ವಾಗ್ದೇವಿ – ೩೩

ವಾಗ್ದೇವಿ – ೩೩

ವಾಗ್ದೇವಿಗೆ ಬಹು ಆನಂದವಾಯಿತು. ಮುಂದೆ ಭೀಮಾಜಿಯಿಂದ ಅವಳಿಗೆ ಅನೇಕ ಕಾರ್ಯಗಳು ಕೈಗೂಡುವುದಕ್ಕಿರುವುದರಿಂದ ಅವನನ್ನು ಪೂರ್ಣವಾಗಿ ತನ್ನ ವಶಮಾಡಿಕೊಳ್ಳುವ ಅವಶ್ಯವಿತ್ತು. ಮರುದಿವಸ ಅಪ ರೂಪ ಪಾಕಗಳಿಂದ ಔತಣ ಸಿದ್ಧವಾಯಿತು. ಸಾಯಂಕಾಲವಾಗಬೇಕಾದರೆ ಆಬಾಚಾರ್ಯನು ಕೊತ್ವಾಲನ ಮನೆಯ ಹೊರಗೆ ಅಲೆದಾಡುತ್ತಾ ಇದ್ದು, ಭೀಮಾಜಿಯು ಮನೆಗೆ ಬಂದ ಕೂಡಲೇ ಅವನನ್ನು ಕರಕೊಂಡು ಬಂದನು. ವಾಗ್ದೇವಿಯ ಹಲವು ಸನ್ಮಾನಗಳಿಂದ ಅವನು ಸೋತುಹೋದನು. ಭೋಜನವಂತೂ ಅತಿ ಚಲೋದಾಯಿತು. ಭೀಮಾಜಿಯು ಆ ಪರಿಯಂತ ಅಂಥಾ ಅಪೂರ್ವ ಊಟ ಉಂಡಿರಲಿಲ್ಲ. ಭೋಜನೋಪರಿ ತಾಂಬೂಲಾದಿ ಸತ್ಕಾರಗಳು ಆದವು ಹಲವು ಮಾತ್ಯಾಕೆ? ಸರ್ವೋಪಚಾರಗಳು ಪರಿಪೂರ್ಣ ವಾಗಿ ಹೊಂದಿದ ಅವನ ಮನಸ್ಸಿಗೆ ಪರಮೋಲ್ಲಾಸವೂ ಹೊಟ್ಟೆಗೆ ಸಂಪೂರ್ಣ ವಾದ ತೃಪ್ತಿಯೂ ಹುಟ್ಟಿದವು. ಬಳಿಕ ಅವನು ವಾಗ್ದೇವಿಯ ಹಿತಚಿಂತಕ ನಾಗುವದೇನು ಆಶ್ಚರ್ಯ! ಅವಳು ಅನುರಕ್ತಿಯಿಂದ ಮಾಡಿಸಿದೆ ಔತಣ ವನ್ನು ಭೀಮಾಜಿಯು ಮರೆಯುವ ಸ್ವಭಾವದವನೇ? ಛೇ ಛೇ ಎಂಥಾ ಮಾತು! ಇಂಥಾ ನಾರಿಮಣಿಯ ಒಲುಮೆಯನ್ನು ಎಲ್ಲರೂ ಬಯಸಕೂಡದು. ಪುಣ್ಯವಂತರೇ ಅದನ್ನು ಘಳಿಸಿಕೊಳ್ಳುವದಕ್ಕೆ ಕೋರಬಹುದು. ಈ ಸೌಭಾ ಗ್ಯವತಿ ತನ್ನ ಮೇಲೆ ಇಟ್ಟ ದೃಢ ವಿಶ್ವಾಸಕ್ಕೆ ದೇಹಾಂತ್ಯದವರೆಗೂ ಘಾತ ಬರಬಾರದು. ಈ ಮೋಹನಾಂಗಿಯ ಸ್ನೇಹವನ್ನು ಬೆಳಸಿದ ನಿಮಿತ್ತ ತನ್ನ ಮೇಲೆ ಎಂಥಾ ಕಷ್ಟಗಳೂ ಅಪವಾದಗಳೂ ಬರಲಿ ಅವುಗಳನ್ನು ಲಕ್ಷ್ಯಕ್ಕೆ ತಾರದೆ ಜೀವದಾಶೆಯನ್ನು ತಾನೆ ಬಿಟ್ಟು ಅವಳ ಬಹಯಕೆಗಳನ್ನು ಪೂರೈಸದೆ ಇರಲಾರೆನೆಂದು ಭೀಮಾಜಿಯು ಪ್ರಮಾಣ ವಾಕ್ಯದಂತೆ ಅವಳಿಗೆ ಭಾಷೆ ಯನ್ನು ಕೊಟ್ಟು ಸ್ವಗೃಹಾಭಿಮುಖನಾದನು.

