ನಮ್ಮ ತಲೆಮಾರು ಅತ್ಯಂತ ಅದೃಷ್ಟಶಾಲಿ ತಲೆಮಾರುಗಳಲ್ಲೊಂದೆಂದೂ ಹಾಗು ೧೯೪೭ರಲ್ಲಿ ಸ್ವಾತಂತ್ರ್ಯ ಬಂದಾದ ಮೇಲೆ ಕರ್ನಾಟಕವನ್ನು ಪುಟಿದೇಳುವ ಪ್ರಗತಿಶೀಲ ರಾಜ್ಯವನ್ನಾಗಿ ಕಟ್ಟುವ ಮೂಲಕ ಭಾರತವನ್ನು ಮಹಾರಾಷ್ಟ್ರವನ್ನಾಗಿ ರೂಪಿಸಲು ಹಲವು ದಶಕಗಳಿದ್ದವು.
೧೯೫೬ ರಲ್ಲಿ ಒಟ್ಟುಗೂಡಿದ ಕರ್ನಾಟಕ ಹುಟ್ಟಿದಾಗ ನಮಗೆ ಗೊತ್ತಿದ್ದು ಅದು ದೀರ್ಘಕಾಲದ ನಂತರ, ೫.೫.೧೭೯೯ರ ನಂತರ ಸುಮಾರು ೧೫೭ ವರ್ಷಗಳ ಬಳಿಕ ಎಂದು. ಅದು ೪ನೇ ಆಂಗ್ಲ ಮೈಸೂರು ಯುದ್ಧದ ನಂತರ ಆ ಯುದ್ಧ ಸಂಘಟಿತ ರಾಷ್ಟ್ರಗಳ ಮಹಾಯುದ್ಧದಂತೆ ಬ್ರಿಟಿಷ್ ಸೈನಿಕರು ಭಾರತದ ಇತರ ರಾಜ್ಯಗಳ ಸೈನಿಕರು ಒಟ್ಟಾಗಿ ನಡೆಸಿದ್ದು ಮೈಸೂರು ರಾಜ್ಯದ ಮೇಲೆ.
ಕರ್ನಾಟಕ ರಾಜ್ಯ ಹೊಸದಾಗಿ ರೂಪಗೊಂಡದ್ದು ಕನ್ನಡಿಗರಿಗೆ ಅತ್ಯಂತ ಹರ್ಷ ಹಾಗು ಹೆಮ್ಮೆಯ ವಿಷಯ.
ಆದರೆ ಬಹುಬೇಗ ನಮಗೆ ಅರಿವಾಯಿತು, ಸಂಯುಕ್ತ ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ, ಅವುಗಳಿಗೆ ಶೀಘ್ರ ಪರಿಹಾರದ ಆವಶ್ಯಕತೆ ಇದೆ. ಏಕೆಂದರೆ ಒಂದು ಒಂದೂವರೆ ಶತಮಾನಗಳ ಕಾಲ ಈ ಹೊಸದಾಗಿ ಸೇರಿದ ಭಾಗಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದವು ಮತ್ತು ಅವು ನಮ್ಮತಲೆಮಾರಿಗೆ ತೀವ್ರತರ ಪಣ ಒಡ್ಡುತ್ತವೆ ಎಂದು. ಅದರ ಜವಾಬ್ದಾರಿ ನಮ್ಮ ತಲೆಮಾರಿನದೆಂದು ಶೀಘ್ರ ಪರಿಹಾರ ಕಾರ್ಯವಾಗ ಬೇಕೆಂದು ನಾನು ಸಂಪೂರ್ಣವಾಗಿ ಮನಗಂಡಿದ್ದೆ. ೧೭೯೯ರ ಉತ್ತರಾರ್ಧ ಕಾಲಮಾನದಲ್ಲಿ ಮೈಸೂರು ರಾಜ್ಯವನ್ನು ವಿಭಜಿಸಿ ಅತರ್ಕವಾಗಿ ಬೇರೆ ಬೇರೆ ಹಂಚಿಹೋದ ಈ ಕನ್ನಡ ಭಾಗಗಳನ್ನು ಪಡೆದುಕೊಂಡ ರಾಜ್ಯಗಳು ನಿರ್ಲಕ್ಷಿಸಿದ್ದವು. ಹಂಚಿಹೋದ ಭಾಗಗಳನ್ನೆಲ್ಲ ಅತಾರ್ಕಿಕವಾಗಿ ಹಂಚದೆ ಒಂದುಗೂಡಿಸಿ ಅದನ್ನು ಬೆಂಗಳೂರು ಪ್ರಾಂತ್ಯವೆಂಬ ಹೆಸರಿನಲ್ಲಿ ಒಂದು ಆಡಳಿತದಲ್ಲಿ ಇರಿಸಬೇಕಾಗಿತ್ತು. ಆದರೆ ಬ್ರಿಟಿಷರು ತಪ್ಪಿದರು ಮತ್ತು ಬೆಂಗಳೂರು ಪ್ರಾಂತ್ಯ ಮಾಡಲಿಲ್ಲ.
