ಮರೆಯದಿರಣ್ಣ ಕನ್ನಡವ; ಜನ್ಮಕೊಟ್ಟ ಈ ಕನ್ನಡವ ಮಾತು ಕೊಟ್ಟ ನುಡಿಗನ್ನಡವ ತುತ್ತು ಕೊಟ್ಟ ತಾಯ್ಗನ್ನಡವ ಹಳಿಯದಿರಣ್ಣ ಕನ್ನಡವ; ತಾಯ್ಮೊಲೆ ಉಣಿಸಿದ ಕನ್ನಡವ ವಿದ್ಯೆಯ ನೀಡಿದ ಕನ್ನಡವ ಸಭ್ಯತೆ ಕಲಿಸಿದ ಕನ್ನಡವ ಅಳಿಸದಿರಣ್ಣ ಕನ್ನಡವ; ಶತಶತಮಾನದ ಕನ್ನ...

ಮಲೆನಾಡ ಹಸಿ ಹಸಿ ಭೀಕರತೆಯೂ ಮತ್ತು ಬಯಲು ಸೀಮೆಯ ಒಣ ಒಣ ಬಯಲೂ ಸಂಕೀರ್ಣಗೊಂಡು ಸೃಷ್ಟಿಯಾಗಿರುವ, ಅತ್ತ ನಗರದ ಸಂಸ್ಕೃತಿಯನ್ನೂ ಇತ್ತ ಹಳ್ಳಿಯ ನೇರ ನಿಷ್ಠುರ ಸತ್ಯಗಳನ್ನೂ ಹೊಂದಿರದ ವಿಕೃತ ಜನರಿರುವ ಈ ಮಂಡಲಿಗೆ ದೇಶಕ್ಕೆಲ್ಲಾ ಬಂದಂತೇ ಯುಗಾದಿಯು ಬ...

ಮೈಸೂರ ಮಲ್ಲಿಗೆಯಾ ಮುಡಿದು ಕಣ್ಸನ್ನೆಯಾ ನೋಟದಲಿ ಪಿಸು ಮಾತಿನಾ ಮೋಡಿಯಲಿ ಚಲುವ ರಾಶಿಯ ಬೀರುತ ಮನ ಸೆಳೆದಾ ನಲ್ಲೆಽಽಽಽ ಕಾದಿರಲು ನಲ್ಲನಿಗಾಗಿ ಬೆಳದಿಂಗಳು ಮೂಡಿತು ಹೊನ್ನ ಮಳೆ ಸುರಿಯಿತು ಗರಿಗೆದರಿ ಕುಣಿದಾ ನವಿಲು ಅವಳ ನೋಟಕ್ಕೆ ನಾಚಿತ್ತುಽಽಽಽ ...

ಮಾನವನ ಮಂಕುಗವಿಸುವ ಯೋಚನೆಗೆ ಮರುಗಿ ಹೊರಹರಿದನವನು ಅಂತರವ ಕ್ಷಮಿಸಿ, ಗೆಲಿಲಿಯನ್ ಗಲಭೆ ಗೊಂದಲಗಳಲ್ಲಿ; ಬ್ಯಾಬಿಲೋನಿನ ನಕ್ಷತ್ರಪ್ರಭೆ ಸೃಷ್ಟಿಸಿತು ಆಕಾರವಿರದ ಕಲ್ಪಕ ಕತ್ತಲನ್ನು; ಸತ್ತ ಕ್ರಿಸ್ತನ ನೆತ್ತರಿನ ಕಂಪು ಕೊಚ್ಚಿತು ಎಲ್ಲ ದೈವಿಕ ಸಹನಶ...

ಬಿಳಿಯ ಕೋಟುಧರಿಸಿ, ಸೀರೆಯುಟ್ಟು, ಕಾಲೇಜಿನ ಕ್ಯಾಂಪಸ್‌ಗೆ ಹೆಜ್ಜೆಯಿಟ್ಟಾಗ ರೋಮಾಂಚನವಾಗಿತ್ತು. ಡಾಕ್ಟರಾಗುವ ಅವ್ವನ ಕನಸನ್ನು ಆಗಲೇ ‘ನೆರವೇರಿಸಿ ಬಿಟ್ಟೆ’ ಎನ್ನುವಷ್ಟು ಸಂಭ್ರಮವಾಗಿತ್ತು. ಉತ್ಸಾಹದಿಂದ ಅನಾಟಮಿ ವಿಭಾಗಕ್ಕೆ ಕಾಲಿ...

