ಜಗತ್ಪ್ರಸಿದ್ಧ ಗೋಪುರ ಉಳಿಸಲು ಶತಪ್ರಯತ್ನ

ಜಗತ್ಪ್ರಸಿದ್ಧ ಗೋಪುರ ಉಳಿಸಲು ಶತಪ್ರಯತ್ನ

ಸುಮಾರು ೮೦೦ ವರ್‍ಷಗಳಷ್ಟು ಹಿಂದೆ ಕಟ್ಟಲಾದ ಇಟಲಿಯ ಪೀಸಾ ಗೋಪುರ ಪ್ರತಿ ವರ್‍ಷ ಒಂದು ಮಿ.ಮೀಟರ್‌ನಷ್ಟು ವಾಲುತ್ತಿದ್ದು, ಅದನ್ನು ರಕ್ಷಿಸುವುದು ಒಂದು ಸಮಸ್ಯೆಯಾಗಿದೆ. ಅದಕ್ಕಾಗಿ ಅಭಿಯಂತರು ಸತತವಾಗಿ ಪ್ರಯತ್ನಿಸುತ್ತಿದ್ದಾರೆ. ತಾತ್ಕಾಲಿಕವಾಗಿ ಅದನ್ನು ತಂತಿ-ಹಗ್ಗದಿಂದ ಬಿಗಿದು ನಿಲ್ಲಿಸಲು ಪ್ರಯತ್ನಿಸಲಾಗಿದೆ. ಪ್ರವಾಸಿಗರನ್ನು ಆಕರ್‍ಷಿಸುವ ಈ ಗೋಪುರ ಸರ್‍ಕಾರಕ್ಕೆ ಆದಯವನ್ನು ತರುತ್ತಿರುವುದು.

ದಿನಪ್ರತಿ ಇಟಲಿಯ ಪೀಸಾ ನಗರದ ದರ್‍ಶನಕ್ಕೆ ಪ್ರವಾಸಿಗರ ದಂಡೇ ಮುಗಿಬೀಳುತ್ತದೆ. ಅವರ ಆಕರ್‍ಷಣೆಯ ಮುಖ್ಯ ಕಾರಣ ಅಲ್ಲಿರುವ ಜಗತ್ಪ್ರಸಿದ್ಧ ಪೀಸಾ ಗೋಪುರ. ನಿರ್‍ಮಾಣವಾದಾಗಿನಿಂದ ಸದಾ ಸುದ್ದಿಯಲ್ಲಿರುವ ಈ ಗೋಪುರ ಈಗ ಮತ್ತೆ ಚರ್‍ಚೆಯ ಕೇಂದ್ರ ಬಿಂದುವಾಗಿದೆ. ಕಾರಣವಿಷ್ಟೇ, ಅದು ವರ್‍ಷಕ್ಕೆ ಒಂದು ಮಿಲಿಮೀಟರ್‌ನಷ್ಟು ವಾಗಲುತ್ತಿದೆ! ಹಾಗೆಯೇ ಬಿಟ್ಟರೆ ಮುಂದೊಂದು ದಿನ ಉರುಳಬಹುದು. ಗೋಪುರದ ವಾಲುವಿಕೆಯನ್ನು ತಡೆಯಲು ಇಟಲಿಯ ಎಂಜಿರಯರುಗಳ ತಂಡ ಶತಪ್ರಯತ್ನ ನಡೆಸುತ್ತಿದೆ.

ಪರಿಚಯ: ಬಿಳಿಯ ಅಮೃತ ಶಿಲೆಯಲ್ಲಿ ನಿರ್‍ಮಾಣವಾದ ಪೀಸಾ ಗೋಪುರ ಇಟಲಿಯ ಪ್ರತಿಷ್ಠಿತ ಚಿಹ್ನೆಯಾಗಿದೆ. ಗೋಪುರವು ೯ ಅಂತಸ್ತುಗಳನ್ನು ಹೊಂದಿದ್ದು ೫೫ ಮೀಟರ್‍ ಎತ್ತವಿದೆ. ತಳದ ಗೋಡೆಗಳ ದಪ್ಪ ೪ ಮೀಟರ್‌ಗಳು. ಮೇಲಿನ ಅಂತಸ್ತು ಒಂದನ್ನು ಬಿಟ್ಟರೆ ಉಳಿದೆಲ್ಲ ಅಂತಸ್ತುಗಳಲ್ಲಿ ೩೦ ಕಂಬಗಳಿವೆ.

