ಮೋಹನ ಮುರಳಿ ಕೃಷ್ಣಾ
ಬೆಳದಿಂಗಳಿನಾ ಸಂಜೆಯಲಿ
ಕೊಳಲನಾದದ ಅಲೆಗಳು
ರಾಧೆಯ ಮನವನು ಕಾಡುವುವು
ಎಲ್ಲಿರುವೆ ಹೇಳು ಮುಕುಂದಾ ||
ಎಲ್ಲಿ ಹುಡುಕಿದರು ಕಾಣದಾಗಿರುವೆ
ಕಾಣುವಾತುರದಿ ರಾಧೆಯ ಕಂಗಳು
ಮುದ್ದಾಡುವಾತುರದಿ ಮನವು
ವಿರಹದ ವೇದನೆಯಲಿ ರಾಧೆಯೂ ||
ಚಂದ್ರ ತಾರಾ ಚಕೋರಿ
ಅಣಕಿಸಿ ನಿನ್ನ ಕೃಷ್ಣ ಎಲ್ಲಿ
ಎಂದು ಕೇಳುತಿಹರು
ಮೋಹನ! ಎಲ್ಲಿ ಕೃಷ್ಣ
ನೀನೆಲ್ಲಿರುವೆ ಹೇಳೋ ಮುಕುಂದ ||
ಬೃಂದಾವನ ಆ ನಂದನವನದಲಿ
ಅತ್ತ ಇತ್ತ ದಾರಿಯ ಹುಡುಕುತ
ಯಮುನೆ ನೀರು ತಣಿಯಲು
ಆಂ! ತೀರದೋ ದಾಹ
ನಿನ್ನ ಕಾಣದೇ ಕೃಷ್ಣಾಽಽಽ ||
ನೂರಾರು ಬಯಕೆ, ನೂರಾರು ಕನಸುಗಳ
ಕಟ್ಟಿ ಕೊಂಡಿಹಳೋ ರಾಧೆ ಕೇಳೋ
ರಾಧೆ ಎಂಬ ಆತ್ಮಕೆ ನಿನ್ನ
ಅನುರಾಗದ ರೂಪವಾಗಿಸೋ ಮುಕುಂದ ||
*****