ಹೆಚ್ಚಿನ ಪ್ರಸ್ತಾಸ ಆ ದಿನ ರಾತ್ರಿ ಅವನಾಗಲೀ ಅವಳಾಗಲೀ ಮಾಡ ಲಿಲ್ಲ. ಮರುದಿವಸ ಬರುವೆನೆಂನು ವಾಗ್ದತ್ತಕೊಡುವುದಕ್ಕೆ ಮೊದಲು ಅವನು ಹೊರಡಲಿಲ್ಲ. ಮರುದಿವಸ ಸಾಯಂಕಾಲ ಭೀಮಾಜಿಯು ತನ್ನ ಆಗಮನ ವನ್ನು ಹಾರೈಸಿಕೊಂಡಿರುವ ವಾಗ್ದೇವಿಯನ್ನು ನೋಡಿ, ಉಭಯತ್ರರೂ ಪರ ಸ್ಪರ ಮಿತ್ರಭಾವದ ಹರುಷವನ್ನು ತುಂಬಾ ಅನುಭವಿಸಿದರು. ಶಾಬಯನ ಭೇಟ ಮಾಡಿಸಬೇಕಾಗಿ ವಾಗ್ದೇವಿಯು ಹೇಳಿಕೊಂಡ ವಿಷಯವು ಇತ್ಯರ್ಥ ವಾಗದೆ ಉಳಿದಿತ್ತು. ಆ ಪ್ರಸ್ತಾಪ ಅವಳಾಗಿ ಎತ್ತಿದರೆ ಅದರ ವ್ಯವಸ್ಥೆ ಆಗಲೇ ಮಾಡಿಬಿಡುವುದಕ್ಕೆ ಭೀಮಾಜಿಗೆ ಆತುರವಿತ್ತು. ಅವನ ಬಾಯಿಂದಲೇ ಆ ಪ್ರಮೇಯ ಹೊರಡದೆ ತಾನಾಗಿ ಚರ್ಚೆ ಮಾಡಬಾರದೆಂಬ ಹಟದಿಂದ ವಾಗ್ದೇವಿಯು ಸುಮ್ಮನಿದ್ದಳು. ಅನೇಕ ತರದ ಸೋಸುಗಾರಿಕೆಯ ಮಾತು ಮುಗಿದೆ ಮೇಲೆ ಭೀಮಾಜಿಯು ತಾನಾಗಿಯೇ ಆ ಪ್ರಸ್ತಾಸ ಎತ್ತಿದನು. ಆ ದೊಡ್ಡ ಅಧಿಕಾರಿಯ ದರ್ಶನವನ್ನು ಮಾಡಿದರೆ ಇನ್ನುಮುಂದೆ ಬರಲಿಕ್ಕಿರುವ ಭಯವನ್ನು ನಿವಾರಣೆ ಮಾಡಿಕೊಳ್ಳುವ ಉಪಾಯ ಮುಂಚೆಯೇ ಮಾಡಿದ ಹಾಗೆ ಆಗುವದೆಂದು ಅವಳ ಮನಸ್ಸಿನ ಭಾವವಾಗಿತ್ತು. ಯಾವುದಕ್ಕೂ ಮುಂದಾಗಿ ಅವನನ್ನು ಮಾತಾಡಿಸಿ ನೋಡುವೆನೆಂದು ಕೊತ್ವಾಲನು ವಾಗ್ದೇ ನಿಯ ಮನೆಯಿಂದ ಮರಳಿದನು.