ನೋಟವನು ರಂಜಿಸಳು. ಬಗೆಬಗೆಯ ಹೂವಿಲ್ಲ ಬಣ್ಣದಾಟವ ಹೂಡಲೆನೆ. ಹಚ್ಚಹಸಿರಿರುವ ಸೀರೆಕುಪ್ಪಸ ತೊಟ್ಟು ಮಂದಗತಿಯಿಂದಿರುವ ಪಲ್ಲವಾಂಗಿಯು ಇವಳು. ಭೃಂಗ-ಕೇಲಿಯದಿಲ್ಲ ಇವಳ ಬಳಿಯಲಿ ಇವಳ ಹುಬ್ಬು ತಿಳಿಯದು ಬಿಲ್ಲ ಮಣಿತವನು, ಕಾಮಕಸ್ತೂರಿಯಾ ತೆನೆಗಿರುವ ಕಂ...

ನಾನೆ ಪಾರ್‍ವತಿ ನಾನೆ ಗಿರಿಜೆ ಶಿವ ಸಮರ್‍ಪಣೆ ಕೊಡುಶಿವಾ ನಾನೆ ಗೌರಿ ಗಂಗೆ ಶೈಲಜೆ ಶುಭ ಸಮರ್‍ಪಣೆ ಪಡೆಶಿವಾ ನೀನೆ ಸದ್ಗುರು ನೀನೆ ಶಿಕ್ಷಕ ನೀನೆ ನಂಬಿದ ವಲ್ಲಭಾ ನೀನೆ ಆತ್ಮಾರಾಮ ಪ್ರಿಯಕರ ನೀನೆ ತ್ರಿಭುವನ ವರಪ್ರಭಾ ಕೋ ಸಮರ್‍ಪಣೆ ಆತ್ಮ ತರ್‍ಪಣ...

ನಿಸಾರ್ ಅಹಮದ್ ಸಾಹಿತ್ಯವನ್ನು ಒಂದು ಭಿನ್ನ ಪ್ರವಾಹದ ಓದು ಎಂದು ಭಾವಿಸಲು ಸಜ್ಜಾಗಿ ನಿಂತ ಮನಃಸ್ಥಿತಿಯೇ ಬೆಳೆದುಬಿಟ್ಟಿದೆ. ಇದಕ್ಕೆ ಮುಖ್ಯ ಕಾರಣ ಬರೆಹಗಾರ ಮುಸ್ಲಿಂ ಎನ್ನುವುದು. ವಾಸ್ತವವಾಗಿ ಕವಿಯೊಬ್ಬ ತನ್ನದೇ ಆದ ನುಡಿಗಟ್ಟು ಮತ್ತು ಭಾವದ ಸ...

ಜೀತಾ ಮಾಡಿ ಕಾಸ್ ಕೆರ್‍ಕೊಂಡಿ ಅಟ್ಟೀಲ್ ಎಡ್ತೀನ್ ಮೋಸೋಸ್ಕಂಡಿ ಏನೋ ಕುಡಿಯಾಕ್ ಬಂದ್ರೆ- ಸೇರಿಗ್ ಸೇರು ನೀರ್‍ನೆ ಬೆರಸಿ ಕಾಸ್ ಕೇಳ್ತೀಯ ಮೋಸ ಮರಸಿ ಸಾಚಾ ಮನ್ಸರ್ ಬಂದ್ರೆ? ೧ ನನ್ ಕೈ ಕಾಸು! ನಂಗ್ ಔಳ್ ಎಡ್ತಿ! ಮೋಸ ಮಾಡ್ತೀನ್ ನಾನ್ ಔಳ್ಗ್ ಇಡ್...

ಸ್ಫೂರ್‍ತಿಯ ಮೂರ್‍ತಿಗೊಂಡಂತೆ ಕಂಡವು ಆನೆ ಕುದುರೆ ಹಾ- ವುಗೆ, ನಿನ್ನ ಹೊಸ್ತಿಲವ ದಾಟಿ ಇಲ್ಲಡಿಯಿಟ್ಟೆ; ಬಿಜಯ ಮಾಡಿಸಿದೆ ವೈಭವದಿ, ದಿಗ್ವಿಜಯ ಮಾ- ಡುವೆ, ಕುರುಹಗಳ ತೋರಿ ಹೇಳುತಿಹೆಯಾ, ನಲ್ಲ! ನನಸೆಂದು ತೋರಿ ಹಾರೈಸಿದುದು ಕನಸಾಗೆ, ಕನಸು ಕನ್ನ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...