ಕ್ರಿ.ಶ. ೧೧೭೪ ರಲ್ಲಿ ಬೋನಾನೋ ಎಂಬ ಶಿಲ್ಪಿಯಿಂದ ಗೋಪುರದ ನಿರ್‍ಮಾಣ ಕೆಲಸ ಮುಗಿದಿದ್ದು ೧೩೫೦ರಲ್ಲಿ. ಹೀಗೆ ಈ ಗೋಪುರಕ್ಕೆ ೮೦೦ ವರ್‍ಷಗಳ ಇತಿಹಾಸವಿದೆ. ಗೋಪುರದ ಒಟ್ಟು ತೂಕ ೧೪,೫೦೦ ಟನ್ಗಳು. ಗೋಪುರದ ಮೇಲೇರಲು ೩೦೦ ಮೆಟ್ಟಿಲುಗಳಿವೆ. ಮೇಲೆ ನಿಂತು ಸುಮಾರು ೧೦ ಕಿ.ಮೀ ದೂರದ ಪ್ರದೇಶವನ್ನು ವೀಕ್ಷಿಸಬಹುದಾಗಿದೆ.

ಗೋಪುರ ನಿರ್‍ಮಿಸುವಾಗ ಅದೊಂದು ಓಲು ಗೋಪುರವಾಗಬಹುದೆಂದು ಯಾರೂ ಊಹಿಸಿರಲಿಲ್ಲ. ಮೂರನೇ ಅಂತಸ್ತಿನವರೆಗೆ ಗೋಪುರ ನಿರ್‍ಮಾಣವಾದಾಗ ಓಲತೊಡಗಲು ಶುರುವಾಯಿತಂತೆ. ಗೋಪುರದ ಮೊದಲಿನ ರಚನೆಯನ್ನು ಸ್ವಲ್ಪ ಬದಲಿಸಿ ನಿರ್‍ಮಾಣದ ಕೆಲಸ ಪೂರ್‍ತಿ ಮಾಡಲಾಯಿತಂತೆ.

ಸಮಸ್ಯೆ: ಗೋಪುರ ದಕ್ಷಿಣ ಭಾಗಕ್ಕೆ ವಾಲುತ್ತಿದ್ದು ಉತ್ತರದ ಭಾಗ ನೆಲದಿಂದ ಮೇಲೇಳುತ್ತಿದೆ. ಗೋಪುರವು ೫.೫ ಡ್ರಿಗ್ರಿಗಳಷ್ಟು ವಾಲುತ್ತಿದ್ದು, ತುದಿಯ ವಾಲುವಿಕೆಯು ೫.೪೪ ಡಿಗ್ರಗಳು. ಕಳೆದ ನೂರು ವರ್‍ಷಗಳಲ್ಲಿ ಗೋಪುರವು ೩೦ ಸೆಂ.ಮೀ ನಷ್ಟು ವಾಲಿದ್ದು ದಾಖಲೆಯಿಂದ ಹೇಳಬಹುದು. ೧೯೮೫ರಲ್ಲಿ ಒಮ್ಮೆಲೆ ಅದು ೨ ಮಿ.ಮೀ. ವಾಲಿತು! ಹೀಗೆ ವಾಲುತ್ತಿದ್ದರೂ ಅದು ಬೀಳದಿರಲು ಕಾರಣ ಇಂದಿನವರೆಗೂ ಗುರುತ್ವ ಕೇಂದ್ರದಿಂದ ಲಂಬ ರೇಖೆಯು ಗೋಪುರದ ತಳದೊಳಗೆ ಇರುತ್ತದೆಯಾದ್ದರಿಂದ ಎನ್ನಲಾಗಿದೆ.

