ಮಾತೆ ಉದರದಿ ಉದಿಸಿ ಬಂದೆ
ಭಾವಿ ಲೋಕದ ಕನ್ಸು ಕಂಡೆ
ನಶ್ವರದ ಬಾಳು ಕರಗಿತು ತಂದೆ
ಏನು ಬೇಡಲಿ ಹರಿಯೆ ನಿನ್ನ ಮುಂದೆ
ತಾಯಿ ತಂದೆ ಬಂಧು ಜೊತೆಯಾದರು
ತಿಳಿಯುವನಂತಾಗಲೇ ಕರಗಿದರು
ಬದಕನು ಹಂಚಿಕೊಳ್ಳವರು ಬಂದರು
ಕರಗಿದವು ಗಳಿಗೆ ಯಾರು ಅರಿಯರು
ನಿಸರ್ಗವೇ ಹೀಗೆ ದಾಟುವುದು
ನಮ್ಮನ್ನಾಚೆ ನೂಕಿ ದೂರ ಸಾಗುವುದು
ಜರಾವಸ್ಥೆ ಬಂದಾಗ ಜ್ಞಾನ ಬರುವದು
ಆಗ ಎಲ್ಲವೂ ನಮ್ಮಿಂದ ಜಾರುವುದು
ಆಶೆ ನಿಮಿಷೆಗಳು ಎಷ್ಟೋ ಕರಗಿದವು
ಮತ್ತೆ ಜನುಮ ಮರಣ ಅಂಟಿದವು
ಹರಿ ನೀನೋರ್ವ ಕಾಲಾತೀತ ನನ್ನ ತಂದೆ
ಮಾಣಿಕ್ಯ ವಿಠಲನ ನಿಂತಿಹ ನಿನ್ನ ಮುಂದೆ
*****