ತಾಯಿಯ ಹಾಲು ಅಮೃತಕ್ಕೆ ಸಮಾನ. ಬೆಳೆಯುವ ಮಕ್ಕಳು ಈ ಹಾಲನ್ನು ಸೇವಿಸಿ ಭವಿಷತ್ತಿನಲ್ಲಿ ಕಾಯಿಲೆಗಳಿಲ್ಲದೇ ಆರೋಗ್ಯವಾಗಿ ಬದುಕಬಹುದು, ಎಂದು ವೈದ್ಯಲೋಕ ಮನವಿ ಮಾಡಿಕೊಳ್ಳುತ್ತಲೇ ಇದೆ. ಈ ಹಾಲು ತಾಯಿ ಉಣ್ಣುವ ಆಹಾರದಿಂದಲೇ ರಕ್ತವಾಗಿ, ಹಾಲಾಗಿ ಬರುತ್ತದೆಂದ ಮೇಲೆ ಆಹಾರ ಪದಾರ್ಥಗಳು ಶುದ್ಧವಾಗಿರಬೇಕೆಂಬುವುದು ಅಷ್ಟೇ ನಿಜ. ಆದರೆ ಇಂದಿನ ಆಹಾರ, ವಿಷಯುಕ್ತವಾಗಿ ತಾಯಿಯ ಹಾಲಲ್ಲೂ ಸಹಜವಾಗಿ ವಿಷದ ಅಂಶಗಳು ಬರುತ್ತವೆ ಎಂದು ಇತ್ತೀಚಿಗೆ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಈ ವಿಷದ ಅಂಶ ಅವ್ಯಕ್ತವಾಗಿ ಸೇರಿಸುವದರಿಂದ ಆಹಾರದ ಗುಣವನ್ನು ಅಳೆಯುವುದು ಕಷ್ಟ ಮತ್ತು ಪ್ರತಿಯೊಬ್ಬ ತಾಯಿಗೂ ಆಹಾರವನ್ನು ವ್ಶೆದ್ಯಕೀಯವಾಗಿ ಪರೀಕ್ಷಿಸಿ ಕೊಡುವುದಂತೂ ಅಸಾಧ್ಯ ಹೀಗಾಗಿ ನಿಷ್ಕಲ್ಮಶವೆಂದು ತಿಳಿದ ತಾಯಿಯ ಹಾಲೇ ವಿಷವಾದಾಗ ಶುದ್ಧತೆ ಹುಡುಕುವುದಾದರೂ ಏಲ್ಲಿ! ಎಂಬುವುದು ನಾಗರೀಕರ ಪ್ರಶ್ನೆ.
ಏಷ್ಯಾ, ಆಫ್ರಿಕಾ, ಲ್ಯಾಟಿನ್, ಅಮೆರಿಕಾ ನಾಡುಗಳಲ್ಲಿ ಕೀಟನಾಶಕಗಳ ಬಳಕೆ ಅತಿಯಾಗಿದ್ದು ಗಾಳಿ ಆ ಅಂಶವನ್ನು ತಳ್ಳಿಕೊಂಡು ಹೋಗಿ ಶುದ್ಧ ಪ್ರದೇಶವನ್ನು ಈಗ ವಿಷಮಯಗೊಳಿಸುತ್ತಲಿದೆ. ಇದು ಆಹಾರದ ಜತೆಯಲ್ಲಿ ಅಥವಾ ನೀರಿನಲ್ಲಿ ಸೇವಿಸುವ ಗಾಳಿಯಲ್ಲಿ ಸೇರಿ ತಾಯಿಯ ಹಾಲಿಗೂ ಪಾದಾರ್ಪಣೆ ಮಾಡಿದೆ. ಈ ಮೂಲಕ ಮಗುವಿಗೆ ಉಣಿಸಲ್ಪಡುತ್ತದೆ. ಹೀಗಾಗಿ ತಾಯಿಯ ಹಾಲೂ ಕೂಡಾ ಕೀಟನಾಶಕ ನಂಜಿನಿಂದ ಮುಕ್ತವಾಗಿಲ್ಲವೆಂದು ವಿಜ್ಞಾನಿಗಳು ಹೇಳುತ್ತಾರೆ.