ಮಾರಣೆ ದಿನ ಭೀಮಾಜಿಯು ಶಾಬಯನನ್ನು ಕಂಡನು. ಇವರಲ್ಲಿ ಅತ್ಯಂತ ಮೈತ್ರ್ಯವಿತ್ತು. ಒಬ್ಬನ ಮಾತು ಇನ್ನೊಬ್ಬನು ತೆಗೆದು ಹಾಕಲಾ ರನು. ಕೊತ್ವಾಲನು ಭೇಟಗೆ ಬಂದಿರುವ ಹದನವನ್ನು ಜವಾನನು ತಿಳಿಸಿದಾ ಕ್ಷಣ ಶಾಬಯನು ಭೀಮಾಜಿಗೆ ಸಾದರದಿಂದ ದರ್ಶನ ಕೊಟ್ಟು ಶಾನೆ ಹೊತ್ತು ಸಂಭಾಷಣೆ ಮಾಡಿದನು. ವಿವಿಧ ವಿಷಯಗಳಲ್ಲಿ ಮಾತನಾಡಿ ತೀರಿದ ಮೇಲೆ ಭೀಮಾಜಿಯು ಬೇರೆ ಯಾರಿಗೂ ಕೇಳದಂತೆ ಅಂತರಂಗ ದಲ್ಲಿ ವಾಗ್ದೇವಿಯ ಪ್ರಸ್ತಾಪಮಾಡಿ ಹೊರಟನು. ಅಸ್ತಮಾನಕ್ಕೆ ಭೀಮಾ ಜಿಯು ತನ್ನ ಪುನರಾಗಮನ ನಿರೀಕ್ಷಣೆಯಲ್ಲಿರುವ ವಾಗ್ದೇವಿಯನ್ನು ಕಂಡು, ಶಾಬಯನ ಭೇಟಿ ದೊರಕುವ ಉಪಾಯ ಮಾಡಿ ಬಂದಿರುವೆನೆಂದು ಹೇಳಿದನು. ವಾಗ್ದೀವಿಗಾದ ಉಲ್ಲಾಸವನ್ನು ವರ್ಣಿಸಲಿಕ್ಕೆ ಕವಿಗೂ ಅಸಾಧ್ಯ. ಭೀಮಾಜಿಗೆ ಅವಳು ಹೊಗಳಿದ ಬಗೆಯು ಸಂಪೂರ್ಣವಾಗಿ ಮನಃಪೂರ್ತಿ ಯಾದ ಕೃತಜ್ಞತೆಯ ದೃಷ್ಟಾಂತನೆನ್ನಲೇಬೇಕು. ಆಪತ್ಯಾಲಕ್ಕೆ ಪ್ರಾಣವನ್ನು ಉಳಿಸಲಿಕ್ಕೆ ಮತ್ತೊಬ್ಬ ವೀರ ಹುಟ್ಟಿಲಿಲ್ಲವೆಂದು ವಾಗ್ದೇವಿಯು ಭೀಮಾಜಿ ಯನ್ನು ಅಡಿಗಡಿಗೆ ಶ್ಲಾಘನೆ ಮಾಡುತ್ತಾ–“ಪರಮ ಪ್ರೀಯನೇ! ನಿನ್ನ ಮುಖದ ಕಾಂತಿಯಿಂದ ಪೌರ್ಣಮಿ ಚಂದ್ರನ ಶೀತಳ ಕಿರಣಗಳು ಸಿಗ್ಗಾಗು ತ್ತವೆ. ನಿನ್ನ ಬಡದಾಸಿಯಾದ ವಾಗ್ದೇವಿಯನ್ನು ಬಿಟ್ಟುಹಾಕಬೇಡವೆಂದು ರಮ್ಯವಾದ ನುಡಿಯಿಂದ ಅವನನ್ನು ಬೇಡಿಕೂಳ್ಳುವ ಅಂದವನ್ನೂ ಅವಳ ಉತ್ಕೃಷ್ಟವಾದ ಮೈ ಸೊಬಗನ್ನೂ ನೋಡಿ ಭೀಮಾಜಿಗೆ ರೋಮಾಂಚವಾ ಯಿತು. ತನ್ನ ಪೂರ್ವಪುಣ್ಯ ದೊಡ್ಡದು ಅಲ್ಲದಿದ್ದರೆ ಇಂಧಾ ಭಾಗ್ಯಲಕ್ಷ್ಮಿಯ ಅಕ್ಕರೆಯು ತನಗೆ ದೊರಕುವದಿತ್ತೇ ಎಂದು ಅವನು ಆನಂದಭಾಷ್ಪಗಳನ್ನು ಸುರಿಸಿದನು.

ಶಾಬಯ್ಯನ ಭೇಟ ಮಾಡುವ ರೀತಿ ಯಾವದೆಂದು ವಾಗ್ದೇವಿಯು ಭೀಮಾಜಿಯನ್ನು ಕೇಳಿದಳು. ನವದರ್ಶನವಾಗುವ ಸಮಯ ಕಣ್ಮನಗಳಿಗೆ ಸಂತೃಪ್ತಿಯಾಗುವ ಹಾಗಿನ ಕಾಣಿಕೆಗಳನ್ನು ಆ ದೊಡ್ಡ ಉದ್ಯೋಗಸ್ತನಿಗೆ ಇತ್ತು, ಅವನ ಅನುಗ್ರಹವನ್ನು ಅಪೇಕ್ಷಿಸುವದು ಕರ್ತವ್ಯವೆಂದು ಭೀಮಾ ಜಿಯು ಹೇಳಿದ ಮಾತು ವಾಗ್ದೇವಿಯ ಮನಸ್ಸಿಗೆ ಬಂತು. ಕಣ್ಣಿಗೆ ರಂಜಕ ವಾದ ಹಣ್ಣು ಹಂಪಲುಗಳೂ ಅಪೂರ್ವ ವಸ್ತುಗಳೂ ಚಿತ್ರವಿಚಿತ್ರ ಒಡನೆ ಗಳೂ ಸಿಕ್ಚುವದು ಪ್ರಯಾಸವಲ್ಲ. ಮನೋರಂಜಕವಾದ ಸಾಮಗ್ರಿಯಾವ ದೆಂದು ಏನೂ ಅರಿಯದವಳಂತೆ ವಾಗ್ದೇವಿಯು ಕೇಳುತ್ತಲೇ ಭೀಮಾಜಿಯು ಅವಳು ನಿರೀಕ್ಷಿಸಿದ ಉತ್ತರವನ್ನು ಕೊಟ್ಟನು. ಇದ್ಯಾವ ದೊಡ್ಡಿತು? ಸಕಲ ಪದಾರ್ಥಗಳನ್ನು ಯಥೋಚಿತವಾಗಿ ಒದಗಿಸಿಟ್ಟು ಕೊಂಡು ತಮ್ಮ ಆಗಮ ನವನ್ನು ಹಾರೈಸುತ್ತಾ ಇದ್ದುಕೋಥೇನೆ ಎಂದು ವಾಗ್ದೇವಿಯು ಹೇಳಿದಳು. ಹಾಗಾಗಲಿ ನಾಳೆ ಸಾಯಂಕಾಲಕ್ಕೆ ಬರುವೆನೆಂದು ಭೀಮಾಜಿಯು ನಡೆದನು.

