ಹೊಸಿಲಲಿ ಬರೆದಿದೆ ಹೊಸ ಹಾರೈಕೆ

ಹೊಸಿಲಲಿ ಬರೆದಿದೆ ಹೊಸ ಹಾರೈಕೆ
ಹೂ ಬಿಸಿಲಿನ ಚಿತ್ತಾರದಲಿ,
ನಿಜವಾಗಿಸು ಬಾ ನವವರ್ಷವೆ ನೀ
ದಿನ ದಿನ ಪದ ವಿನ್ಯಾಸದಲಿ

ಗಿಡಮರಬಳ್ಳಿಯ ಹೂಬಟ್ಟಲಲಿ
ಭೃಂಗದ ಊಟದ ತಟ್ಟೆಯಲಿ
ನಗುತಿದೆ ಚೆಲುವೇ ನಂದನದೊಲವೇ
ಪರಿಮಳವಾಡುವ ತೊಟ್ಟಿಲಲಿ!

ಬೇಸಿಗೆ ಮರಗಳ ಬೀಸುವ ಚಾಮರ
ಹಾಸಿವೆ ಹೂಗಳ ಹಾದಿಯಲಿ,
ಮುಗಿಲಿನ ಮೇಲೆ ಹಗಲಿನ ಲೀಲೆ
ಸೋಸಿದೆ ಬೆಳಕನು ನೆಲದಲ್ಲಿ.

ಅತಿಗಳಿಗೇರದ ಮಿತಿಗಳ ಮೀರದ
ಪಥ ಮೂಡಲಿ ಪ್ರತಿ ಬಾಳಿನಲಿ,
ಹೊಸ ಸಂವತ್ಸರ ಹರಸಲಿ ಬಾಳನು
ಕೃತಿಯಾಗುವ ಥರ ನಾಳಿನಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳದಿಂಗಳು
Next post ಲೂಟಿವಿದ್ಯೆ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…