ಆ ಬಿಳಿಹೂಗಳ ಚಿಲುಮೆಯಲಿ
ಶ್ವೇತ ಸುಂದರಿ,
ನಿನ್ನ ಜೀವದ ಉಸಿರು ಹೊಗೆಯಾಡುತ್ತಿರುತ್ತದೆ.
ನಿನ್ನ ಸ್ತನಗಳ ಉಬ್ಬರ
ಗುಡ್ಡಗಾಡಿನ ಹಿಮದ ಗಾಳಿಯಲೆಗಳನ್ನು
ಹಿಂಗಿಸಿಕೊಳ್ಳಲಾರದೇ?
ಕೆಂಪುರಕ್ತ ಕಕ್ಕುವ ಗೂಳಿಗಳೆದುರು
ನಿನ್ನ ನೆನಪು ಶಿಖರದಂತೆ ಬೆಳೆಯತೊಡಗುತ್ತದೆ.
ನನ್ನ ನಿರ್ಭಾಗ್ಯ ಸುಂದರಿ,
ಸದಾಕಾಲ ನಿನ್ನನ್ನು ಪ್ರೀತಿಸ ಬಯಸುತ್ತೇನೆ;
ಸತ್ತ ಮೇಲೆ ಆ ಹೆಣದ ವಾಸನೆಯಲ್ಲೂ
ನಿನ್ನ ನಶೆಯಿಲ್ಲದಿದ್ದರೆ ಕೇಳು.
*****