‘ನಾರಿ ನಾನೆಂದಕಟ ರೂಪಗೋಸಾಯಿ೧ ನನಗೀಯನೆನುವನೇಂ ದರ್ಶನದ ಭಾಗ್ಯಂ? ಹೆಮ್ಮೊಗನ ನೋಡದೇನವನ ವೈರಾಗ್ಯಂ? ಏತರೀ ವ್ರತವೊ!’ – ಎಂದಳು ಮಿರಾಬಾಯಿ ೪ ‘ಇವನಾದೊಡಂ ಗಂಡೆ? ಗೋಕುಲದೊಳೆಲ್ಲ ಹೆಂಗಸಲ್ಲದೆ ಗಂಡಸಿಲ್ಲಿ ಬರಸಲ್ಲ! ಅರ...

ಧಾರವಾಡ ತಾಯೆ ನಿನ್ನದೆಂತ ಮಾಯೆ! ಚಿತ್ತ ತಣಿಸುವ ಸತ್ಯ ಸಾರುವ ತತ್ತ್ವಲೇಪದ ಕಾವ್ಯ ಕರ್ಮಕೆ ಮಡಿಲು ಆದ ತಾಯೆ-ಆಹ ನಿನ್ನದೆಂತ ಮಾಯೆ! ಲೋಕ ಮೆಚ್ಚುವ ಸತ್ವ ಮಿಂಚುವ ಆದಿ ಪಂಪ ಆ ಕುವರವ್ಯಾಸರ ನಿನ್ನ ಹೊನ್ನ ಸಿರಿ ಗರ್ಭದಿ ಅರಳಿಸಿ ಜಗಕೆ ತಂದೆಯಲ್ಲೆ ...

ನನಗೆ ಆಗ ವಯಸ್ಸು ಇಪ್ಪತ್ತೆರಡು, ಹೆಣ್ಣು ಮಕ್ಕಳ ಕಾಲೇಜದಲ್ಲಿ ಬಿ.ಎ. ಕ್ಲಾಸದಲ್ಲಿದ್ದೆ. ಕಾಲೇಜಕ್ಕೆ ಒಂದು ವಸತಿಗ್ರಹವಿತ್ತು. ಅಲ್ಲಿ ನಾನಿದ್ದೆನು. ನನ್ನ ಸ್ವಭಾವ “ವಿಲಕ್ಷಣ” ಎನ್ನುವರು. ಅದಕ್ಕಂತಲೇ ಏನೋ ವಸತಿಗ್ರಹದಲ್ಲಿದ್ದರೂ ...

ಹಾಡು – ೧ ದಿಟ್ಟಿಸಿ ನೋಡುತಲಿದ್ದಳು ಕನ್ನಿಕೆ ಡಯೋನಿಸಸ್ಸನು ಸತ್ತಾಗ, ಅವನ ಮೈಯಿಂದ ಹೃದಯವ ಕಿತ್ತು ಕೈಯೊಳು ಅದನ್ನು ಹಿಡಿದಾಗ, ಹಾಡಿದರೆಲ್ಲಾ ಕಲಾದೇವಿಯರು ಮಹಾಯುಗಾದಿಯ ಚೈತ್ರದಲಿ, ದೇವರ ಸಾವೂ ಆಟ ಎಂಬಂತೆ ಕೂಡಿ ಹಾಡಿದರು ಖುಷಿಯಲ್ಲಿ. ...

ದಾವಣಗೆರೆಗೆ ಬಂದ ನಂತರದಲ್ಲಿ ನೆನಪುಗಳಾಗಿ ನನ್ನ ಕಣ್ಣುಗಳ ಮುಂದೆ ಸುಳಿದಾಡುವ ಯಾವ ಕನಸುಗಳನ್ನು ಕಂಡಿರಲಿಲ್ಲ. ಆದರೆ ಕಾಣದ ದೇವರಿಗೆ ರಾತ್ರಿ ಮಲಗುವಾಗಲೆಲ್ಲಾ ಬೇಡುತ್ತಿದ್ದುದು ಏನೆಂದರೆ, ನನ್ನ ಕೊತ್ತಂಬರಿ ಕಟ್ಟಿನಂತಿದ್ದ ಗುಂಗುರು ಕೂದಲು ಮೋಟ...