ವಾಲುವಿಕೆಗೆ ಕಾರಣವೇನಿದ್ದಿರಬಹುದು?

ಗೋಪುರ ವಾಲಲು ಕಾರಣವೇನಿದ್ದಿರಬಹುದು? ಗೋಪುರದ ತಳಪಾಯದಲ್ಲಿ ಮರಳನ್ನು ಹಾಕಿರುವುದೇ ಗೋಪುರ ವಾಲಲು ಕಾರಣ ಎನ್ನಲಾಗುತ್ತಿದೆ.

ಎಂಜಿನಿಯರುಗಳ ತಂಡವೊಂದು ಹಲವು ಅತಿ ವಿಶಿಷ್ಟ ಉಪಕರಣಗಳ ಮತ್ತು ವಿದ್ಯುತ್ ಚಾಲಿತ ಸೆನ್ಸಾರ್‌ಗಳ ಸಹಾಯದಿಂದ ಮಾಹಿತಿಯನ್ನು ಸಂಗ್ರಹಿಸಿ ಕಂಪ್ಯೂಟರ್‌ಗಳ ಸಹಾಯದಿಂದ ನಡೆಸಿದ ಅಧ್ಯಯನದ ಪ್ರಕಾರ ಗೋಪುರದ ಕೆಳಗಿನ ನೆಲದಲ್ಲಿಯ ಅಂತರ್‍ಜಲ ಮಟ್ಟವು ಹೆಚ್ಚಾಗುತ್ತಿದ್ದಂತೆ ಅಥವಾ ಉಷ್ಣತೆ ಕಡಿಮೆಯಗುತ್ತಿದ್ದಂತೆ ಗೋಪುರ ವಾಲುತ್ತಿದೆ. ಹೀಗಾಗಿ ಗೋಪುರವು ಸೆಪ್ಟೆಂಬರ್‍ ತಿಂಗಳಿಂದ ಜನವರಿಯವರೆಗೆ ದಕ್ಷಿಣದ ಕಡೆಗೆವಾಲುತ್ತಿದೆ. ಈ ಉಪಕರಣಗಳು ಕಂಡುಕೊಂಡ ಇನ್ನೊಂದು ಪ್ರಮುಖ ಮಾಹಿತಿಯೆಂದರೆ ಸೂರ್‍ಯ ಉದಯಿಸಿ ಅಸ್ತಂಗತವಾಗುವರೆಗೆ ೫ ಚಾಪ (ಆರ್‍ಕ್) ಸೆಕೆಂಡ್‌ಗಳಷ್ಟು ವಾಲುತ್ತಿದೆ. ಸೂರ್‍ಯನ ಶಾಖದಿಂದ ಗೋಪುರದ ಭಾಗವು ಬಿಸಿಗೊಂಡ ಕಾರಣ ವಿರುದ್ಧ ದಿಕ್ಕಿನಲ್ಲಿ ವಾಲುತ್ತಿರಬಹುದೆಂದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.

