ಭೌತಿಕವಾಗಿ ವಯಸ್ಸಾದಂತೆ ಬೆಳೆಯುತ್ತಲೇ ಹೋಗಿದ್ದರೆ ಈಗಿನ ಮನೆಗಳ ಬಾಗಿಲುಗಳು ೬೦-೭೦ ಅಡಿ ಎತ್ತರವಾಗಿರಬೇಗಿತ್ತು. ನಿಸರ್ಗದ-ದತ್ತವಾಗಿ ಮಾನವನ ಶರೀರದ ಬೆಳವಣಿಗೆಯ ನಿಯಂತ್ರಣವು ನಿಗದಿತ ವಯಸ್ಸಿಗೆ ನಿಂತು ಹೋಗುತ್ತದೆ. ಅತಿ ಕುಳ್ಳರಾಗಿ ಬೆಳೆದಿರುವ ಉದಾಹರಣೆಗಳು ಇವೆ.
ಆಗ ತಾನೆ ಜನಿಸಿದ ಶಿಶುಗಳು ಸಾಮಾನ್ಯವಾಗಿ ೫೦ ಸೆಂ.ಮೀ. ಉದ್ದವಿದ್ದರೆ ಮುಂದೆ ೨೦ ವರ್ಷಗಳಲ್ಲಿ ೧.೭ ಮೀಟರ್ ಬೆಳೆಯುತ್ತದೆ. ನಾವೇಕೆ ನಮ್ಮ ವಯಸ್ಸಿನ ಪರ್‍ಯಂತರ ಬೆಳಯುವುದಿಲ್ಲ? ಎಂಬ ಪ್ರಶ್ನೆ ಏಳದಿರದು. ಈ ಪ್ರಶ್ನೆಗೆ ಶರೀರ ವಿಜ್ಞಾನಿಗಳು ನಮ್ಮ ಶರೀರದಲ್ಲಿ ಬೆಳವಣಿಗೆಯನ್ನು ನಿಯಂತ್ರಿಸುವ “ಎಂಡೋಕೈನ್” ಗ್ರಂಥಗಳಿದ್ದು ಕುತ್ತಿಗೆಯಲ್ಲಿನ ಥೈರಾಯ್ಡ್ ಮಿದುಳಿಗೆ ಹೊಂದಿಕೊಂಡಿರುವ ಪಿಟ್ಯುಟರಿ, ಎದೆಯಲ್ಲಿ ಥೈಮಸ್ ಹಾಗೂ ಲೈಂಗಿಕ ಗ್ರಂಥಿಗಳು ಮೂಳೆಯಲ್ಲಿನ ಗ್ರಂಥಿಗಳು ಮೂಳೆಯಲ್ಲಿನ ಗ್ರಂಥಿಗಳ ಬೆಳವಣಿಗೆ ಹತೋಟಿಯಲ್ಲಿಡುತ್ತವೆ. ಇವುಗಳ ಪ್ರಭಾವ ಹದ್ದು ಮೀರಿದರೆ ನಮ್ಮ ಕೈ ಕಾಲು ಭುಜ ಮುಂತಾದ ಅಂಗಗಳು ರಾಕ್ಷಸೋಪಾದಿಯಲ್ಲಿ ಬೆಳದು ಬಿಡುತ್ತವೆ. ಮತ್ತು ಇವು ಅಗತ್ಯಾನುಸಾರ ವರ್ತಿಸಿದ್ದರೂ ಮನುಷ್ಯ ಕುಳ್ಳಗಾಗುತ್ತಾನೆಂದು ವಿವರಣೆಗೊಡುತ್ತಾರೆ.
ಎಳೆಯತನದಲ್ಲಿ ಥೈಮಸ್ ಗ್ರಂಥಿಗಳ ಚಟುವಟಿಗೆ ತೀವ್ರವಾಗಿ ಸಾಗಿ ೧೩-೧೪ ರ ವಯಸ್ಸಿನಲ್ಲಿ ಕ್ಷೀಣಿಸುತ್ತವೆ. ನಂತರ ಲೈಂಗಿಕ ಗ್ರಂಥಿಗಳು ಕ್ರಿಯಾಶೀಲಗೊಳ್ಳುತ್ತವೆ. ಇದರ ಪರಿಣಾಮವಾಗಿ ವ್ಯಕ್ತಿಯ ಎತ್ತರ ೨೨ನೇ ವಯಸ್ಸಿನಲ್ಲಿ ಸ್ಥಿರಗೊಳ್ಳುತ್ತದೆ. ಒಂದು ವೇಳೆ ಲೈಂಗಿಕ ಗ್ರಂಥಿಗಳ ಉತ್ಪತ್ತಿ ಮೊದಲೇ ಆದರೆ ಎತ್ತರ ಬೆಳೆಯುವಲ್ಲಿ ಆಗುವುದಿಲ್ಲ. ಒಂದು ವೇಳೆ ಈ ಲೈಂಗಿಕ ಗ್ರಂಥಿಗಳು ಬಹಳ ತಡವಾಗಿ ಸೃಜಿಸಲಾರಂಭಿಸಿದರೆ ವ್ಯಕ್ತಿಗಳು ಬೃಹದಾಕಾರವಾದ ಎತ್ತರಕ್ಕೆ ಬೆಳೆಯುತ್ತಾರೆ. (ಥೈಮಸ್‌ನಿಂದಾಗಿ) ಒಂದು ಸಮೀಕ್ಷೆಯಂತೆ ೨೫ ನೇ ವಯಸ್ಸಿನ ನಂತರವೂ ವ್ಯಕ್ತಿಗಳು ಎತ್ತರ ಅತ್ಯಲ್ಪ ಪ್ರಮಾಣದಲ್ಲಿ ಏರುಮುಖವನ್ನೇ ಕಾಣುತ್ತದೆ. ಗರಿಷ್ಠ ಎತ್ತರವನ್ನು ನಾವು ತಲುಪುವುದು ೩೫-೪೦ ರ ಪ್ರಾಯದಲ್ಲಿ ವೈಶಿಷ್ಯವೆಂದರೆ ೪೦ ವರ್ಷ ವಯಸ್ಸಿನ ನಂತರ ನಾವು ಹತ್ತು ವರ್ಷಗಳಿಗೆ ೧೨ ಮಿಲಿ ಮೀಟರ್‌ನಂತೆ ಕುಳ್ಳರಾಗುತ್ತೇವೆ. ಕೀಲುಗಳಲ್ಲಿರುವ ‘ಕಾರ್ಟರೇಜ್’ ಎಂಬ ವಸ್ತು ಕುಗ್ಗುವುದೇ ಈ ನ್ಯೂನ್ಯತೆಗೆ ಕಾರಣವಾಗಿದೆ ಎಂದು ಶರೀರ ವಿಜ್ಞಾನಿಗಳ ಅಭಿಪ್ರಾಯವಾಗಿದೆ.
*****