ಜೋರಾಗಿ ಮಳೆ ಸುರಿಯುತ್ತಿತ್ತು. ಮರವು ತೊಯ್ದು ತೊಪ್ಪೆಯಾಗಿ ಹನಿ ತುಂಬಿ ನಿಂತಿತ್ತು. ಒಂದೊಂದು ಎಲೆಯ ಮೇಲೂ ಪುಟ್ಟಪುಟ್ಟ ಹನಿಗಳು ಕುಳಿತ್ತಿದ್ದವು. ಮಳೆ ನಿಂತೊಡನೆ ಎಲ್ಲಾ ರೆಂಬೆಗಳು ಗಾಳಿಯಲ್ಲಿ ಅಲ್ಲಾಡಲು, ಅದು ಮೋಡಕ್ಕೆ ಹೇಳಿತು “ನೀ ಮಳೆ ಸುರಿಸಿ ನಿಂತರು ನಾನ್ನಿನ್ನು ಮಳೆ ಸುರಿಸುತ್ತಿರುವೆ” ನೋಡು ಎಂದು ಜಂಭದಿಂದ ಹೇಳಿತು.
ಆಗ ಮೋಡ ಗುಡುಗಿ ಹೇಳಿತು- “ಜಂಭ ಬೇಡ. ಎಷ್ಟು ಹೊತ್ತು ನಿನ್ನಾರ್ಭಟ!” ಎಂದಿತು. ಹನಿಗಳೆಲ್ಲಾ ಉದರಿ ಹೋಗಲು ಮರ ಮೌನವಾಯಿತು.
*****