ಭೀಮಾಜಿಯು ಮರುದಿನ ನಾಯಂಕಾಲಕ್ಕೆ ವಾಗ್ದೇವಿಯನ್ನು ಕಂಡು ಹೊರಡಲಿಕ್ಕೆ ಸನ್ನದ್ಧಳಾಗೆಂದು ಹೇಳಿದನು. ಅರೆಗಳಿಗೆಯಷ್ಟು ಅವಕಾಶದಲ್ಲಿ ವಾಗ್ದೇವಿಯು ಮನೋಹರವಾದ ವಸ್ತ್ರಾಭರಣಗಳನ್ನು ಧರಿಸಿ ಬೇಕಾದ ಒಡವೆ ವಸ್ತುಗಳನ್ನು ಇಡಿಸಿಕೊಂಡು, ಭೀಮಾಜಿಯ ಸಂಗಡ ಶಾಬಯ್ಯನ ಗೃಹಾಭಿಮುಖವಾದಳು. ಜವಾನನ ಪರಿಮುಖ ಶಾಬಯಗೆ ವರ್ದಿ ಸಿಕ್ಚು ತ್ತಲೇ ಉಪ್ಪರಿಗೆಗೆ ಬರುವದಕ್ಕೆ ಹೇಳಿಕಳುಹಿಸಿದನು. ಮುಂದಿನಿಂದ ಭೀಮಾ ಜಿಯೂ ಹಿಂದಿನಿಂದ ವಾಗ್ದೇವಿಯೂ ಉಪ್ಪರಿಗೆ ಹತ್ತಿದರು. ಕೊತ್ವಾಲಗೆ ಕೂರೆಂದು ಆಸನವನ್ನು ತೋರಿಸಿ, ಶಾಬಯನು ವಾಗ್ದೇವಿಯ ಮುಖ ಪ್ರೇಕ್ಷ ಣದಿಂದಲೇ- ಇವಳೇನು ಅಪ್ಸರಸ್ತ್ರೀಯಂತೆ ಕಣ್ಣಿಗೆ ತೋರುತ್ತಾಳೆ! ಇಂಥಾ ದಿವ್ಯರೂಪವುಳ್ಳ ಶ್ರ್ರೀರತ್ನವೂ ಈ ನಗರದಲ್ಲಿ ಉಂಟೆಂದು ತಾನು ಮೊದಲೇ ತಿಳಿಯಲಿಲ್ಲ ಎಂದು ಬೆರಗಾದನೆನ್ನಬಹುದು. ಅವಳ ಉಪಮೆ ರಹಿತವಾದ ಮೈಬಣ್ಣವನ್ನು ಅಂಗೋಪಾಂಗಗಳ ಸೂಬಗನ್ನು ನೋಡಿ, ಅವನು ಸ್ತಂಭೀ ಭೂತನಾದನು. “ಅವ್ವಾ! ಕೂರಿ” ಎಂದು ಆ ದೊಡ್ಡ ಅಧಿಕಾರಿಯು ತನ್ನ ಕೈಯಿಂದ ಆಸನವನ್ನು ಕೊಟ್ಟು ನಿಂತುಕೊಂಡಿರುವಾಗ- “ದೊಡ್ಡರಾಯರೇ! ನಾನು ತಮ್ಮ ಸಮ್ಮುಖದಲ್ಲಿ ಕುಳಿತುಕೊಂಡಿರುವ ಯೋಗ್ಯತೆಯುವಳ್ಳಳಲ್ಲ. ನಿಂತು ಕೊಂಡಿರಲಿಕ್ಕೆ ಅಪ್ಪಣೆಯಾಗಬೇಕು” ಎಂದಳು. ಅವಳು ಕೂತು ಕೊಳ್ಳುವದಿಲ್ಲವಾದರೆ ತಾವೂವೇ ನಿಂತುಕೊಂಡಿರಬೇಕಾಗುವದೆಂದು ಶಾಬ ಯ್ಯನು ಹೇಳಿದರೂ ಅವಳು ಕೇಳದೆ ಹೋದಳು. “ಇನ್ನೇನು