ಹಿಂದೂ ದೇಶ ದೊಡ್ಡದು
ಹಿಂದೂ ಧರ್ಮವೆಂದೂ ಹಿರಿದು||
ಎಲ್ಲ ಧರ್ಮಿಯರೊಡನೆ ಬೆರೆತು
ಬಾಳುವ ಹಿರಿಮೆ ನಮ್ಮದು||
ನೂರು ಕುಲ, ನೂರು ಜಾತಿ
ನೂರು ಭಾಷೆ, ಹತ್ತಾರು ಧರ್ಮ |
ಆದರಿಲ್ಲಿ ಎಲ್ಲರೊಂದೇ ಎಂಬ ಭಾವ
ಜಾತಿ ವಿಷಬೀಜವ ಬಿತ್ತಲಿಲ್ಲಿ
ಬೆಳೆಯದೆಂದೆದಿಗೂ ಮೀರಿ ಸತ್ಯ ಧರ್ಮ||
ಉತ್ತರದ ಕಣಿವೆ ಕಾಶ್ಮೀರದಿಂದ
ದಕ್ಷಿಣದ ಕನ್ಯಾಕುಮಾರಿವರೆಗೂ|
ಪೂರ್ವದ ಮೇಘಾಲಯದಿಂದ
ಪಶ್ಚಿಮದ ಗಾಂಧಿಧಾಮವರೆಗೂ
ಹಬ್ಬಿದ ದೇಶ ನಮ್ಮದು|
ನಮ್ಮ ಕಾಯೆ ತಲೆ ಎತ್ತಿ
ನಿಂತಿಹುದು ಮಹಾ ಹಿಮಾಲಯ
ದೇಶವನು ರಕ್ಷಿಸೆ ಸುತ್ತುವರೆದಿಹುದು
ಹಿಂದೂ ಮಹಾಸಾಗರ, ಬಂಗಾಳಕೊಲ್ಲಿ||
ಗಂಗೆ, ಯಮುನೆ, ಸಿಂಧು
ಗೋದಾವರಿ, ಬ್ರಹ್ಮಪುತ್ರ|
ಕಾವೇರಿ, ಕಪಿಲ, ತುಂಗ, ಭದ್ರ
ಹರಿದಿಲ್ಲಿ ಬೆಳೆಸಿಹರು ಸಸ್ಯಕಾಶಿಯ ವನಸಿರಿ|
ರಾಮಾಯಣ ಮಹಾಭಾರತ
ಉದಯಿಸಿಹುದೀ ನೆಲದಲ್ಲಿ |
ಸಪ್ತಋಷಿಗಳ ನಾಡು, ಸಪ್ತನದಿಗಳ ಬೀಡು
ವಿಷ್ಣು ತನ್ನ ಹತ್ತು ಅವತಾರನೆತ್ತಿಹುದೇ ಇಲ್ಲಿ
ಶಿವನವತರಿಸಿ ಭೂಕೈಲಾಸವೆನಿಸಿಹುದಿಲ್ಲಿ||
*****