ಹರಿ ಸಾಕು ಈ ಇನ್ನು ಜನ್ಮ
ನಿನ್ನ ಮಾಯೆದಿ ಬಿಡಿಸಿಕೊ ಎನ್ನ
ನಿನ್ನ ತೊರೆದು ಯಾವ ಸುಖವುಂಟು
ವ್ಯರ್ಥ ಬಡಿವಾರವಿದು ನುಡಿವೆ ನಿನ್ನ
ಚಣದ ಆಸೆಗಳಲಿ ಬರೀ ಮೋಹ
ಅಲ್ಲೆಲ್ಲ ತುಂಬಿದೆ ಪಡೆವ ದಾಹ
ನಿನ್ನ ಭಜಿಸದೆ ಇರುವ ಈ ದೇಹ
ಇನ್ನೂ ನಾಕೆಲ್ಲಿಯದು ಬರಿ ಸಂದೇಹ
ನಿನ್ನದುರುಶನಕ್ಕೆ ಕಾತರಿಸಿದೆ ಕಂಗಳು
ಮತ್ತೆ ಮನವಾಗಿದೆ ವ್ಯಾಕುಲ
ಧಾರೆಯಾಗಿದೆ ಕಣ್ಣೀರು ಕೇಳು ಹರಿ
ಇದೋ ಪುಷ್ಪಗಳ ಧಾರೆ ಸೇವಂತಿ ಬಕುಲ
ನನ್ನ ಮೇಲೆತ್ತಿ ಕಾಪಾಡು ಚಿನ್ಮಯನೆ
ನನ್ನ ಪಾಪಗಳಿ ಗೆಲ್ಲ ಮನ್ನಿಸು ಮುರಾರಿ
ನೀನೊಬ್ಬನೆ ಕ್ಷಮಾಯಧರಿತ್ರಿ ಹೌದಲ್ಲವೆ
ಮಾಣಿಕ್ಯ ವಿಠಲನಿಗೊಬ್ಬ ಹರಿ
*****