ನಚ್ಚಿನ ಸೋದರಿ

ನಚ್ಚಿನಾ ಸೋದರಿಯೆ ಕಡುಜಾಣೆ ನೀನಮ್ಮ
ಸ್ವಚ್ಛವಾಗಿದೆ ಮನವು ಮುದವಾಯಿತಮ್ಮ
ಅಚ್ಯುತಾನಂತದೊಳು ಎನಿಬರೆನಿಬರು ಉಂಟೊ?
ಸಚ್ಚರಿತ ಮಾನವರು ಶೀಲ ಸುಗುಣಾನ್ವಿತರು

ನಿನ್ನ ನುಡಿ ಹಿತವಿಹುದು ನಿನ್ನ ನಡೆ ಸೊಗವಿಹುದು
ನಿನ್ನ ಶ್ರಾವ್ಯದ ಗಾನ ಮಧುರವಾಗಿಹುದು
ಬಿನ್ನಾಣ ಬೆಡಗಿಲ್ಲ ಸಿಡುಕು ದುಡುಕುಗಳಿಲ್ಲ
ಸನ್ನುತಾಂಗಿಯೆ ರಸಿಕೆ ಸರಳ ಮಾನಸಳಮ್ಮ

ಸಕಲ ಕಲೆಗಳ ಒಳಗೆ ಅಕಳಂಕ ತುಂಬಿಹನು
ವಿಕಟ ಮಾನಸರಿದನು ತಿಳಿಯದಿಹರು
ಪ್ರಕೃತಿ ದೇವಿಯ ನೋಡೆ ನೃತ್ಯಗೈದಿಹಳಿಲ್ಲಿ
ಸುಖವಲ್ಲದೇ ಉಂಟೆ ದುಃಖವೀ ಜೀವನಿಗೆ

ಸಿರಿ ನಮಗೆ ಸ್ಥಿರವಲ್ಲ ಕಲ್ಪನೆಯ ಕೈಮರವು
ಕೊರತೆ ನಮಗೊಂದಿಲ್ಲ ತಿಳಿದಿಲ್ಲಿ ನೋಡೆ
ಹರಿಯ ಕೀರ್ತನೆ ಮಾಡಿ ವಿಜಯ ಧ್ವಜವನು ಹೂಡಿ
ಪರಮ ಸಂತೋಷದೊಳು ನಲಿವುದೇ ಸುಖವಮ್ಮ

ಯಾತ್ರಿಕರು ನಾವೆಲ್ಲಾ ನಿಯಮದಿಂ ಬಂದಿಹೆವು
ಕ್ಷೇತ್ರವೆಮಗೀ ಧರೆಯು ಕೇಳಮ್ಮ ತಂಗಿ
ಸತ್ಯಶೋಧನೆ ಇಲ್ಲೆ, ನಾಕನರಕಗಳಿಲ್ಲೆ
ನಿತ್ಯ ನಿರ್ಮಲಸ್ವಾಮಿ ಪ್ರತ್ಯಕ್ಷವಹುದಿಲ್ಲೆ

ನಾನು ನೀನೆಂದೆಂಬೊ ದ್ವೈತ ಭಾವಗಳಿಲ್ಲೆ
ಜ್ಞಾನಿ ತಾನರಿತಿರುವ ಅದ್ವೈತವಿಲ್ಲೆ
ಧ್ಯಾನಸಾಧನೆ ಇಲ್ಲೆ, ಫಲವನುಂಬುವುದಿಲ್ಲೆ
ಜನಕಜೆಯು ಅನುಭವಿಪ ಆನಂದವಿಹುದಿಲ್ಲೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅದೇ ಕವಿತೆ
Next post ಸರಳ ಜೀವನ

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…