ಕಟ್ಟುವೆವು ನಾವು

ಕಟ್ಟುವೆವು ನಾವು
ಬಾಹ್ಯ ಬಲು ಸುಂದರ ಮನೆಗಳ
ಸಾವಿರವರುಷ ಬದುಕುವವೆಂಬ ಭ್ರಮೆಯಲಿ|
ಕಲ್ಲು, ಕಬ್ಬಿಣ ಸಿಮೆಂಟಲಿ
ತ್ಯಾಗ ಹೊನ್ನೆ ಬೀಟೆಮರದ ಬಾಗಿಲಲಿ||

ಬಹು ಅಂತಸ್ತಿನ ಮನೆ
ಬಾರೀ ಬೆಲೆಬಾಳುವ ಮನೆ|
ವೈಕುಂಠದಂತಹ ಬಾಗಿಲು
ಹತ್ತು ಕೊಠಡಿಯ ನೂರಾರು
ಚದುರಡಿ ಮನೆ|
ದೇವರಿಗೊಂದು ಕೋಣೆ‌ಇಲ್ಲ
ತೂಗುಯ್ಯಾಲೆ ವರಾಂಡ
ಮೇಲತ್ತಲು ಮರದ ಮೆಟ್ಟಿಲ ಏಣಿ|
ಬೇರೆ ಯಾವ ಅಥಿತಿಗೂ ಅದರಲಿ
ಉಳಿಯಲು ಅವಕಾಶವಿಲ್ಲ
ಇತರರು ಬರಿ ಹುಬ್ಬೇರಿಸಿ ನೋಡಲಿಕ್ಕೆ||

ಬರೀ ತನ್ನ ಹೆಂಡತಿ ಮಕ್ಕಳ ಸ್ವಾರ್ಥ
ಒಣ ಶ್ರೀಮಂತಿಕೆ ತೋರಿಕೆಗೆ|
ಮೈತುಂಬ ಸಾಲಮಾಡಿ
ನೆಮ್ಮದಿ ಇರದ ಇರುಳಲಿ
ಸುಪ್ಪತ್ತಿಗೆಯ ಮಂಚದಲಿ
ನಿದ್ದೆ ಇರದಲೆ ಹೊರಳಾಡಿ|
ಬಿರುದಿಗೆ ಕತ್ತಿಯ ನುಂಗುವ ಬಗೆ
ಐಷಾರಾಮಿ ಜೀವನದ ಹುಸಿನಗೆ||

ಮುಪ್ಪಾಗಿಹ ತಂದೆ ತಾಯಂದಿರ
ಹಳೆಯ ಮನೆಯಲ್ಲೋ ಅಥವಾ ಇನ್ನಾವುದೋ
ವೃದ್ಧಾಶ್ರಮದಲಿ ಕೂಲಿ ಕೊಟ್ಟಿಟ್ಟು|
ಒಡಹುಟ್ಟಿದವರನು ಮನೆಬಾಗಿಲಿಗೆ
ಬಾರದಂತೆ ನಿಂದಿಸಿ ದೂರಿಟ್ಟು|
ಸ್ನೇಹ ಪ್ರೀತಿ ಪ್ರೇಮದ ಅಡಿಪಾಯವಿಲ್ಲದಲೇ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರ ನೀನೇನ ಕಲಿತೆ?
Next post ಕ್ಷಮಾಯಾಧರಿತ್ರಿ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…