆ ತಟ್ಟುವ
ಮಾತಿನ ಮಲ್ಲರು
ಮುಟ್ಟುವುದೆಂದಿಗೆ ಮೈಯ್ಯನ್ನು?

ಅನುಭವದಕ್ಷರ
ಸಾಲಿನ ಜೋಡಣೆ
ನಡೆಯುವುದು ಬಹಿರಂಗದಲಿ
ತಪ್ಪು ಒಪ್ಪುಗಳ
ತಿದ್ದಿದ ಕರಡು
ಅಚ್ಚಾಗುವುದು ಆಂತರ್‍ಯದಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶೆರಿಡನ್‌ನ School for Scandal – ಕುಲೀನ ಜಗತ್ತಿನ ಬೂಟಾಟಿಕೆಯ ಬದುಕಿನ ವರ್‍ಣನೆ
Next post ಸದಾ ನಿನ್ನ ಧ್ಯಾನಿಪೆ

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…