ಕಳ್ಳ ನೋಟ ಬೀರಿ
ಎನ್ನ ಮನವ ಕದ್ದವ
ಎಲ್ಲಿಹ ಹೇಳೆ! ಸಖಿ ||
ಇರುಳು ಮರಳಿತು
ಚಂದ್ರಮ ಬಂದನು
ನೀನೇ ಪುಣ್ಯವತಿ ಚಕೋರಿ ||
ಚಂದ್ರಮ ನಿನಗಾಗಿ
ಪ್ರೀತಿ ಬೆಳದಿಂಗಳಾಗಿ
ಮುತ್ತನಿತ್ತನೇ ನೀನೇ ಪುಣ್ಯವತಿ ||
ವಿರಹದ ಬೇಗೆಯಲಿ
ರಾಧೆ ನಾ ಒಂಟಿಯಾದೆ
ಶ್ಯಾಮ ಬರಲಿಲ್ಲ ಚಂದ್ರಮುಖಿ ||
ಕಳಿಸಿಹೆ ಸಂದೇಶ
ಬರಲಿಲ್ಲ ಉತ್ತರ
ಬಾರದಿಹ ನೇಕೆ ಸಖಿ ||
ಯಾರ ಅರಿವಿಗೆ ಈ ಶಿಕ್ಷೆ
ಮನವು ಮಿಡಿದಿದೆ
ಎನ್ನ ಕೆಣಕದಿರು ಚಂದ್ರಮುಖಿ ||
ಕೊಳಲುನಾದ ಹೊಮ್ಮಿ ರೂಪವಾಗಿ
ಬೃಂದಾವನ ಪಿಸು ಮಾತಲಿ
ಅಣಕಿಸಿತೆನಗೆ ಕೇಳೆ ಸಖಿ ||
ಬೆಳದಿಂಗಳ ಸಂಜೆ
ಎನ್ನ ತಾಯ ಕರೆಗೆ
ಓಗೊಡುವ ಮುನ್ನ
ಅವನ ಕಾಣದೆ ನೊಂದನೇ ಸಖಿ ||
ಬಿಡಲಾರೆ ಶ್ಯಾಮ
ಹುಡುಕುವೆ ಹಗಲಿರುಳು
ಆತ್ಮನಂದನ ರಾಧೇಯನ್ನರಸ
ಕೇಳೆ ಸಖಿ ||
*****