ಎಂದಿನಂತಲ್ಲ ಈ ದಿನ
ನನ್ನ ಪ್ರೀತಿಯ ಮೊದಲ ದಿನ
ಹೋಗು ಮನಸೆ ಆಕಾಶಕೆ
ಸಾಗು ನೀ ಬಹುದೂರಕೆ
ಯಾರ ಹಿಡಿತಕು ಸಿಲುಕದಲ್ಲಿ
ನನ್ನೊಲವಿನ ಸಂಗದಲ್ಲಿ
ಬೀಸು ಗಾಳಿಯೆ ಕಾಡುಗಳ
ಅಪರೂಪದ ನಾಡುಗಳ
ಏರು ಬೆಟ್ಟವೆ ಕೋಡುಗಳ
ಬಿಳಿ ಮಂಜಿನ ಬೀಡುಗಳ
ಮೀರು ಸಾಗರವೆ ತೀರಗಳ
ಸುತ್ತುವರಿದ ಮೇರೆಗಳ
ಕ್ರಮಿಸು ದಾರಿಯೆ ದೂರಗಳ
ನಕ್ಕು ಕರೆಯುವ ತಾರೆಗಳ
ಚೆಲ್ಲು ಬೆಳಕೇ ಕತ್ತಲಲಿ
ಎಲ್ಲಿ ಮನೆಯ ಹಿತ್ತಿಲಲಿ
ಮೂಡು ಶಬ್ದವೇ ಮೌನದಲಿ
ಕಾಡು ಸುಮಧುರ ಗಾನದಲಿ
*****