ಬುದ್ಧ ಬಂದ ದಾರಿಯಲ್ಲಿ ನಾನು ಬಂದೆ
ಬುದ್ಧ ನಿಂದ ದಾರಿಯಲ್ಲಿ ನಾನು ನಿಂದೆ
ಬುದ್ಧ ಕೊನೆಗೆ ಹಿಡಿದ ದಾರಿ ಹಿಡಿಯದಾದೆ
ಅವನು ಕಂಡ ಬೆಳಕ ನಾನು ಕಾಣದಾದೆ //ಪ//
ಬುದ್ಧ ನುಡಿದ ಪ್ರತಿ ಮಾತು ಪಾರದರ್ಶಕ
ಅದಕೆ ವ್ಯಾಖ್ಯಾನ ಗ್ರಂಥ ಅನಾವಶ್ಯಕ
ನನ್ನ ಮೀರಿ ಆಡದ ಆ ಪ್ರತಿ ಮಾತು
ಅದಕೆ ಅವನ ಮೀರಿ ಇಲ್ಲ ಯಾರ ಮಾತು
ಬುದ್ಧ ಮಾತಾಡಿದ ಮಾತೃಭಾಷೆಯಲ್ಲಿ
ಅದಕೆ ನಿಘಂಟಿನ ನೆರವು ಯಾಕೆ ಹೇಳಿ?
ಬಲ್ಲವರೇ ಬಲ್ಲರು ಮಾತೃವಿನ ಹೃದಯ
ಅಲ್ಲಿಯ ಬೆಳವಣಿಗೆಯೆ ಅಲ್ಲವೆ ದಿಗ್ವಿಜಯ!
*****