ನಮೋ ದೇವಿ ನಮೋ ತಾಯಿ

ನಮೋ ದೇವಿ, ನಮೋ ತಾಯಿ ಕನ್ನಡ ಭುವನೇಶ್ವರೀ
ನಮ್ಮ ಭಾಗ್ಯಗಳನು ಬೆಳೆಸಿ ಸಲಹೇ ರಾಜೇಶ್ವರೀ

ತುಂಗಭದ್ರೆ ಕಾವೇರಿಯ
ಅಮೃತಧಾರೆ ಹರಿಸಿ
ಜೋಗ ಗಗನಚುಕ್ಕಿಗಳಲಿ
ಬೆಳಕಿನ ಗಣಿ ತೆರೆಸಿ,
ಶ್ರೀಗಂಧದ ವನಗಳಿಂದ
ಪರಿಮಳಗಳ ಕರೆಸಿ
ಸಲಹುವೆ ನೀ ಮಕ್ಕಳನು
ಪ್ರೀತಿಯಿಂದ ಹರಸಿ

ನಿನ್ನ ಭವ್ಯಕಲ್ಪನೆಗೆ
ಸಾಕ್ಷಿ ಮಹಾಗೊಮ್ಮಟ
ಕೌಶಲ್ಯಕೆ ಬೇಲೂರಿನ
ದಿವ್ಯ ಕಲಾಕಮ್ಮಟ;
ಪಂಪ ಬಸವ ನಾರಣಪ್ಪ
ನೇಯ್ದ ಕಾವ್ಯಚಿತ್ರ
ಸಾರುತ್ತಿವೆ ದೇಶಕೆ ನೀ
ಹಿರಿಯಳೆಂಬ ಸತ್ಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇನ್ನೆಷ್ಟು ದಿನ ಹೀಗೆ?
Next post ಪ್ರೀತಿ

ಸಣ್ಣ ಕತೆ

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…