ಪರಿಹಾರ: ವಾಲುತ್ತಿರುವ ಪೀಸಾ ಗೋಪುರವನ್ನು ತಡೆದು ನೇರವಾಗಿ ನಿಲ್ಲಿಸುವುದು ಎಂಜಿನಿಯರುಗಳ ಸಾಹಸದ ಕೆಲಸವಾಗಿದೆ. ಅದಕ್ಕಾಗಿ ಅವರು ಶತಪ್ರಯತ್ನ ನಡೆಸುತ್ತಿದ್ದಾರೆ. ಟರಿನ್ ವಿಶ್ವವಿದ್ಯಾಲಯದ ಎಂಜಿನಿಯರಿಂಗ ವಿಜ್ಞಾನದ ಪ್ರೊಫೆಸರ್‍ ಮಿಚಲಿ ಜಮಿಯೋಕೋಸ್ಕಿ ಅವರೊಂದಿಗೆ ಎಂಜಿನಿಯರುಗಳ ತಂಡವೇ ಕಾರ್‍ಯದಲ್ಲಿ ತೊಡಗಿದೆ. ಈ ಕೆಲಸಕ್ಕಾಗಿ ಇಟಲಿ ಸರಕಾರ ಸಧ್ಯಕ್ಕೆ ೭ ಮಿಲಿಯನ್ ಡಾಲರ್‍ ಹಣ ಬಿಡುಗಡೆ ಮಾಡಿದೆ. ಪ್ರೊ. ಮಿಚಲಿ ಅವರು ೧೯೬೨ರಿಂದ ಗೋಪುರದ ವಾಲುವಿಕೆಯ ಕುರಿತು ಅಧ್ಯಯನ ನಡೆಸುತ್ತಿದ್ದಾರೆ.

ಒಂದು ನಿರ್‍ದಿಷ್ಟ ಯೋಜನೆ ಸಿದ್ಧಪಡಿಸುವವರೆಗೆ ವಾಲುವಿಕೆ ನಿಲ್ಲಿಸಲು ಗೋಪುರದ ಮೂರನೇ ಅಂತಸ್ತಿಗೆ ಕ್ಷಿತಿಜೀಯ ಕೇಬಲ್ ಅಳವಡಿಸಲು ತೀರ್‍ಮಾನಿಸಲಾಗಿದೆ. ೫೫ ಮೀಟರ್‍ ಎತ್ತರಕ್ಕೆ ಪ್ಲಾಸ್ಟಿಕ್ ಲೇಪಿತ ಉಕ್ಕಿನ ಪಟ್ಟಿಗಳಿಂದ ಆಧಾರ ನೀಡಿ ಅಲ್ಲಿಂದ ಎರಡು ಉಕ್ಕಿನ ಕೇಬಲ್‌ಗಳನ್ನು ತಂತಿಹಾಕಿ, ೧೧೦ ಮೀಟರ್‍ ದೂರ (ಗೋಪುರದ ತಳದಿಂದ) ದಲ್ಲಿ ಹೂಳಲಾಗುವುದು.

ಗೋಪುರದ ನಡುಪಟ್ಟೆಯಿಂದ ಉಕ್ಕಿನ ಕೇಬಲ್‌ಗಳು ಅದರ ತಳಪಾಯದಲ್ಲಿ ೮೩೦ ಟನ್ ಸೀಸದ ಇಟ್ಟಿಗೆಗಳನ್ನು ಮತ್ತು ಉಕ್ಕಿನ ಆವರಣದ ಕೆಳಭಾಗದ ಪರಿಧಿ (ಸುತ್ತಳತೆ) ಹಾಕುವ ಮತ್ತು ಗೋಪುರದ ತಳಪಾಯದ ಮರಳು ತೆಗೆದು ಕಲ್ಲು ಹಾಕುವ ಯೋಜನೆಯಿದೆ.

ಓಲುಗೋಪುರ ಎಂದೇ ಪ್ರವಾಸಿಗರನ್ನು ಆಕರ್‍ಷಿಸುವ ಪೀಸಾ ಗೋಪುರವನ್ನು ಮುಂದೊಂದು ದಿನ ನೇರವಾಗಿ ನಿಲ್ಲಿಸಲು ಸಾಧ್ಯವಾಯಿತೆನ್ನಿ. ಆಗದು ಮೊದಲಿನ ಆಕರ್‍ಷಣೆ ಕಳೆದುಕೊಳ್ಳುವುದೋ ಏನೋ ಎನ್ನುವ ಅನುಮಾನವೂ ಕೂಡ ತಂತ್ರಜ್ಞರ ತಲೆಯಲ್ಲಿ ಸುಳಿಯುತ್ತಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತಿಹಾಸ
Next post ಸಂತ

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…