ಸುಂದರ ಮನಸುಗಳು

ಸುಂದರ ಮನಸುಗಳು ಬಣ್ಣದ ಕನಸುಗಳು
ಗರಿ ಬಿಚ್ಚಲಿ ಆಕಾಶದಲಿ
ಬೆಳದಿಂಗಳು ತಾವಾಗುತಲಿ //ಪಲ್ಲವಿ//

ನಿಮ್ಮಯ ಜೊತೆಗಿವೆ ಹಕ್ಕಿಗಳು
ಕಾಂತಿಯ ಚಿಮ್ಮುವ ಕನಸುಗಳು
ಜೊತೆಯಲಿ ಓಡುವ ಮೋಡಗಳು
ಹಗುರಾಗಿರುವ ಮನಸುಗಳು
ತೇಲುವ ಆಡುವ ಈ ಸೊಗಸು
ತುಂಬಲಿ ನನ್ನೆಲ್ಲಾ ವಯಸು

ಪ್ರತಿ ನೋಟ ನೂತನ ಸತ್ಯ
ಹರಿದಂತೆಲ್ಲ ಇದು ನಿತ್ಯ
ಸೌಂದರ್ಯದ ಈ ಅನುಭೂತಿ
ಖಂಡಿತ ಅಲ್ಲ ವಿಭ್ರಾಂತಿ
ಮಾತೇಕೆ ಸಾಕ್ಷಾತ್ಕಾರದಲಿ
ನಂಬಿ ನಡೆದ ನಿಮ್ಮ ಹಾದಿಯಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಹಮ್ ಬ್ರಹ್ಮಾಸ್ಮಿ
Next post ಮಗು

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ತಾಯಿ-ಬಂಜೆ

    "ಅಯ್ಯೋ! ಅಮ್ಮ!... ನೋವು... ನೋವು... ಸಂಕಟ.... ಅಮ್ಮ!-" ಒಂದೇ ಸಮನಾಗಿ ನರಳಾಟ. ಹೊಟ್ಟೆಯನ್ನು ಕಡೆಗೋಲಿನಿಂದ ಕಡದಂತಾಗುತ್ತಿತ್ತು. ಈ ಕಲಕಾಟದಿಂದ ನರ ನರವೂ ಕಿತ್ತು ಹೋದಂತಾಗಿ ಮೈಕೈಯೆಲ್ಲಾ ನೋವಿನಿಂದ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…