ವರ್ಷ ವರ್ಷ ತಿಂಗಳು ಪೂರ್ತ ರಾಜ್ಯೋತ್ಸವಗಳ ಸಮಾರಂಭಗಳನ್ನು ನಾನು ಆನಂದಿಸಿದೆ. ಆದರೆ ಹೊಸದಾಗಿ ರೂಪಿತವಾದ ಭಾಗಗಳ ಸಮಸ್ಯೆಗಳ ಬಗ್ಗೆ ಸದಾ ಚಿಂತಿತನಾಗಿದ್ದೆ. ಹೊಸದಾಗಿ ರೂಪಗೊಂಡ ರಾಜ್ಯ ಭಾವನಾತ್ಮಕ ಏಕತೆ, ಸಾಂಸ್ಕೃತಿಕ ಏಕತೆ, ಸಂಪನ್ಮೂಲ ಏಕತೆ, ಹಾಗೂ ರಾಜಕೀಯ ಏಕತೆಗಳ ಆವಶ್ಯಕತೆಯಲ್ಲಿತ್ತು ಮತ್ತು ಬೆಂಗಳೂರಿನಲ್ಲಿನ ಕೆಲಸಗಳಲ್ಲಿ ಪಾಲಿನ ಖಾತರಿ ಇರಬೇಕಿತ್ತು.
ರಾಜ್ಯದ ಐವಿಪಿ ಪರಿಮಾಣ ತುಂಬಾ ಕಡಿಮೆ ಇತ್ತು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸೂಚಿಕೆಯೂ ತೀರಾ ಕಡಿಮೆಯಾಗಿತ್ತು. ವಾಣಿಜ್ಯೋದ್ಯಮದ ಕೊರತೆಯಿತ್ತು. ಕರ್ನಾಟಕದಲ್ಲಿ ರಾಷ್ಟ್ರ್‍ಈಯ ಹೆದ್ದಾರಿಗಳಲ್ಲೂ ಡಾಂಬರೀಕರಿಸಿದ ಭಾಗ ಕೇವಲ ೮ ರಿಂದ ೧೦ ಅಡಿಗಳಾಗಿದ್ದವು. ಇತರ ರಾಜ್ಯಗಳಲ್ಲಿ ೨೦ ಅಡಿಯ ದಾಗಿತ್ತು. ಕರ್ನಾಟಕ ನಿಧಾನವಾಗಿ ಚಲಿಸುವ ಮೀಟರ್ಗೇಜ್ ರೈಲು ಸಂಚಾರ ದೊರೆಯುತ್ತಿತ್ತು. ಪುಣೆ-ಬೆಂಗಳೂರು ಮೀಟರ್‌ಗೇಜ್ ರೈಲುರಸ್ತೆಯನ್ನು ಪುಣೆ- ಕೊಲ್ಲಾಪುರದವರೆಗೆ ಮಾತ್ರ ಬ್ರಾಡ್ಗೇಜ್ ಆಗಿ ಪರಿವರ್ತಿಸಲಾಯಿತು. ಕೊನೆಯ ಪಕ್ಷ ಹುಬ್ಬಳ್ಳಿಯವರೆಗಾದರೂ ಬ್ರಾಡ್ಗೇಜ್ ಆಗಿಸಲು ಒತ್ತಡ ತರುವಂತಹವರಾರು ನಮ್ಮತಲೆಮಾರಿನವರು ಇರಲಿಲ್ಲ. ಇದು ನಮ್ಮತಲೆಮಾರಿಗೆ ಒಂದು ದೊಡ್ಡ ಆಘಾತವಾಗಿತ್ತು. ಮತ್ತು ಫಲಿತಾಂಶವಾಗಿ ನಾವು ರಾಷ್ಟ್ರ್‍ಈಯ ಅವಮಾನವನ್ನು ಅನುಭವಿಸಿದವು. ನೆಹರು ಕಾಲದಲ್ಲಿ ನೆಹರೂರವರಿಗೆ ಕೇವಲ ೮ ರಾಜ್ಯಗಳು ಪ್ರಿಯವಾಗಿದ್ದವು. ಆದರೆ ತುಂಬಾ ದುರದೃಷ್ಟಕರವಾಗಿ ಕರ್ನಾಟಕ ಅಂತಹ ರಾಜ್ಯಗಳಲ್ಲೊಂದಾಗಿರಲಿಲ್ಲ. ನಮ್ಮ ತಲೆಮಾರಿನವರು ತುಂಬಾ ಶ್ರಮವಹಿಸಿದ್ದರೆ ನೆಹರೂ ಕಾಲದ ೯ನೇ ರಾಜ್ಯವಾಗಿರಬಹುದಾಗಿತ್ತು.
