ಒಮ್ಮೆ ನದಿಯ ಈಚೆಯ ತೀರ ಹರಿಯುವ ನೀರಿನ ಕನ್ನಡಿಯಲ್ಲಿ ಅಚೆಯ ತೀರದ ಸೌಂದರ್ಯವನ್ನು ಮೆಚ್ಚಿಕೊಂಡಾಗ ಮದುವೆಗೆ ನಿಂತ ಶೀಲವಂತ ಮದುಮಗಳಂತೆ ಕಂಡಿತು. ಈಚೆಯ ತೀರ “ನನ್ನ ಕೈ ಹಿಡಿ” ಎಂದು ಅಂಗಲಾಚಿತು. “ನಿನ್ನ ತೀರದಲ್ಲಿ ಗದ್ದಲ, ಗೊಂದಲ, ಪ್ರವಾಸೋದ್ಯಮ, ವ್ಯಾಪಾರಕ್ಕೆ ಸಿಕ್ಕಿ, ಸೊರಗಿ ನೀನು ಮಾಲಿನ್ಯದಲ್ಲಿ ಕುರೂಪಿಯಾಗಿದ್ದೀ. ನಾನು ಎಂದಿಗೂ ಸೇರಲಾರೆ. ನಾನು ಪ್ರಕೃತಿಯ ವಿಕೃತಿಗೆ ಒಲೆಯಲಾರೆ” ಎಂದಿತು ಆಚೆಯತೀರ.
ನದಿ ಯಾವುದನ್ನು ಕೇಳಿಸಿಕೊಳ್ಳದೆ ಹರಿಯುತ್ತಲೇ ಇತ್ತು.
*****