ಕೇಳಿಸಿಕೊಳ್ಳುವವನಂತೆ ದೂರ ದೂರ ಬಹು ದೂರದ ಮೌನ…
ಉಸಿರು ಬಿಗಿ ಹಿಡಿದು ಕಿವಿಗೊಟ್ಟರೂ ನಮಗೆ ಕೇಳದ ನಿಶ್ಯಬ್ಧ.
ಅವನೊಂದು ನಕ್ಷತ್ರ. ಅಸಂಖ್ಯ ಬೃಹತ್ ತಾರೆಗಳು,
ನಮ್ಮ ಕಣ್ಣಿಗೆ ಕಾಣದೆ, ಅವನ ಸುತ್ತುವರೆದಿದೆ.
ಅವನೇ ಎಲ್ಲಾ. ಇಲ್ಲೆ ಸುಳಿದಾಡುತ್ತ ಅವನು
ನಮ್ಮನ್ನು ನೋಡಲೆಂದು ಕಾಯೋಣವೇನು ನಾವು? ಅವನಿಗೇನಿದೆ ಆ ಬಿಸಾತು?
ಕಾಲಿಗೆ ಬಿದ್ದರೂ, ನಾವು ಬೇಡಿದರೂ
ಅವನು ನಿಶ್ಚಲ, ನಿಶ್ಯಬ್ದ.. ಬೆಕ್ಕಿನಂತೆ.
ಲಕ್ಷವರ್‍ಷಗಳಿಂದ ಅವನೊಳಗೆ ಬೆಳೆದಿದೆ
ನಮ್ಮನ್ನು ಅವನತ್ತ ಸೆಳೆವ ಶಕ್ತಿ
ನಾವಿನ್ನೂ ಅನುಭವಿಸಬೇಕಾದದ್ದು ಮರೆತಿದ್ದಾನೆ,
ಅವನ ಅರಿವಿಗೆ ಬಂದದ್ದು ನಮ್ಮ ಅಳವಿನಾಚೆ ದೂರದಲ್ಲಿದೆ
*****
ಕಲಾವಿದ ರೋಡಿನ್ ನ ತೋಟದಲ್ಲಿ ಪುಟ್ಟ ಗುಡ್ಡದ ಮೇಲಿದ್ದ ಬುದ್ಧನ ವಿಗ್ರಹ ನೋಡಿ ೧೯೦೫ರಲ್ಲಿ ಬರೆದದ್ದು.
ಮೂಲ: ರೇನರ್ ಮಾರಿಯಾ ರಿಲ್ಕ್ / Rainer Maria Rilke