ಇಂತಿಹುದು ರಾಜಹಂಸದ ಮರಣ. ಸುಳಿಗಾಳಿ- ಯುಸಿರುವದು ಕಿವಿಮಾತಿನಲಿ,-ಬಂತು ಕೊನೆಯೆಂದು. ಧವಲಗಿರಿಯಿಂದಾಚೆ ಬಳಿಸಾರಿ ಬರುವಂದು ರೆಕ್ಕೆಗಿಹ ಬಲವೆಲ್ಲ ಕುಂದಿಹುದು. ಮೈದಾಳಿ ಬೆಳಕೆ ಬಂತೇನೆಂಬ ರೂಪು ಮುದುಡಿದೆ. ಬಾಳಿ ಮಾನಸದಿ ಪಟ್ಟ ಸುಖಗಳ ಪ್ರಜ್ಞೆಯೊ...

ಬನ್ನಿ ಗಿಳಿಗಳ ಚಲುವ ಹೂಗಳೆ ಚಂದ ಲೋಕವ ಕಟ್ಟುವಾ ಚಿನ್ನ ಲೋಕವ ಚಲುವ ಲೋಕವ ಜೀವಲೋಕವ ನಗಿಸುವಾ ಸಾಕು ಕಲಿಯುಗ ಸಾಕು ಕೊಲೆಯುಗ ಯಾಕೆ ಚಿಂತೆಯ ಸಂತೆಯು ಸಾಕು ಗೂಳಿಯ ಹಳೆಯ ಕಾಳಗ ಅಕೋ ಅರಳಿದೆ ಶಾಂತಿಯು ಮೌನಧಾಮಕೆ ಪ್ರೇಮಧಾಮಕೆ ಏಳಿರೇಳಿರಿ ಯಾತ್ರೆಗೆ...

“ಅವ್ವಾ, ನಾ ನಿನ್ನ ಮಗಳು ದೇಹದ ಮುಗುಳು, ನಿನ್ನ ಕನಸಿನ ಅರಳವ್ವಾ ನಾ ಬರಿ ಭ್ರೂಣವಲ್ಲ. ನನ್ನ ಹಡೆದವ್ವ ನಿನ್ನ ಮೈ ಗಂಧದಿಂದ ಕಿತ್ತುಕೊಂಡರೆ ನಾ ಸತ್ತೆನವ್ವಾ ಚೆಲ್ಲಬೇಕೆ ಉಡಿಯ ಮುತ್ತು ನಾ ಬರಿ ಭ್ರೂಣವಲ್ಲ ಕೇಳವ್ವ.. ಕಂಡಿಲ್ಲ ನಾನಿನ್ನೂ...

ಕೊಕ್ರೆ ಮೀನ್ಗೆ ವೊಂಚ್ ಆಕ್ದಂಗೆ ಕಪ್ಪೇಗ್ ಆವು ಕಾಯ್ಕೊಂಡಂಗೆ ನಿಂತ್ಕಂಡೌನೆ ಮುನ್ಯ! ಯೆಂಡಾ ಮಾರೋ ಗೆಣ್ಯ! ಕುಡಿಯೋರ್‍ನ್ ಇಡದಿ ಸುಲದಾಕೋಕೆ ಮಡಗೌನ್ ಎಂಡದ್ ಮನೆಯ! ೧ ಕುಡಿಯೋರ್‍ಗ್ ಎಂಗಿದ್ರೇನು! ಬುಂಡೆ ತುಂಬಿದರಾಯ್ತ್ ಅಂದ್ ಮುನ್ಯ ಯೆಂಡಕ್ ನೀ...

1...45678...10

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...