ಬೆಳಕಾಗಿ ಬಂತು

ಬೆಳಕಾಗಿ ಬಂತು
ಬೆಳಕಾಗಿ ಬಂತು
ಬೆಳಕಾಗಿ ಬಂದೇ ಬಂತು
ದೀಪಾವಳಿ ಪ್ರಭಾವಳಿ ||

ಮನದ ಕಲ್ಮಶವ
ತೊರೆದು ಕತ್ತಲೆಯ ಕಳೆದು
ಬೆಳಕಾಗಿ ಬಂದೇ ಬಂತು
ದೀಪಾವಳಿ ಪ್ರಭಾವಳಿ ||

ಒಂದು ದೀಪದ ಕಿರಣ
ನೂರು ದೀಪಗಳ ಮಿಲನ
ಬೆಳಕಾಗಿ ಬಂದೇ ಬಂತು
ದೀಪಾವಳಿ ಪ್ರಭಾವಳಿ ||

ಜಾತಿ ಭೇದವು ಇಲ್ಲ
ನೀತಿ ಭೇದವ ಸೊಲ್ಲ
ಎಣ್ಣೆ ಬತ್ತಿ ಹಾಗೆ ಎಲ್ಲಾ
ದೀಪಾವಳಿ ಪ್ರಭಾವಳಿ || ಬೆ ||

ಸುರು ಸುರು ಬತ್ತಿ ಮತಾಪು
ಹೂ ಬತ್ತಿ ಕುಂಡ
ಭೂಮ್ಯಾಕಾಶಕೆ ಬೆಳಕು ಚೆಲ್ಲಿ
ಬೆಳಕಾಗಿ ಬಂದೇ ಬಂತು
ದೀಪಾವಳಿ ಪ್ರಭಾವಳಿ ||

ಅಕ್ಕ ತಂಗಿಯರು ಬಿಮ್ಮನೆ
ಅಣ್ಣ ತಮ್ಮರ ಹಿಡಿದ
ಆರತಿ ವಿಜಯದಾರತಿಗೆ
ಬೆಳಕಾಗಿ ಬಂದೇ ಬಂತು
ದೀಪಾವಳಿ ಪ್ರಭಾವಳಿ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಗತಿ ಅಥವಾ ದಾಸ್ಯವಿಮೋಚನೆ – ೧ನೆಯೆ ಖಂಡ – ಸ್ವಾತಂತ್ರ್ಯ ಪ್ರೀತಿ
Next post ಹಾರೆಲೆ ಹಕ್ಕಿ

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…