ಹೊಸದಾಗಿ ರೂಪಿತವಾದ ಕರ್ನಾಟಕ ರಾಜ್ಯದ ಬಹುಸಂಖ್ಯೆ ಸಮಸ್ಯೆಗಳು ಪರಿಹಾರವಿಲ್ಲದೆ ಉಳಿದಿತ್ತು. ಅದು ಗಿರಿ ಸಮಸ್ಯೆ ಆಗರಿಬಹುದು, ನದಿಗಳ ಸಮಸ್ಯೆ ಆಗಿರಬಹುದು ಅಥವ ನಿರುದ್ಯೋಗ ಸಮಸ್ಯೆ ಅಥವ ಜನ ವಲಸೆಯ ಸಮಸ್ಯೆಯಾಗಿರಬಹುದು.
ನಮ್ಮ ಕಾಲದ ಕನ್ನಡ ಜನ ಬ್ಯಾಂಕ್ ಸೇವೆಗಳಿಗೆ ಮತ್ತು ರೈಲ್ವೇ ಸೇವೆಗಳಿಗೆ ದೂರ ಸಂಪರ್ಕ ಸೇವೆಗಳಿಗೆ ನಡೆಯುತ್ತಿದ್ದ ಅಖಿಲ ಭಾರತ ಸೇವಾ ಪರೀಕ್ಷೆಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುತ್ತಲೇ ಇರಲಿಲ್ಲ. ನಮ್ಮ ತಲೆಮಾರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಚ್ಛೆಯುಳ್ಳ ಕನ್ನಡಿಗರು ಸ್ಫೈರ್ಯದಿಂದ ಭಾಗವಹಿಸಲು ಸಹಾಯಕವಾಗುವಂತೆ ಒಳ್ಳೆಯ ಹಾಗು ಪರಿಣಾಮಕಾರಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಿಲ್ಲ.
ಕಾಲ ಕಳೆಯಿತು. ನಮ್ಮ ತಲೆಮಾರು ಕೊನೆಯಾಯಿತು. ನಾನೆಂದು ವಿರಮಿಸಲಾಗಲಿಲ್ಲ. ಏಕೆಂದರೆ ನನ್ನ ತಲೆಮಾರಿನ ನಿಷ್ಕ್ರಿಯತೆ ನನ್ನನ್ನು ಸದಾ ಕಾಡಿಸುತ್ತಿತ್ತು.
೨೧ನೇ ಶತಮಾನ ಬಂದಿದೆ. ಒಂದು ಶುಭ ಬೆಳಗಿನಲ್ಲಿ ಓದುತ್ತಿದ್ದೆ. ನಾನು ಆಶ್ಚರ್ಯಗೊಂಡೆ. ನಾವು ಪ್ರೀತಿಸುತ್ತಿದ್ದ ಶ್ರೀ ಲಾಲುಪ್ರಸಾದ್‌ಯಾದವ್ ಕನ್ನಡ ಜನರನ್ನು ಕೊಳಕು ಜನರೆಂದು ದೂರಿದ್ದಾರೆ ಹಾಗೆ ಇನ್ನೊಂದು ಕಡೆ ನಾವು ಪ್ರೀತಿಸುವ ಶ್ರೀ ಹರೀಶ್ ಕನ್ನಡ ಜನರನ್ನು ಹೇಡಿಗಳೆಂದು ದೂರಿದ್ದಾರೆ. ಈ ದೋಷಾರೋಪಣೆಗಳು ಈಗಿನ ತಲೆಮಾರಿನವರನ್ನು ಕುರಿತಾಗಿದ್ದಾದರೂ ಅಂತಹ ಪರಿಸ್ಥಿತಿಗೆ ಮೂಲ ಕಾರಣ ನಮ್ಮತಲೆಮಾರು ಎಂದು ನಾನು ಚೆನ್ನಾಗಿ ಬಲ್ಲೆ ಹಾಗು ನಾನು ಮಾಡಿದ ಒಳ್ಳೆಯ ಕೆಲಸವೆಂದರೆ ಇಂದಿನ ತಲೆಮಾರಿಗೆ ತಪ್ಪೊಪ್ಪಿಗೆ ಸಲ್ಲಿಸಿದೆ.
ನಮ್ಮ ತಲೆಮಾರು ಅತ್ಯಂತ ಅದೃಷ್ಟಶಾಲಿ ತಲೆಮಾರಿನವರಿರಬಹುದು ಆದರೆ ಚರಿತ್ರೆಯಲ್ಲಿ ಅದು ಸೋತ ತಲೆಮಾರೆಂದು ಕನ್ನಡ ಜನತೆಯನ್ನು ನಿಷ್ಕರ್ಷಕ ಕಾಲದಲ್ಲಿ ಸೋಲಿಸಿದ ತಲೆಮಾರೆಂದು ಎನಿಸಿಕೊಳ್ಳುತ್ತದೆ.
*****