ಮಾಡಲಿ! ನಿಮ್ಮ ಕ್ಳೆ ಹಿಡಿದು ಒತ್ತಾಯದಿಂದ ನಾನೇ ಕೂರಿಸಲೇ” ಎಂದು ಶಾಬಯ್ಯನು ಅರೆ ನಗೆಯಿಂದ ಆವಳ ಮುಖವನ್ನೇ ನೋಡಿದನು. “ತನುಮನಧನಗಳಿಂದಲೂ ತಮ್ಮ ಸನ್ನಿಧಿಯ ಮರೆಹೋದ ನನ್ನನ್ನು ಹ್ಯಾಗೆ ನಿನಿಯೋಗ ಮಾಡಿದರೂ ಹೆಕ್ಕಳಪಡುವೆನು” ಎಂದು ಅವಳು ನಸುನಗೆಯಿಂದ ಉತ್ತರಕೊಟ್ಟಳು. ಶಾಬ ಯ್ಯನು ಅವಳ ಸೂಚನೆಯನ್ನು ಅನುಸರಿಸುವದರಲ್ಲಿ ಛಾನಸ ಮಾಡಲಿಲ್ಲ. ಅವಳ ಎರಡು ಕೈಗಳನ್ನು ತನ್ನ ಉಭಯ ಹಸ್ತಗಳಿಂದ ಹಿಡಿದು ಅವಳನ್ನು ಕೂರಿಸಿ ತಾನೂ ಅವಳ ಮುಂಭಾಗದಲ್ಲಿ ಕೂತುಕೊಂಡು, ಬಂದಕಾರಣವೇ ನೆಂದು ವಿಚಾರಿಸಿದನು.

ವಾಗ್ದೇವಿಯು ತನ್ನ ಸುಖದುಃಖವನ್ನೆಲ್ಲಾ ಸಂಕ್ಷೇವಾಗಿ ಅರುಹಿ ದಳು. ವೇದವ್ಯಾಸ ಉಪಾಧ್ಯನು ಕೊಡುವ ಉಪಹತಿಯ ಮತ್ತು ಕೆಪ್ಪ ಮಾಣಿಯು ಮಾಡಿದ ಲೂಟಿಯ ವೃತ್ತಾಂತವನ್ನು ಲೋಪವಿಲ್ಲದೆ ತಿಳಿಸಿದಳು. ಮುಖ್ಯತಃ ತನ್ನನ್ನು ಕಾಪಾಡುವವರು ಬೇರೆ ಯಾರೂ ಇಲ್ಲ. ತನ್ನನ್ನು ಕನಿಕರದಿಂದ ನಡಿಸಿಕೊಂಡು ಹೋಗದಿದ್ದರೆ ತಾನು ಆ ಊರನ್ನೇಬಿಟ್ಟು ದೂರಪ್ರಾಂತ್ಯದಲ್ಲಿ ಅಪ್ರಖ್ಯಾತ ರೀತಿಯಲ್ಲಿ ವಾಸಿಸಿಕೊಂಡಿದ್ದು ಶ್ವಾನದಂತೆ ಪ್ರಾಣಬಿಡುವದಲ್ಲದೆ ಬೇರೊಂದು ಮಾರ್ಗ ತೋಚೊವದಿಲ್ಲನೆಂದು ದೀನ ಭಾವದಿಂದ ಹೇಳಿಕೊಂಡಳು. ಶಾಬಯ್ಯಗೆ ಬಹಳ ಪಶ್ಚಾತ್ತಾಪವಾಯಿತು. ತಾನು ಅಧಿಕಾರ ಮಾಡಿಕೊಂಡು ಆ ಊರಲ್ಲಿ ವಾಸಿವಾಗಿರುವ ಪರಿಯಂತರ ಏನೂ ಭಯಪಡಬಾರದು; ತನ್ನ ಪೂರ್ಣವಾದ ಸಹಾಯವು ಸಾರ್ವದಾ ದೊರಿಯುವದೆಂದು ಅಭಯನನ್ನು ಕೊಟ್ಟು ಚಿನ್ನದ ಹರಿವಾಣದಲ್ಲಿ ತಾಂಬೂ ಲವನ್ಶಿಟ್ಟು, ಅದನ್ನು ಸ್ವೀಕರಿಸಬೇಕೆಂದು ಅಪೇಕ್ಷಿಸಿದನು. ವಾಗ್ದೇವಿಯು ಸಂತೋಷದಿಂದ ತಾಂಬೂಲವನ್ನು ತಕ್ಕೊಂಡು, ಪುನಃ ಅವನ ಸಂದರ್ಶನ ಸುಖ ಎಂದು ತಾನು ಪಡೆಯಲೆಂದು ಪ್ರಶ್ನೆಮಾಡಿದಳು. ತಾನು ಮನೆಯಲ್ಲಿ ರುವ ಯಾವ ಸಮಯದಲ್ಲಿಯಾದರೂ ಬಂದು ಕಾಣಬಹುದು; ಆಗಾಗ್ಗೆ ಕಂಡರೆ ತಾನು ತುಂಬಾ ಸಂತೋಷಿತನಾಗುವೆನೆಂದು ಶಾಬಯ್ಯನು ಹೇಳಿ, ಕಣ್ಣೆತ್ತಿ ನೋಡುವ ಸಮಯದಲ್ಲಿ ಭೀಮಾಜಿಯು ಕೆಳಗಿನಿಂದ ಒಬ್ಬ ಜನಾನನ ಸಮೇತ ಬಂದು ವಾಗ್ದೇವಿಯು ತಂದಿಟ್ಟ ನಜರಕಾಣಿಕೆಯನ್ನು ಶಾಬಯ್ಯನ ಅನುಮತಿಯಿಂದ ಮನೆಯ ಒಳಗೆ ಇಡಿಸಿದನು. ಶಾಬಯ್ಯನಿಗೆ ಊಟದ ಹೊತ್ತಾದುದರಿಂದ ಅವನು ಅಡಿಗೆ ಮನೆಗೆ ಹೋದನು. ಭೀಮಾಜಿಯೂ ವಾಗ್ದೇವಿಯೂ ಅನುಮತಿ ಪಡಕೊಂಡು ಬೀದಿಗೆ ಇಳದರು. ವಾಗ್ದೇವಿಯು ಭೀಮಾಜಿಯಿಂದ ತನಗಾದ ಈ ಉಪಕೃತಿ ಎಂದೆಂದಿಗೂ ಮರೆಯೆನೆಂದು ಆ ತನ್ನ ಪ್ರಾಣಸ್ನೇಹಿತನನ್ನು ಬೇಕು ಬೇಕಾದ ಹಾಗೆ ಹೊಗಳಿ, ಮಧು ರೋಕ್ತಿಗಳಿಂದ, ಉಬ್ಬೇರಿಸಿ ಬೇಗ ಊಟಮಾಡಿ ಮಲಗೆಂದು ವಿನೋದಕರ ವಾಗಿ ಮಾತಾಡುತ್ತಾ ಅವನನ್ನು ಮನೆಗೆ ಹೋಗಗೊಟ್ಟಳು. ಅಂದಿನಿಂದ ವಾಗ್ದೇವಿಯು ನಿಶ್ಚಿಂತಳಾಗಿ ತನ್ನ ಮುಂದಿನ ಯತ್ನವು ಸಫಲವಾಗುವ ದೆಂಬ ಕೋರಿಕೆಯನ್ನುಳ್ಳವಳಾದಳು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅನಂತ ಸಾಹಸ
Next post ಸಿದ್ಧವಾಗು

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…