ಈಗಿರುವ ಗ್ರಹಗಳಲ್ಲಿ ಜೀವಸಂಕುಲದ ಅನ್ವೇಶಣೆ ಒಂದೆಡೆ ಸಾಗಿದರೆ ಇದರ ಜೊತೆಗೆ ಹೊಸ ಭೂಗ್ರಹಗಳ ಹುಡುಕಾಟವೂ ನಡೆಯುತ್ತಿದ್ದು ಎರಡು ಹೊಸ ಭೂಗ್ರಹಗಳನ್ನು ಸ್ವಿಡ್ಜರ್ ಲ್ಯಾಂಡಿನ ಜಿನಿವಾ ವೇದಶಾಲೆ, ಮತ್ತು ಅಮೇರಿಕನ್ ಖಗೋಳ ವೇದ ಶಾಲೆಗಳು ಕಂಡು ಹಿಡಿದಿವೆ.
ಈ ಎರಡು ಭೂಗ್ರಹಗಳು ನಮ್ಮಿಂದ ೩೫ ಜ್ಯೋತಿವರ್‍ಷಗಳ ಅಂತರದಲ್ಲಿವೆ, ಎಂದು ವಿಜ್ಞಾನಿಗಳು ಅಭಿಪ್ರಾಯ. ಇದರಂತೆ ೭೦ ವರ್ಜಿನಿಸ್, ಮತ್ತು “೪೭ ಉರ್ಸೆ ಮೆಜೋರಿಸ್” ಎಂದು ಹೆಸರಿಸಲಾಗಿದ್ದು ಒಂದು ಕನ್ಯಾರಾಶಿಯಲ್ಲಿಯೂ ಇನ್ನೊಂದು ಸಪ್ತರ್ಷಿ ಮಂಡಲದಲ್ಲಿಯೂ ಇವೆ, ಎಂದು ಖಚಿತಪಡಿಸಿಕೊಳ್ಳಲಾಗಿದೆ. ರೇಡಿಯೋ ತರಂಗಗಳ ಮೂಲಕ ನಾವು ಸಂದೇಶ ಕಳಿಸಿದರೆ ೩೫ ವರ್ಷಗಳು ಬೇಕು. ನಕ್ಷತ್ರವಾಗಿದ್ದು ಸೂರ್ಯನಂತೆ ಇವೆ. ಇದನ್ನು ಸುತ್ತುವ ವರ್ಜಿನಿಯಸ್ – ೭೦, ನಮ್ಮ ಗುರುಗ್ರಹದ ಗಾತ್ರಕ್ಕಿಂತ ೮ ಪಟ್ಟು ದೊಡ್ಡದಿದೆ. ಪ್ರತಿ ೧,೧೦೦ ದಿನಗಳಿಗೊಮ್ಮೆ ತನ್ನ ಸೂರ್ಯನನ್ನು ಪ್ರದಕ್ಷಣೆ ಇವು ಹಾಕುತ್ತಿವೆ. ಇದರ ತಾಪಮಾನ ೮೦ ಸೆಲ್ಸಿಯಸ್‌ನಷ್ಟು ಇದೆ.
ಇವೆರೆಡೂ ಗ್ರಹಗಳಲ್ಲಿ ನೀರು ಇದ್ದು ಮತ್ತು ಜೀವಿ ವಿಕಾಸ ಉಂಟಾಗಿರುವ ಸಾಧ್ಯತೆ ಇದೆ, ಎಂಬುವುದು ವಿಜ್ಞಾನಿಗಳ ಅಭಿಪ್ರಾಯ. ಜೀವಿಗಳು ಅಥವಾ ಮಾನವ ವಾಸಯೋಗ್ಯ ವಾತಾವರಣ ಬಗ್ಗೆ ಯೋಚಿಸುತ್ತಿರುವ ಖಗೋಳಜ್ಞರಿಗೆ ಆಶಾದಾಯಕ ಅಂಶವೆಂದರೆ ಈ ಗ್ರಹಗಳಿಗಿರುವ ಚಂದ್ರರು. ಈ ಚಂದ್ರರ ಮೇಲೆ ವಾಸಯೋಗ್ಯವಾದ ಭೂಮಿ ಇದೆ ಎಂಬ ಆಶಾಭಾವನೆಯನ್ನು ಹೊಂದಿದ್ದಾರೆ. ಈ ಗ್ರಹಗಳ ಚಂದ್ರದಲ್ಲಿ ಸಾಗರ ಮತ್ತು ಮಳೆಯ ವಾತಾವರಣವಿದ್ದುದರಿಂದ ಮಾನವರಿಗೆ ವಸತಿಯೋಗ್ಯವೆಂದು ನಿರೀಕ್ಷಿಸಿದ್ದಾರೆ. ಈಗಾಗಲೇ ಇಂಥಹ ನಕ್ಷತ್ರಗಳನ್ನು ಮತ್ತು ಅಲ್ಲಿನ ಗ್ರಹಗಳ ಬೇಟಿಯಲ್ಲಿ ನಿರತವಾಗಿರುವ ಖಗೋಳ ಶಾಸ್ರಜ್ಞರಿಗೆ ಇದು ಹೊಸತಲ್ಲವಾದರೂ ಏನನ್ನೊ ನಿರೀಕ್ಷಿಸಿದಾರೆ. ಇನೂ ೬೦ ಗ್ರಹಗಳನ್ನು ಈ ತಂಡವು ವೀಕ್ಷಿಸತೊಡಗಿದೆ.
*****