ಅವನೊಬ್ಬ ದೊಡ್ಡ ಕುಡುಕ. ಕುಡಿದು, ಕುಡಿದು ಸ್ವರ್ಗ ಸೇರಿದ. ಮನೆಯ ತುಂಬಾ ಕುಡಿದು ಖಾಲಿ ಮಾಡಿದ ಬಾಟಲ್ ಇಟ್ಟಿದ್ದ. ಮಕ್ಕಳಿಗೆ ಅಪ್ಪನ ನೆನಪು ಬೇಡವಾಗಿತ್ತು. ಅವನ ದೊಡ್ಡ ಮಗಳು ಖಾಲಿ ಸೀಸೆಗೆ ಬಣ್ಣ ಬಳಿದು ಸುಂದರ ಹೂದಾನಿ ಮಾಡಿದಳು. ಎರಡನೇಯ ಮಗಳು ಖಾಲಿಸೀಸೆಯನ್ನು ಚೆನ್ನಾಗಿ ತೊಳೆದು ಸ್ವಚ್ಚವಾದ ನದಿ ನೀರನ್ನು ತುಂಬಿಟ್ಟಳು. ಮೂರನೇಯ ಮಗಳು ಖಾಲಿ ಸೀಸೆಯನ್ನು ಚೂರು ಚೂರು ಮಾಡಿ ಹೂಳಿಟ್ಟು ತಂದೆಯ ನೆನಪಿಗೆ ಗೋರಿ ಕಟ್ಟಿದಳು. ಹೆಂಡತಿ ಮಾತ್ರ ಖಾಲಿ ಸೀಸೆಯಲ್ಲಿ ತನ್ನ ಕಂಬನಿ ತುಂಬಿ ಎದಗವಚಿಕೊಂಡಳು.
*****
Related Post
ಸಣ್ಣ ಕತೆ
-
ಅಜ್ಜಿ-ಮೊಮ್ಮಗ
ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…
-
ಡಿಪೋದೊಳಗಣ ಕಿಚ್ಚು…
ಚಿತ್ರ: ವಾಲ್ಡೊಪೆಪರ್ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…
-
ವಿಷಚಕ್ರ
"ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…
-
ಸಾವಿಗೊಂದು ಸ್ಮಾರಕ
ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…
-
ಆನುಗೋಲು
ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…