೧೯೭೭ ರಲ್ಲಿ ಜಪಾನ್, ಅಮೆರಿಕಾದಲ್ಲೆಲ್ಲ ಸಂಶೋಧಿಸಿದಾಗ ತಾಯಿಯ ಹಾಲಿನಲ್ಲಿ ೧,೧೦೦ ರಿಂದ ೧,೫೦೦ ವರೆಗೆ ಪಿ. ಸಿ. ಬಿ. ಕೀಟನಾಶಕದ ನಂಜು ೧,೯೦೦ ರಷ್ಟು ಡಿ.ಡಿ.ಟಿ. ನಂಜು ೨,೫೦೦ ರಷ್ಟು ಬಿ. ಹೆಚ್. ಸಿ. ನಂಜು ಕಂಡು ಬಂದಿತು. ಇಟಲಿ, ಗ್ರೀಸ್, ಕೆನಡಾದ ತಾಯಂದಿರರ ಹಾಲಿನಲ್ಲಿ ಈ ಕೀಟನಾಶಕದ ನಂಜಿನ ಪ್ರಮಾಣ ಕಡಿಮೆ ಎಂದು ಹೇಳಲಾಗುತ್ತದೆ. B.H.C. ನಂಜು ೭ ರಿಂದ ೧೫ ರಷ್ಟು D.D.T. ನಂಜು ೩೫ ರಿಂದ ೪೭ ರಷ್ಟು P.C.B. ನಂಜು ೭೦ರ ವರೆಗಿತ್ತು ಎಂದು ವಿಜ್ಞಾನಿಗಳು ವರದಿ ಮಾಡಿದ್ದಾರೆ. ಅಮೇರಿಕಾದಲ್ಲಿ D.D.T.ಯ ಮೇಲೆ ನಿರ್ಬಂಧವಿರುವುದರಿಂದ ಅಲ್ಲಿಯ ತಾಯಂದಿರರ ಮೇಲೆ ಹಾಲಿನಲ್ಲಿ D.D.T. ಗಿಂತ P.C.B. ನಂಜು ಹೆಚ್ಚಿನ ಪ್ಪಮಾಣದಲ್ಲಿ ಕಂಡು ಬಂದಿದೆ. ಭಾರತದಲ್ಲಿ ೧೯೮೮-೯೯ ಸುಮಾರಿನ ಅಧ್ಯಯನದಂತೆ ತಾಯಿಯ ಹಾಲಿನಲ್ಲಿ ೭೫೦ ರಷ್ಟು B.H.C. ನಂಜು ೩,೭೪೦ ರಷ್ಟು, D.D.T ನಂಜು ಕಂಡು ಬಂದಿದೆ. ಚೀನಾ, ಕೀನ್ಯಾ ಮೆಕ್ಸಿಕೊಗಳ ತಾಯಿಂದಿರರ ಹಾಲಿನಲ್ಲಿ ಈ ನಂಜಿನ ಅಂಶಗಳು ಅಗಾಧ ಪ್ರಮಾಣದಲ್ಲಿ ಇರುವುದರಿಂದ ಅಲ್ಲಿಯ ಮಕ್ಕಳ ಗತಿ ದೇವರೇ ಬಲ್ಲ. ಅಂದರೆ ಇಲ್ಲಿಯ ತಾಯಂದಿರರ ಹಾಲಿನಲ್ಲಿ೬,೬೦೦ ರವರೆಗೆ ನಂಜು ೬,೨೦೦ ರವರೆಗೆ ಇದೆ, ಎಂದು ದೃಢಪಟ್ಟಿದೆ. ಇದು ಅಪಾಯದ ಮಟ್ಟ ಇನ್ನೂ ಏಷ್ಯಾ, ಆಫ್ರಿಕಾ, ಅಮೇರಿಕಾದ ಮಕ್ಕಳು ಕೀಟನಾಶಕ ವಿಷಯುಕ್ತ ಹಾಲನ್ನು ಕುಡಿಯುತ್ತವೆ. ಆದರೆ ಯುರೋಪಿನ ಮಕ್ಕಳು ಅಷ್ಟೇನೂ ನಂಜಿನ ಮಿಶ್ರಣಡ ಹಾಲು ಕುಡಿಯಲಾರಂಭಿಸಿಲ್ಲವೆಂದು ವರದಿ ತಿಳಿಸುತ್ತದೆ.
*****