ಗುಬ್ಬಕ್ಕ ಗುಬ್ಬಕ್ಕ
ಎಲ್ಲಿಗೆ ಹೋಗಿದ್ದೆಯಕ್ಕ?
ನನ್ನೊಡನಾಡಲು ಬಾರಕ್ಕ
ನನಗೂ ಎರಡು ರೆಕ್ಕೆ ಹಚ್ಚಕ್ಕ
ಗುಬ್ಬಕ್ಕ ಗುಬ್ಬಕ್ಕ
ನೀ ಕಣ್ಣಿಗೆ ಕಾಣಲಿಲ್ಲೇತಕ್ಕ?
ನನ್ನ ಹೃದಯ ಹೊರಗೆ ಬಂದಂತಾಯ್ತಕ್ಕ
ನಿನ್ನ ಸಂಗಡ ನಾನು ಇರುವೆನಕ್ಕ
ಗುಬ್ಬಕ್ಕ ಗುಬ್ಬಕ್ಕ
ಈ ಪರಿಸರ ಬೇಡವಾಯ್ತೆನಕ್ಕ?
ನೀನಿಲ್ಲದೇ ನಾನಿರಲಿ ಹ್ಯಾಂಗಕ್ಕ?
ನಿನ್ನ ದ್ಯಾಸ ಏಸು ಬಾರಿ ಬಂತಕ್ಕ
ಗುಬ್ಬಕ್ಕ ಗುಬ್ಬಕ್ಕ
ಮರೆಯಾಗಬೇಡ ನನ್ನಕ್ಕ
ನನ್ನೊಡನಾಡಲು ಯಾರೂ ಇಲ್ಲಕ್ಕ
ನಿನಗೆ ಲಾಲಿ ಪಾಪು ಕೊಡುವೆ ಬಾರಕ್ಕ
ಗುಬ್ಬಕ್ಕ ಗುಬ್ಬಕ್ಕ
ಹಾಡಿ ಕುಣಿದು ನಲಿಯೋಣು ಬಾರಕ್ಕ
ಪ್ರೀತಿಯಲಿ ಅಮ್ಮ ಮಾಡಿದ
ಇಡ್ಲಿ ಕೊಡುವೆ ಬಾರಕ್ಕ
ಗುಬ್ಬಕ್ಕ ಗುಬ್ಬಕ್ಕ
ಮರಗಿಡಬಳ್ಳಿ ಇಲ್ಲೆಂದು ಕೊರಗುವಿಯೇತಕ್ಕ
ಗೂಡ ಕಟ್ಟಲು ಚಿಂತಿಯಾತಕ್ಕ
ಎನ್ನ ಹೃದಯದಲಿ ಜಾಗವ ಕೊಡುವೆ ಬಾರಕ್ಕ
*****
೨೭ ಮಾರ್ಚ್ ೨೦೧೦ರ ಶಿವಮೊಗ್ಗದ ನಮ್ಮ ನಾಡು ಪತ್ರಿಕೆಯಲ್ಲಿ ಪ್ರಕಟ