ಮೈಸೂರ ಮಲ್ಲಿಗೆಯಾ
ಮುಡಿದು ಕಣ್ಸನ್ನೆಯಾ
ನೋಟದಲಿ ಪಿಸು ಮಾತಿನಾ
ಮೋಡಿಯಲಿ ಚಲುವ ರಾಶಿಯ
ಬೀರುತ ಮನ ಸೆಳೆದಾ ನಲ್ಲೆಽಽಽಽ
ಕಾದಿರಲು ನಲ್ಲನಿಗಾಗಿ
ಬೆಳದಿಂಗಳು ಮೂಡಿತು
ಹೊನ್ನ ಮಳೆ ಸುರಿಯಿತು
ಗರಿಗೆದರಿ ಕುಣಿದಾ ನವಿಲು
ಅವಳ ನೋಟಕ್ಕೆ ನಾಚಿತ್ತುಽಽಽಽ
ಹೆಣ್ಣು-
ಬೆಳದಿಂಗಳ ಬಾಳ ಹುಣ್ಣಿಮೆಯ
ಮೂಡುವಾಸೆಯಲಿ ತುಂತುರು ತುಂತುರು
ಮಳೆಹನಿಯಲಿ ತನನತಾನನ
ಧರೆಯು ತಣಿಯಿತು ನನ್ನ ಮನದಿ
ನಿನ್ನ ಗಾನಮೌನವಾಗಿ ವಿರಹಿಸಿತು
ಮೂಡಿದಾ ಮಲ್ಲಿಗೆ ದಳಗಳಲಿ
ನಿನ್ನ ನಗೆಯ ಬಿಂಬವನಿರಿಸಿ
ಸುಮವಾಗಿ ಅರಳಿ ದುಂಬಿಯಾಗಿ
ಬಾರದಿರುವೆ ಏಕೋ ನಾ ಕಾಣೆನೆ
ಬಾಳ ದೀವಿಗೆಯ ಜ್ಯೋತಿಯಾಗಿಹೆ
ಮನವ ತುಂಬಿದೆ ಜೊತೆಯಾಗಿ
ನಲಿವ ಆಸೆಯಲಿ ನಿನ್ನ ಕಾಣುವ
ಬಯಕೆ ಹೊಮ್ಮಿದೆ ಏಕೋನಾ ಕಾಣೆನೆ
ತಾಯೆ ಚಾಮುಂಡಿಯೆ ನಮಿಸಿ
ಬೇಡುವೆ ನಲ್ಲ ನಿಲ್ಲದ ಬಾಳು
ಚೆಂದವೇನೆ ಹರಸು ತಾಯೆ
ಕರ ಮುಗಿಯುವೆ ವರುಷಗಳು ಉರುಳಿ
ಹರುಷ ತರಲಿ ನನ್ನ ಬಾಳಲ್ಲಿ
ಗಂಡು-
ನಮ್ಮೂರ ಸೌಧದಲಿ
ನಿಮ್ಮೂರ ಮಂಟಪದಲಿ
ತುಂಬು ತೊಟ್ಟಿಲ ತೂಗೆ
ಬೆಳದಿಂಗಳ ಬಾಲೆಯೆ
ಹಸಿರುಟ್ಟ ಸಿರಿದೇವಿ
ಮಡಿಲ ಮೈ ಸೂರ ಸೊಬಗಲ್ಲಿ
ಪ್ರೇಮದರಸಿಯೆ
ಇಂಚರದಿ ರಸದೌತಣ ನೀಡೆ
ನನ್ನ ನಲ್ಲೆಽಽಽಽ
ಜೊತೆಗೂಡಿ ಹೋಗೋಣ ತಾಯ
ಪಾದಕೆ ಎರೆಗೊಣ ಹಕ್ಕಿಗಳಾಗಿ
ಬಾನಂಚಲಿ ಸೇರೋಣ ನಲಿಯೋಣ
ನನ್ನ ನಲ್ಲೆಽಽಽಽ
*****