ಜೀನ್ಗೊಟ್ಟಿ ನನಹೇಂತಿ

ಜೀನ್ಗೊಟ್ಟಿ ನನಹೇಂತಿ ಕೈಕಟ್ಟ ಬಾಯ್ಕಟ್ಟ
ತೌರೋರು ಬಂದಾಗ ಹುಂಚಿಪಕ್ಕ
ಒಂದಕ್ಕ ಹತ್ತುಂಡಿ ಬುಟಿತುಂಬ ಹೋಳೀಗಿ
ಕರಿಗಡಬು ಹೆರತುಪ್ಪ ಚೊಕ್ಕಚೊಕ್ಕ ||೧||

ಗಂಡಗ ಚಮಚೆಯ ತುಪ್ಪಾನ ನೀಡಾಕಿ
ಅಣ್ಣಗ ತಂಬೀಗಿ ಸುರುವ್ಯಾಳ
ಮಕ್ಳೀಗೆ ಚಟ್ನೀಯ ಕಿರಿಬೆಳ್ಲೆ ಹಚ್ಚಾಕಿ
ತಮ್ಮಗ ಕೆನಿಮೊಸರು ಹಾಕ್ಯಾಳ ||೨||

ಅರಿಬೀಗಿ ಸಬಕಾರ ಅಂಚಂಚು ಹಚ್ಚಾಕಿ
ತಂಗೀಯ ಲಂಗಾಕ ಠಾಕುಠೀಕ
ಕುಂತಾರ ನನಸೀರಿ ಸವದೀತು ಅನ್ನಾಕಿ
ತವರೋರು ಬಂದಾಗ ಟ್ರಂಕುಪ್ಯಾಕ ||೩||

ನಾಟಕ ಗೀಟಕ ಯಾತಕ ಅನ್ನಾಕಿ
ಕ್ಯಾಬರೆ ಸಿನಿಮಾಕ ಕಳಿಸ್ಯಾಳ
ಕಾಲೀಗಿ ಬಿಸಿನೀರು ಕುಡಿಯಾಕ ಎಳನೀರು
ಹೊಟ್ಟಿ ಝಾಡಿಸುವಂಗ ಉಣಿಸ್ಯಾಳ ||೪||

ಇಷ್ಟ್ಯಾಕ ಅಂದರ ತೌರೋರು ತಂದಾರ
ನಿಮಗ್ಯಾಕ ಹೊಟಿಬ್ಯಾನಿ ಅಂತಾಳ
ಬಿಳಿಜೋಳ ತಂದಾರ ಗೋದೀಯ ಒಟ್ಯಾರ
ನೀವೇನು ಕೊಟ್ಟಿಲ್ಲ ಅಂದಾಳ ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾಕೆ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೮

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…