ಶಿಸ್ತಿರಬೇಕು
ನಡೆಯಲ್ಲಿ ನುಡಿಯಲ್ಲಿ
ಆಟ-ಪಾಠಗಳಲ್ಲಿ
ಕಾಯದಲ್ಲಿ, ಕಾಯಕದಲ್ಲಿ.
ಮಾನ ಹೋದೀತು-ಶಿಸ್ತಿಲ್ಲದಿರೆ
ಉಡುಗೆ-ತೊಡುಗೆಗಳಲ್ಲಿ
ವ್ಯಾಪಾರ-ವ್ಯವಹಾರಗಳಲ್ಲಿ
ಹಣಕಾಸು ವಿಷಯಗಳಲ್ಲಿ
ತಲೆ ಹೋದೀತು-ಶಿಸ್ತಿಲ್ಲದಿರೆ
ಕಾಯ್ದೆ-ಕಾನೂನಿನಲ್ಲಿ
ರೀತಿ-ನೀತಿಯಲ್ಲಿ
ರತಿಯಲ್ಲಿ ಮತಿಯಲ್ಲಿ.
ಜೀವ ಹೋದೀತು-ಶಿಸ್ತಿಲ್ಲದಿರೆ
ಸ್ನಾನ-ಪಾನಗಳಲ್ಲಿ
ಊಟ-ಉಪಚಾರಗಳಲ್ಲಿ
ಪಥ್ಯದಲ್ಲಿ ಔಷಧದಲ್ಲಿ:
ದೇಶವೇ ಹೋದೀತು-ಶಿಸ್ತಿಲ್ಲದಿರೆ
ಸೈನ್ಯದಲ್ಲಿ, ರಾಜಕೀಯದಲ್ಲಿ
ಆಚಾರ-ವಿಚಾರಗಳಲ್ಲಿ
ಸಂಸ್ಕೃತಿ ಸಂಸ್ಕಾರಗಳಲ್ಲಿ
ಶಿಸ್ತಿರಬೇಕು
ಹುಟ್ಟಿನಲ್ಲಿ ಬಾಲ್ಯದಲ್ಲಿ
ಬಾಳಲ್ಲಿ ಬದುಕಲ್ಲಿ
ನೋವಿನಲಿ ನಲಿವಿನಲಿ
ಆದಿಯಲಿ ಅಂತ್ಯದಲ್ಲಿ
ಬಾಳ ಹೆಜ್ಜೆ ಹೆಜ್ಜೆಯಲಿ.
*****
೦೯-೦೬-೧೯೯೨